ದಿನ ಭವಿಷ್ಯ | ಈ ರಾಶಿಯವರು ಮುಂಗೋಪಿತನದ ತೀರ್ಮಾನ ಮಾಡುವುದು ಸರಿಯಲ್ಲ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಡಿಸೆಂಬರ್ 2025, 22:27 IST
Last Updated 12 ಡಿಸೆಂಬರ್ 2025, 22:27 IST
ದಿನ ಭವಿಷ್ಯ
ಮೇಷ
ನೂತನ ಮನೆ ನಿರ್ಮಾಣದಲ್ಲಿರುವ ಸಹೋದರರಿಗೆ ಸಹಾಯ ಹಸ್ತ ನೀಡುವ ಮನಸ್ಸಾಗುವುದು. ಓದಿನಲ್ಲಿ ಹೆಚ್ಚು ಆಸಕ್ತಿ ಹುಟ್ಟುವಂತೆ ಮನೆಯ ಪರಿಸರ ನಿರ್ಮಿಸಿ. ಸತ್ಫಲಗಳಿಗಾಗಿ ಶಾರದೆಯನ್ನು ದರ್ಶಿಸುವುದು ಒಳ್ಳೆಯದು.
ವೃಷಭ
ಪ್ರಯತ್ನ ಬಲ ಹಾಗು ಮನೆಯಲ್ಲಿ ಪಿತೃ ಕಾರ್ಯವನ್ನು ನಡೆಸಿದರೆ, ಕೌಟುಂಬಿಕ ವಿವಾದಗಳು ರಾಜೀ ಮನೋಭಾವಗಳಿಂದ ಸಮಾಪ್ತಿ ಹೊಂದಲಿವೆ. ನಿಧಾನಗತಿಯ ಕಾರ್ಯಗಳು ಚುರುಕಾಗಿ ನೆಮ್ಮದಿ ಸಿಗಲಿದೆ.
ಮಿಥುನ
ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆರ್ಥಿಕವಾಗಿ ಆದಾಯ ಯಾವುದೇ ರೀತಿಯ ಏರಿಳಿತಗಳಿಲ್ಲದೆ ಸಮನಾಗಿರುವುದು. ಹಿರಿಯರ ಆರೋಗ್ಯದ ಕಾರಣ ಪ್ರಯಾಣವನ್ನು ಮುಂದೂಡುವುದು ಉತ್ತಮ.
ಕರ್ಕಾಟಕ
ಹೆಚ್ಚಿನ ಗಮನ ಸಹೋದ್ಯೋಗಿಗಳಲ್ಲಿ ಇಡುವುದರಿಂದ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮಾರ್ಗ ದೊರೆಯುತ್ತದೆ. ಮನೆಯ ಕೆಲಸಗಳನ್ನು ನಿಭಾಯಿಸುವುದರಲ್ಲಿ ಸಮಯವನ್ನು ಕಳೆಯುವಿರಿ.
ಸಿಂಹ
ಆರ್ಥಿಕವಾಗಿ ಚೇತರಿಕೆ ಕಂಡುಬರದಿದ್ದರೂ ಜೀವನಕ್ಕೆ ಕೊರತೆ ಇರಲಾರದು. ಬಹಳ ದಿನಗಳ ನಂತರ ಸೋದರನ ಆಗಮನದಿಂದ ಸಂಭ್ರ ಮದ ವಾತಾವರಣ ಇರುವುದು. ಲಾಭ ನಷ್ಟಗಳ ಬಗ್ಗೆ ಅವಲೋಕನ ಅಗತ್ಯ.
ಕನ್ಯಾ
ಕೆಲಸದಲ್ಲಿ ಆತುರ ಬೇಡ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ. ಆಧ್ಯಾತ್ಮಿಕ ಪುಸ್ತಕಗಳನ್ನು ಪಠಿಸಿದ ಕಾರಣವಾಗಿ ದೈವಿಕ ಅನುಭವ ಪದೇ ಪದೇ ಆಗುತ್ತದೆ. ದಾಂಪತ್ಯದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ.
ತುಲಾ
ಹೊಸ ವೃತ್ತಿಯ ವಿಚಾರವಾಗಿ ಯಾವ ಜಾಗದಲ್ಲಿ ವೃತ್ತಿಯನ್ನು ಮಾಡುವುದೆಂದು ಚಿಂತಿಸುವಿರಿ. ಆಹಾರ ಸೇವನೆ ವಿಧಾನ ಬದಲಾಯಿಸಿಕೊಳ್ಳಿ. ಮುಂಗೋಪಿತನದ ತೀರ್ಮಾನ ಸರಿಯಲ್ಲ.
ವೃಶ್ಚಿಕ
ಊರಿನ ರಾಜಕಾರಣದ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವಂತಾಗುವುದು. ಪರಿಸ್ಥಿತಿಗೆ ನೀವೇ ಹೊಂದುಕೊಳ್ಳುವ ತೀರ್ಮಾನ ಮಾಡಿರಿ. ಇಂದಿನ ನಡವಳಿಕೆ ಸಮಾಜದಲ್ಲಿ ಎಲ್ಲರ ಕೇಂದ್ರ ಬಿಂದುವಾಗಲಿದೆ.
ಧನು
ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ವ್ಯವಸ್ಥಿತವಾಗಿ ನಡೆಯಲಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರುವುದು ಒಳ್ಳೆಯದು.
ಮಕರ
ಯೋಗಪಟುಗಳಿಗೆ ದೊಡ್ಡ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುವ ಅವಕಾಶ ದೊರೆಯುತ್ತದೆ. ಮಾಂಗಲ್ಯ ಯೋಗ ತೋರಿ ಬಂದರೂ ನಿಮ್ಮ ನಿರ್ಧಾರವೇ ಮುಖ್ಯವೆನಿಸಲಿದೆ. ಮಾತಿನಲ್ಲಿ ಹಿಡಿತವಿರಲಿ.
ಕುಂಭ
ಮನೆಯ ಹಿರಿಯರ ಮುಂದೆ ಪರಂಪರೆಗಳನ್ನು ಹಾಗೂ ನೀತಿ ನಿಯಮಗಳನ್ನು ಮೀರಿ ನಡೆದು ಅವರ ಅಸಮಾಧಾನಕ್ಕೆ ಕಾರಣವಾಗುವಿರಿ. ಮಕ್ಕಳ ಭವಿಷ್ಯದ ಮೇಲಿನ ಚಿಂತೆ ಅವರ ಕೆಲವು ನಡವಳಿಕೆಯಿಂದ ಹೆಚ್ಚಲಿದೆ.
ಮೀನ
ಮಿತ್ರನ ಮನೆಯ ಸಮಾರಂಭದಲ್ಲಿ ಭಾಗವಹಿಸುವುದರಿಂದ ಹಳೆಯ ಮಿತ್ರರನ್ನು ಭೇಟಿಯಾದ ಸಂಭ್ರಮ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕವಾದ ದಿನವಾಗಿದೆ. ನೀರಾವರಿ ಬೆಳೆಗಳು ಲಾಭ ತರಲಿವೆ.