ವಾರ ಭವಿಷ್ಯ: ವೃತ್ತಿಯ ಸ್ಥಳದಲ್ಲಿ ಹೊಸ ಸ್ಥಾನ ಸಿಗುವ ಸಾಧ್ಯತೆಯಿದೆ
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 31 ಜನವರಿ 2026, 23:57 IST
Last Updated 31 ಜನವರಿ 2026, 23:57 IST
ವಾರ ಭವಿಷ್ಯ
ಮೇಷ
ಹಲವಾರು ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಸ್ಥಿರಾಸ್ತಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಶ್ರಮ ವಹಿಸಬೇಕು. ಕೆಲಸದ ಒತ್ತಡದಿಂದ ಅನಾರೋಗ್ಯವಾಗಬಹುದು. ಸಂಗಾತಿಗೆ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಆದಾಯ ಹೆಚ್ಚಬಹುದು. ತಂದೆಯಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಸ್ವಂತ ಬುದ್ಧಿವಂತಿಕೆಯಿಂದ ಮುನ್ನಡೆಯುವಿರಿ. ಆದಾಯವು ನಿಮ್ಮ ಅಗತ್ಯವನ್ನು ಮೀರಿಸುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು. ಈಗ ವಿದ್ಯಾರ್ಥಿಗಳಿಗೆ ಮಧ್ಯಮಗತಿಯ ಫಲಿತಾಂಶವಿರುತ್ತದೆ. ಪ್ರಸೂತಿ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಗೆ ಆಸ್ತಿ ದೊರಕುವ ಯೋಗವಿದೆ. ಕೆಲವೊಂದು ಅನಿರೀಕ್ಷಿತ ಖರ್ಚುಗಳು ಬರಬಹುದು. ವಿದೇಶದಲ್ಲಿ ವೃತ್ತಿ ಅರಸುತ್ತಿರುವವರಿಗೆ ಈಗ ಸಿಗುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಜನರಿಂದ ಬಹಳ ಗೌರವವನ್ನು ಪಡೆಯುವಿರಿ. ಆದಾಯವು ಉತ್ತಮವಾಗಿರುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಸಂಗಾತಿಯು ನಿಮಗೆ ಉತ್ತಮ ಗೌರವವನ್ನು ಕೊಡುವರು. ಕೆಲವೊಂದು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವನ್ನು ಕಾಣಬಹುದು. ಹಿರಿಯರು ತಮ್ಮ ಮಕ್ಕಳನ್ನು ನೋಡಲು ವಿದೇಶಕ್ಕೆ ಹೋಗಿಬರಬಹುದು. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಮನಸಿನಲ್ಲಿ ಒಂದು ರೀತಿಯ ಹೊಸ ಆನಂದ ತುಂಬಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಿಗೂ ಸಂಗಾತಿ ಕಡೆಯವರು ಸಹಕಾರ ನೀಡುವವರು. ಸಂಗಾತಿಯ ಸಹಕಾರದಿಂದ ಆಸ್ತಿಯನ್ನು ಖರೀದಿ ಮಾಡಬಹುದು. ಹಿರಿಯರಿಗೆ ಆರೋಗ್ಯ ತಪ್ಪುವ ಸಂಭವವಿದೆ. ವಿದೇಶಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭಬರುವ ಸಾಧ್ಯತೆ ಇದೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ. ಆಭರಣಗಳ ವ್ಯಾಪಾರ ಮಾಡುವವರ ಆದಾಯ ಕೂಡ ಹೆಚ್ಚುತ್ತದೆ. ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳ ವಿರೋಧ ನಿಮಗೆ ಎದುರಾಗುತ್ತದೆ. ಭೂಮಿಯ ವ್ಯವಹಾರವನ್ನು ಮಾಡುವವರ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಬರುತ್ತದೆ. ಮಕ್ಕಳಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಚರ್ಮ ಸಂಬಂಧಿ ಕಾಯಿಲೆಗಳು ಕೆಲವರನ್ನು ಕಾಡಬಹುದು. ಈಗ ಸಂಗಾತಿಯೊಡನೆ ಮುಸುಕಿನ ಗುದ್ದಾಟಗಳಿರುತ್ತವೆ. ಉದ್ದಿಮೆ ನಡೆಸುವವರಿಗೆ ನಿರೀಕ್ಷಿತ ಬೆಂಬಲ ಇರುವುದಿಲ್ಲ. ವೃತ್ತಿಯಲ್ಲಿ ಸ್ವಲ್ಪ ಅನುಕೂಲವಿರುತ್ತದೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಆದಾಯವು ಚೇತರಿಕೆಯತ್ತ ಹೊರಳುತ್ತದೆ. ಉದ್ಯೋಗ ಸಂಬಂಧಿತ ವಿಷಯದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಕೀಲು ಸಂಬಂಧಿ ನೋವುಗಳು ನಿಮ್ಮನ್ನು ಕಾಡಬಹುದು. ನಿಮ್ಮ ಸಂಗಾತಿಯ ಶ್ರಮದಿಂದ ಸಂಸಾರಕ್ಕೆ ಅನುಕೂಲವಾಗುತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯವನ್ನು ಕಾಣಬಹುದು. ಹಿರಿಯರ ಆಭರಣಗಳು ನಿಮಗೆ ದೊರೆಯುವ ಸಾಧ್ಯತೆಗಳಿವೆ. ಅಧ್ಯಾಪಕರಿಗೆ ಉತ್ತಮ ಗೌರವ ದೊರೆತು, ಸಂಪಾದನೆ ಕೂಡ ಹೆಚ್ಚುತ್ತದೆ. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ನಿಮ್ಮ ದ್ವಂದ್ವ ನಿಲುವುಗಳು ನಿಮಗೆ ಸಮಸ್ಯೆ ತರುತ್ತವೆ. ಹಣದ ಹರಿವು ಸ್ವಲ್ಪ ಉತ್ತಮಗೊಳ್ಳುತ್ತದೆ. ಹಿರಿಯರನ್ನು ಓಲೈಸಿ ನಿಮ್ಮ ಕೆಲಸ ಸಾಧಿಸಿಕೊಳ್ಳಲು ಪ್ರಯತ್ನಪಡುವಿರಿ. ಸ್ಥಿರಾಸ್ತಿ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ವಾಯು ಪ್ರಕೋಪ ಸ್ವಲ್ಪ ಬಾಧಿಸಬಹುದು. ಸಂಸಾರದಲ್ಲಿ ಕಾವೇರಿದ ವಾತಾವರಣ ಮೂಡುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭಸಿಗುತ್ತದೆ. ತಂದೆಯಿಂದ ಸಾಕಷ್ಟು ಸಹಕಾರ ದೊರೆಯುತ್ತದೆ. ವೃತ್ತಿ ಸ್ಥಳದಲ್ಲಿ ಅನುಕೂಲ ಹೆಚ್ಚುತ್ತವೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುನ್ನಡೆಯುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳ ನಡುವೆ ಒಗ್ಗಟ್ಟನ್ನು ತರಲು ಪ್ರಯತ್ನ ಪಡುವಿರಿ. ವಿದೇಶದಲ್ಲಿ ವಾಸಿಸುತ್ತಿರುವವರಿಗೆ ಆಸ್ತಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಗಣಿ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆಹಾರ ಸಂಬಂಧದಿಂದ ಅನಾರೋಗ್ಯವಾಗುವ ಸಾಧ್ಯತೆಗಳಿವೆ. ವೃತ್ತಿಯ ಸ್ಥಳದಲ್ಲಿ ಹೊಸ ಸ್ಥಾನ ಸಿಗುವ ಸಾಧ್ಯತೆಯಿದೆ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ಬಂಧುಗಳಿಂದ ಗೌರವ ದೊರೆಯುತ್ತದೆ. ಆದಾಯವು ಉತ್ತಮಗೊಳ್ಳುತ್ತ ಹೋಗುತ್ತದೆ. ಕೃಷಿಭೂಮಿ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಕಾಣಬಹುದು. ಮಕ್ಕಳಿಂದ ಆರ್ಥಿಕ ಸಹಕಾರ ಸಿಗುವ ಸಾಧ್ಯತೆಗಳಿವೆ. ಕೆಲವರಿಗೆ ಹಲ್ಲಿನ ತೊಂದರೆ ಕಾಣಿಸಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಪರಂಪರಾಗತ ವಿದ್ಯೆಯನ್ನು ಮುಂದುವರಿಸಬಹುದು. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆಯಿದೆ. ಜಲ ತಜ್ಞರಿಗೆ ಬೇಡಿಕೆ ಹೆಚ್ಚಾಗಿ, ಆದಾಯವು ಹೆಚ್ಚುತ್ತದೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ರಾಸಾಯನಿಕ ವಸ್ತುಗಳ ವ್ಯವಹಾರ ಮಾಡುವವರಿಗೆ ಆದಾಯಹೆಚ್ಚುತ್ತದೆ. ವೈರಿಗಳಿಗೆ ಸಾಕಷ್ಟು ಪ್ರತಿರೋಧ ತೋರುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ಯೋಗವಿದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡುತ್ತವೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಆದಾಯವು ಕಡಿಮೆ ಇರುತ್ತದೆ. ಶ್ರಮಪಟ್ಟಲ್ಲಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಬಂಧುಗಳಿಂದ ಸಹಕಾರ ದೊರೆಯುವುದು ಕಡಿಮೆ. ಆಸ್ತಿ ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ನಿಮ್ಮ ವ್ಯಾಪಾರದಲ್ಲಿ ಅನಿರೀಕ್ಷಿತ ಏರುಪೇರುಗಳಾಗುತ್ತವೆ. ವೃತ್ತಿಯಲ್ಲಿ ಅಲ್ಪ ಯಶಸ್ಸನ್ನು ಕಾಣಬಹುದು. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ. ಒಡಹುಟ್ಟಿದವರಿಂದ ಸೂಕ್ತ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಯೋಗವಿದೆ. ಕೆಲವರಿಗೆ ಉದರದಲ್ಲಿ ಗಂಟುಗಳು ಕಾಣಿಸಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಹೆಚ್ಚು ಅನುಕೂಲತೆಗಳಿರುತ್ತವೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)