ADVERTISEMENT

ದಿನ ಭವಿಷ್ಯ: 25 ನವೆಂಬರ್ 2025 ಮಂಗಳವಾರ– ಮಧುರ ಖಾದ್ಯಗಳ ಭೋಜನ ನಿಮ್ಮದಾಗುವುದು

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ನವೆಂಬರ್ 2025, 18:31 IST
Last Updated 24 ನವೆಂಬರ್ 2025, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬುದ್ಧಿವಂತಿಕೆಯನಡೆ-ನುಡಿಯಿಂದ ಎಲ್ಲ ಸಮಸ್ಯೆಗಳು ಹಿಮದಂತೆ ಕರಗಲಿವೆ.
  • ವೃಷಭ
  • ಸ್ವಯಂಕೃತ ಅಪರಾಧದ ಬಗ್ಗೆ ಎಚ್ಚರವಿರಲಿ. ಸರಿ ತಪ್ಪುಗಳ ನಿರ್ಣಯವು ಕಷ್ಟಕರ ಎನಿಸುವುದು. ಪರಿಶ್ರಮದಿಂದ ಬಹುದಿನಗಳ ಅಥವಾ ಹಿರಿಯರ ಕನಸು ನನಸಾಗಿಸುವಿರಿ. ಉತ್ತಮ ಸಂಗೀತ ಕೇಳಿ.
  • ಮಿಥುನ
  • ವರಿಷ್ಠ ಅಧಿಕಾರಿಗಳಿಗೆ ವಿಶೇಷ ಸ್ಥಾನಮಾನ, ಅಧಿಕಾರಗಳು ಪ್ರಾಪ್ತವಾಗಲಿವೆ. ಮಳೆಯ ಕಾರಣದಿಂದ ಮನೆಯ ದುರಸ್ತಿಯ ಕೆಲಸಗಳನ್ನು ಮಾಡಿಸುವ ಅನಿವಾರ್ಯ ಬರಲಿದೆ.
  • ಕರ್ಕಾಟಕ
  • ಸುತ್ತಮುತ್ತದ ವಾತಾವರಣವು ಶಾಂತಿ ಕೆಡಿಸುವ ಕೆಲಸವನ್ನು ಮಾಡುವುದು. ಅನಾರೋಗ್ಯದ ಸಮಯದಲ್ಲೂ ಲವಲವಿಕೆಯ ಓಡಾಟ ಇತರರ ಅಸೂಯೆಗೆ ಕಾರಣವಾಗುತ್ತದೆ.
  • ಸಿಂಹ
  • ಮಾತುಗಳಿಂದ ಬಹುಜನರಲ್ಲಿ ನಿಷ್ಠುರ ಮಾಡಿಕೊಂಡಿರುವ ವಿಶ್ವಾಸ ಪುನಃ ಸಂಪಾದಿಸಬೇಕಾಗುವುದು. ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆಲವರಿಗೆ ಪ್ರಶಸ್ತಿ ಲಭಿಸುವಂತೆ ಆಗುವುದು.
  • ಕನ್ಯಾ
  • ವಿದ್ಯಾರ್ಜನೆ ಎಂಬ ಹೆಸರಿನಲ್ಲಿ ಕುಟುಂಬಕ್ಕೆ ಹೊರೆಯಾಗುವ ರೀತಿ ಯಲ್ಲಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಪರಾಮರ್ಶಿಸಿ. ಉತ್ಸಾಹದಿಂದ ಕೆಲಸ ಆರಂಭಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳಲಿವೆ.
  • ತುಲಾ
  • ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ರಂಗಿನ ಲೋಕದ ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣವನ್ನು ಹಾಳು ಮಾಡಿಕೊಳ್ಳದಿರಿ. ತಂಗಿಯ ದುಃಖಕ್ಕೆ ಹೆಗಲಾಗಿ ನಿಲ್ಲುವಿರಿ.
  • ವೃಶ್ಚಿಕ
  • ಏನನ್ನಾದರೂ ಸಾಧಿಸಲೇಬೇಕು ಎಂಬ ಆಸೆ-ಆಕಾಂಕ್ಷೆಗೆ ಆತ್ಮವಿಶ್ವಾಸದ ಕೊರತೆಯಂತೂ ಕಾಣಿಸದು. ಅರಣ್ಯದಲ್ಲಿ ಕಾರ್ಯದ ನಿಮಿತ್ತ ಸಂಚರಿಸುವವರಿಗೆ ವಿಷಜಂತುಗಳ ಕಾಟ ಇರಬಹುದು.
  • ಧನು
  • ತಂತಿವಾದಕರ ಹೊಸ ರೀತಿಯ ಪ್ರಯೋಗವು ಸಂಗೀತ ರಸಿಕರ ಮನಸೂರೆಗೊಳಿಸುತ್ತದೆ. ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ನಡೆಸಬೇಕಾಗುವುದು. ಉದ್ರೇಕಕ್ಕೆ ಒಳಗಾಗದೆ ಕೆಲಸವನ್ನು ಮಾಡಿ.
  • ಮಕರ
  • ಸಂಜೆಯ ಸಮಯದಲ್ಲಿ ಆರಾಮವಾಗಿ ಪ್ರಕೃತಿಯ ಸೌಂದರ್ಯ ಅನುಭವಿಸುವಿರಿ. ಕರ್ತವ್ಯದ ಕೊರತೆಯು ಮೇಲಧಿಕಾರಿಗೆ ಎದ್ದು ಕಾಣಲಿದೆ. ಮಗನಿಗೆ ಉದ್ಯೋಗ ದೊರೆತು ಸಂತೋಷವಾಗುತ್ತದೆ.
  • ಕುಂಭ
  • ಅಪರೂಪದ ಅಳಿವಿನಂಚಿನಲ್ಲಿರುವ ಕಲಿತ ವಿದ್ಯೆಯ ಬಗ್ಗೆ ಸಂದರ್ಶನವನ್ನು ಕೊಡುವಂತೆ ಪತ್ರಿಕೆ ಅಥವಾ ದೂರದರ್ಶನ ಮಾಧ್ಯಮದವರು ನಿಮ್ಮಲ್ಲಿಗೆ ಬರುವರು. ಸಂಬಂಧಗಳು ಗಟ್ಟಿಗೊಳ್ಳಲಿವೆ.
  • ಮೀನ
  • ನ್ಯಾಯಾಲಯದಲ್ಲಿರುವ ಪ್ರಕರಣಗಳು ವಿರುದ್ಧವಾಗಿ ತಿರುಗುವಂತೆ ಷಡ್ಯಂತ್ರ ನಡೆಯಬಹುದು. ಜವಾಬ್ದಾರಿಯನ್ನು ಅಪ್ಪಿ ತಪ್ಪಿಯು ಬೇರೆಯವರಿಗೆ ಒಪ್ಪಿಸದಿರಿ. ಮಧುರ ಖಾದ್ಯಗಳ ಭೋಜನ ನಿಮ್ಮದಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.