ADVERTISEMENT

ದಿನ ಭವಿಷ್ಯ | ಈ ರಾಶಿಯವರಿಗೆ ಇಂದಿನ ದಿನಚರಿಯಿಂದ ಆತ್ಮವಿಶ್ವಾಸ ಹೆಚ್ಚಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಡಿಸೆಂಬರ್ 2025, 23:14 IST
Last Updated 9 ಡಿಸೆಂಬರ್ 2025, 23:14 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾಳಜಿ ಹೊಂದಿದವರ ಸಲಹೆಗಳಿಗೆ ಕಿವಿಗೊಡಿ, ಅದರಿಂದಾಗಿ ಅನುಕೂಲವಾಗುವುದು. ಆಕಾಶ ವೀಕ್ಷಣೆಯನ್ನು ನಿಯಮಬದ್ಧವಾಗಿ ಮಾಡುವವರಿಗೆ ಉತ್ತಮ ಜತೆಗಾರರೊಬ್ಬರು ದೊರೆಯಲಿದ್ದಾರೆ.
  • ವೃಷಭ
  • ಅಕ್ಕ ಪಕ್ಕದವರಲ್ಲಿ ಅನವಶ್ಯಕವಾಗಿ ಸಂಬಂಧವಿರದ ವಿಚಾರಕ್ಕೆ ಸಲಹೆ ಹೇಳಿದರೆ ನಿಷ್ಠುರವಾಗುವುದು ಖಚಿತ. ಮೃದು ಮಾತುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮೀನು ಮಾರಾಟಗಾರರು ಲಾಭ ಪಡೆಯುವಿರಿ.
  • ಮಿಥುನ
  • ತಾಂತ್ರಿಕ ವಿದ್ಯಾರ್ಥಿಗಳು ವಿನೂತನ ಯೋಜನೆಯನ್ನು ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಅಕ್ಕ ತಂಗಿಯರ ಆಸೆ ಈಡೇರಿಸಲಿದ್ದೀರಿ. ಇಂದಿನ ದಿನಚರಿಯಿಂದ ಆತ್ಮವಿಶ್ವಾಸ ಹೆಚ್ಚಲಿದೆ.
  • ಕರ್ಕಾಟಕ
  • ಕರ್ತವ್ಯ ಕೊರತೆಯಿಂದ ಉಲ್ಲಾಸ ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಕೃತಜ್ಞತೆಯನ್ನು ವ್ಯಕ್ತಪಡಿಸದ ವ್ಯಕ್ತಿಗಳ ಜೊತೆ ವ್ಯವಹಾರ ನಡೆಸುವುದು ಬೇಡ. ನಿವೇಶನ ಖರೀದಿಸುವ ಯೋಚನೆಗಳು ಬರಲಿವೆ.
  • ಸಿಂಹ
  • ಸಾಹಸಿ ಕಾರ್ಯವನ್ನು ಮಾಡುವ ಮನಸ್ಥಿತಿ ಹೊಂದಿದವರಿಗೆ ದಾಖಲೆಯನ್ನು ಸೃಷ್ಟಿಸುವ ಅವಕಾಶ ಸಿಗುವುದು. ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ಬಗೆಹರಿಸಿಕೊಂಡು ಹೆಜ್ಜೆ ಹಾಕುವುದು ಉತ್ತಮ.
  • ಕನ್ಯಾ
  • ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ತಿಳಿವಳಿಕೆಯ ಮಾತು ಒಬ್ಬರ ಜೀವನವನ್ನು ಉದ್ಧರಿಸುತ್ತದೆ. ಮಿತ್ರರಲ್ಲಿ ವರ್ತನೆ ಉತ್ತಮವಾಗಿರಲಿ.
  • ತುಲಾ
  • ಕೈಗೆತ್ತಿಕೊಂಡಿರುವ ಕೆಲಸಗಳು ಖರ್ಚಿಗೆ ಕಾರಣವಾದರೂ ಮುಂದಿನ ದಿನಗಳಲ್ಲಿ ಲಾಭದಾಯಕ. ಎಂಜಿನಿಯರ್‌ಗಳಿಗೆ ಬಿಡುವಿಲ್ಲದ ಗಡಿಬಿಡಿಯ ದಿನವಾಗಿ ಪರಿಣಮಿಸುತ್ತದೆ.
  • ವೃಶ್ಚಿಕ
  • ಪತ್ರಿಕಾ ವರದಿಗಾರರಿಗೆ ವಿಶೇಷ ದಿನವಾಗಿ ಸದಾಕಾಲ ನೆನಪಿರುವಂತೆ ಆಗಬಹುದು. ಕಾರ್ಯ ಕಲಾಪಗಳ ಒತ್ತಡದಲ್ಲಿಯು ಸ್ನೇಹಿತರ ವರ್ಗಕ್ಕೆ ಸಮಯ ನೀಡಬೇಕಾಗುತ್ತದೆ. ಮನೆಯಲ್ಲಿ ನೆಮ್ಮದಿ ಕಂಡುಬರಲಿದೆ.
  • ಧನು
  • ಈಗಿನ ಉದ್ಯೋಗವನ್ನು ಬಿಟ್ಟು ಹೊಸ ಸ್ವ ಉದ್ಯೋಗ ಒಂದನ್ನು ಶುರು ಮಾಡುವ ಯೋಜನೆಯನ್ನು ನಿರೂಪಿಸುವಿರಿ. ಮನೆಯಲ್ಲಿ ಮಾಡುವ ಅಡುಗೆ ಹೊರತುಪಡಿಸಿ ಬೇರೆಯ ಆಹಾರವನ್ನು ತಿನ್ನುವ ಮನಸ್ಸಾಗುತ್ತದೆ.
  • ಮಕರ
  • ನೀವೇ ವಿಮರ್ಶಿಸಿಕೊಂಡಲ್ಲಿ ನಡವಳಿಕೆಯಲ್ಲಿನ ತಪ್ಪುಗಳು ಅರಿವಾಗುವುದು. ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ.
  • ಕುಂಭ
  • ಕೆಲವು ಸಮಸ್ಯೆಗಳನ್ನು ವಯಸ್ಕರಲ್ಲಿಯೇ ಹೇಳುವುದಕ್ಕಿಂತ ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ತೋಟದ ಫಸಲಿನಲ್ಲಿ ಮಹತ್ತರ ಬದಲಾವಣೆ ತರುವ ಉಪಾಯ ಮಾಡುವಿರಿ.
  • ಮೀನ
  • ವೈಯಕ್ತಿಕ ಅಭಿವೃದ್ಧಿಗೂ ಸಾಮಾಜಿಕ ಏಳಿಗೆಗೂ ಅನುಕೂಲ ಆಗಲಿದೆ. ತಮ್ಮನ ಮಕ್ಕಳ ಮದುವೆಯಲ್ಲಿ ಓಡಾಟ ನಡೆಸುವಿರಿ. ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ, ಗೆಲುವು ನಿಮ್ಮದಾಗುವುದು
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.