ವಾರ ಭವಿಷ್ಯ | ಆಗಸ್ಟ್ 20 ರಿಂದ 26ರವರೆಗೆ: ಈ ರಾಶಿಯವರಿಗೆ ಅಭಿವೃದ್ಧಿ ಯೋಗವಿದೆ
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ವಾರ ಭವಿಷ್ಯ
ಮೇಷ
ಕಾರ್ಯನಿಮಿತ್ತ ದೂರ ಪ್ರಯಾಣ ಮಾಡುವ ಯೋಗವಿದೆ. ಪುರಾತತ್ವ ಇಲಾಖೆಯಲ್ಲಿ ಕೆಲಸಮಾಡು ತ್ತಿರುವವರಿಗೆ ಅದೇ ಕೆಲಸದ ಮೇಲೆ ದೂರದೂರಿಗೆ ಹೋಗಬೇಕಾಗಬಹುದು. ಸ್ನೇಹಿತರೊಂದಿಗೆ ಮಾಡಿ ಕೊಂಡಿದ್ದ ವ್ಯವಹಾರ ಒಪ್ಪಂದಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿರಿ. ಸಂಗೀತಗಾರರಿಗೆ ಹೆಚ್ಚಿನ ಅವಕಾಶ ಮತ್ತು ಸಂಪಾದನೆ ಇರುತ್ತದೆ. ಬೇರೆಯವರೊಂದಿಗೆ ಮಾತನಾಡುವಾಗ ತೂಕವಾಗಿ ಮಾತನಾಡಿರಿ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದು ಉತ್ತಮ., ಸ್ವತ್ತು ಖರೀದಿಯವಿಚಾರದಲ್ಲಿ ಬಂಧುಗಳು, ನಿಮಗೆ ಸಹಾಯ ಮಾಡುವವರು ಧನಾದಾಯವು ನಿರೀಕ್ಷಿತ ಮಟ್ಟಕ್ಕೆ ಇರುತ್ತದೆ.ಉದ್ಯೋಗ ರಹಿತರಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗಾತಿಯ ಉದಾಸೀನ ಭಾವ ಬೇಸರ ತರಿಸುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಅಭಿವೃದ್ಧಿ ಯೋಗವಿದೆ.
ವೃಷಭ
ಧರ್ಮದ ವಿರುದ್ಧ ಮಾತನಾಡುವ ನಿಮ್ಮ ಬುದ್ಧಿಯನ್ನು ಬಂಧುಗಳು ಖಂಡಿಸುವರು. ಯಾವುದೇ ಸ್ಥಳದಲ್ಲಿ ಮಾತನಾಡುವಾಗ ಆವೇಶ ಕಡಿಮೆ ಇರಲಿ. ಸಾಕುಪ್ರಾಣಿಗಳನ್ನು ಸಾಕುವಇಚ್ಛೆ ಈಗ ಹೆಚ್ಚಾಗುತ್ತದೆ. ಕಟ್ಟಡ ಕಟ್ಟುವ ಕಾರ್ಮಿಕರೊಡನೆ ಸೌಹಾರ್ದಯುತ ವಾಗಿ ಇರುವುದು ಒಳ್ಳೆಯದು. ಮನೆಯ ನಿರ್ಮಾಣ ಕಾರ್ಯವನ್ನು ಮಾಡಬಹುದು. ನಿಮ್ಮ ಆಸ್ತಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ತೆರಿಗೆ ತಜ್ಞ ರಿಗೆ ಹೆಚ್ಚಿನಬೇಡಿಕೆ ಬರುತ್ತದೆ ಹಾಗೂ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ತಾಯಿಯ ಜೊತೆ ಆಸ್ತಿ ವಿಚಾರವಾಗಿ ಮಾತನಾಡಬಹುದು. ಕೃಷಿಯನ್ನು ಓದುತ್ತಿರುವವರಿಗೆ ಸೂಕ್ತ ಸವಲತ್ತುಗಳು ದೊರೆಯು ತ್ತವೆ. ಸಂಗಾತಿಯ ಕೃಷಿ ಮಾಡುವ ಆಸೆಗೆ ಅನುಕೂಲ ಸಿಗುತ್ತದೆ. ಹಿರಿಯರಿಗೆ ದೂರದ ಪ್ರವಾಸ ಗಳನ್ನು ಮಾಡುವ ಯೋಗವಿದೆ.
ಮಿಥುನ
ನಿಮ್ಮ ಆದರ್ಶಗಳನ್ನು ಬಿಟ್ಟುಕೊಡದೆ ಮುನ್ನಡೆಯುವುದು ಉತ್ತಮ, ನಿಮಗೆ ಇದರಿಂದ ಉತ್ತಮಫಲ ಸಿಗುತ್ತದೆ. ದುರ್ಜನರು ನಿಮ್ಮ ಸಹವಾಸ ಮಾಡಲು ಕಾತುರರಾಗಿ ಕಾಯುತ್ತಿರುತ್ತಾರೆ, ಅವರಿಂದ ದೂರವಿರಿ.ವ್ಯವಸ್ಥಾಪಕರಜೊತೆ ಧೈರ್ಯದಿಂದ ಮಾತ ನಾಡಿ ಜವಾಬ್ದಾರಿಯ ಜೊತೆ ಸ್ಥಾನವನ್ನುಹೆಚ್ಚಿಸಿಕೊಳ್ಳ ಬಹುದು. ಸಾಕಷ್ಟು ಯಕ್ಷಪ್ರಶ್ನೆಗಳಾಗಿ ಉಳಿದಿದ್ದ ಕೆಲವು ಸಮಸ್ಯೆಗಳಿಗೆ ಈಗ ಉತ್ತರ ಸಿಗುತ್ತದೆ. ಕಟ್ಟಡ ರಚನೆಯಂತಹ ಕಾರ್ಯಗಳು ಭರದಿಂದ ಸಾಗುತ್ತವೆ. ವ್ಯವಹಾರದಲ್ಲಿ ಕೇವಲ ಲಾಭಾಂಶವನ್ನು ನೋಡದೇ ಮಾನವೀಯತೆಯನ್ನು ನೋಡಿದಾಗ ನಿಮ್ಮ ಗೌರವ ಹೆಚ್ಚುತ್ತದೆ. ಧನಾದಾಯವು ಉತ್ತಮವಾಗಿರುತ್ತದೆ. ಬಂಧುಗಳಲ್ಲಿ ವ್ಯತ್ಯಾಸಗಳಿದ್ದರೂ ಸಹ ನಿಮಗೆ ಸಹ ಕಾರ ಸಿಗುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಮುನ್ನಡೆ ಕಾಣುತ್ತದೆ. .ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಶ್ರಮ ವಹಿಸಬೇಕು.
ಕರ್ಕಾಟಕ
ನಿಮ್ಮ ಆತ್ಮಭಿಮಾನದ ಜೊತೆಗೆ ಗೌರವವು ಹೆಚ್ಚುತ್ತದೆ. ರೈತರಿಗೆ ಪ್ರಾಣಿಗಳ ಕಾಡು ಪ್ರಾಣಿಗಳಿಂದ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಹಿರಿಯರ ದರ್ಶನ ಪಡೆಯಲು ಅವರಿರುವ ಜಾಗಕ್ಕೆ ತೆರಳುವಿರಿ. ಕೆಲವು ಕೆಟ್ಟ ಸ್ನೇಹಿತರಿಂದ ಮಕ್ಕಳ ನಡ ವಳಿಕೆ ಬದಲಾಗ ಬಹುದು ಎಚ್ಚರ.ವಿದೇಶದಲ್ಲಿರುವ ಸಂಗಾತಿಯ ಆದಾಯ ಹೆಚ್ಚಾಗುತ್ತದೆ. ಹಿರಿಯ ಶ್ರೇಣಿಯ ಕೆಲವು ಅಧಿಕಾರಿ ವರ್ಗದವರಿಗೆ ಉನ್ನತ ಸ್ಥಾನಮಾನ ದೊರೆಯುತ್ತದೆ. ಜೀವನಕ್ಕೆ ಪ್ರವೇಶಿಸುವ ಅವಕಾಶ ಕೆಲವರಿಗೆ ದೊರೆಯುತ್ತದೆ. ಹಿರಿಯರು ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅಗತ್ಯ. ಖಾಸಗಿ ಸಂಸ್ಥೆಗಳಲ್ಲಿ ಠೇವಣಿ ಇಡುವ ಮೊದಲು ಎಚ್ಚರ ವಹಿಸಿರಿ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಹೆಂಗಸರ ಉಡುಪುಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ.
ಸಿಂಹ
ದತ್ತು ಮಕ್ಕಳನ್ನು ತೆಗೆದುಕೊಂಡಿರುವವರು ಬಂಧುಗಳ ಬಗ್ಗೆ ಎಚ್ಚರ ವಹಿಸಿರಿ, ಅವರು ಮಗುವಿಗೆ ಜನ್ಮ ವೃತ್ತಾಂತವನ್ನು ತಿಳಿಸುವ ಸಾಧ್ಯತೆ ಇದೆ. ದಿನ ಕಳೆದಂತೆ ಹಳೆಯದನ್ನು ಮರೆತು ಹೊಸದರೊಂದಿಗೆ ಹೊಂದಿಕೊಳ್ಳುವುದು ಉತ್ತಮ. ಇದ್ದಿದ್ದರಲ್ಲಿ ಸಂತಸ ಕಾಣುವುದು ನಿಮಗೆ ಒಳಿತು. ಬದ್ದ ವೈರಿಗಳು ಸಹ ನಿಮ್ಮ ಕಷ್ಟಕ್ಕೆ ಸ್ಪಂದಿಸುವರು. ಆಕಸ್ಮಿಕವಾಗಿ ನಿಮಗೆ ಪರಿಚಯವಾದ ವ್ಯಕ್ತಿಯಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಆತ್ಮಭಿಮಾನ ನಿರೀಕ್ಷೆಗೆ ಮೀರಿ ಹೆಚ್ಚಾಗಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆ ಯಷ್ಟು ಇದ್ದರೂ ಅಷ್ಟೇ ಖರ್ಚು ಸಹ ಇರುತ್ತದೆ. ಅಧ್ಯಯನಶೀಲರಿಗೆ ಉತ್ತಮ ಯಶಸ್ಸು ದೊರೆಯುವ ಸಾಧ್ಯತೆಗಳಿವೆ. ಮೂಳೆ ನೋವುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ಮಾತು ಕೋಪೋದ್ರಿಕ್ತ ಮಾತು ಸಂಗಾತಿಯ ಸಹನೆಯನ್ನು ಕಳೆಯುತ್ತದೆ.
ಕನ್ಯಾ
ಗಣಿತ ಉಪನ್ಯಾಸಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಉದ್ಯೋಗ ರಹಿತರು ಸಿಕ್ಕ ಕೆಲಸವನ್ನು ಸೇರಿಕೊಳ್ಳು ವುದು ಉತ್ತಮ, ಅಪೇಕ್ಷಿಸಿದ್ದ ಕೆಲಸ ಸಿಗದೇ ಇರುವ ಸಾಧ್ಯತೆ ಇದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸು ವಾಗ ನಿಮ್ಮ ಒಡವೆಗಳ ಬಗ್ಗೆ ಎಚ್ಚರ ಇರಲಿ ಕಳ್ಳತನ ಆಗುವ ಸಾಧ್ಯತೆಗಳಿವೆ. ನಿಮ್ಮ ಹರಿತವಾದ ಮಾತು ಗಳು ಬೇರೆಯವರನ್ನು ಘಾಸಿಗೊಳಿಸಬಹುದು, ಮಾತಿ ನಲ್ಲಿ ಕಠಿಣತೆ ಬೇಡ. ಸತತಪ್ರಯತ್ನದಿಂದ ಮಾಡುತ್ತಿದ್ದ ಕೆಲಸಗಳನ್ನು ಕಡೆಗಳಿಗೆಯಲ್ಲಿ ಕೈಚಲ್ಲಬೇಡಿ. ಎಲ್ಲರ ಜೊತೆಯಲ್ಲಿ ಹೊಂದಿಕೊಳ್ಳುವುದು ಬಹಳ ಉತ್ತಮ. ಸಾಮಾನ್ಯವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿ ದ್ದವರಿಗೆ ಕೆಲಸದ ಪಾಳಿ ಬದಲಾವಣೆಯ ಸೂಚನೆ ದೊರೆಯುತ್ತದೆ. ವಿದೇಶಿ ಸಂಸ್ಥೆಗಳೊಂದಿಗೆ ಒಪ್ಪಂದ ಗಳನ್ನು ಮಾಡಿಕೊಳ್ಳುವ ಮುಂಚೆ ಕಾನೂನು ತೊಡಕು ಗಳನ್ನು ಸರಿಯಾಗಿ ನೋಡಿಕೊಳ್ಳಿರಿ.
ತುಲಾ
ಖಾಸಗಿ ಕಂಪನಿಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅನುಕೂಲ ಈಗ ದೊರೆಯುತ್ತದೆ. ಮಕ್ಕಳನಡವಳಿಕೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಪತ್ತೆಹಚ್ಚಿ ಸರಿದಾರಿಗೆ ತನ್ನಿರಿ. ನಿಮ್ಮ ಬಂಧುಗಳ ಸಂತೋಷ ಕೂಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತವೆ.ತೀರ್ಥ ಯಾತ್ರೆಗಳನ್ನು ಮಾಡುವ ಅವಕಾಶ ದೊರೆಯುತ್ತದೆ. ಮಾಡುತ್ತಿರುವವರು ತಮ್ಮ ಹಣಕಾಸಿನ ಮೂಲದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಧನದಾಯವು ಮಂದಗತಿಯಲ್ಲಿರುತ್ತದೆ. ಆರಕ್ಷಕರು ಮಾಡುವ ತಪ್ಪಿನಿಂದ ಅವರೇ ಅಪರಾಧಿಗಳಾಗುವ ಸಾಧ್ಯತೆಗಳಿವೆ. ಬೃಹತ್ ಯೋಜನೆಗಳನ್ನು ಆರಂಭ ಮಾಡುವುದು ಸದ್ಯಕ್ಕೆಬೇಡ. ಇದ್ದಕ್ಕಿದ್ದಂತೆ ಬಂಧುಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿರಿ.
ವೃಶ್ಚಿಕ
ಮನೆಯಲ್ಲಿ ನಡೆಯುವ ಕೆಲವು ಘಟನೆಗಳು ನಿಮ್ಮನ್ನು ಚಿಂತೆಗೀಡು ಮಾಡುತ್ತವೆ. ಗುರಿಇಟ್ಟುನಡೆದ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಇರುತ್ತದೆ. ನಿಮ್ಮ ಹಿರಿಯರ ಮಾತನ್ನು ಗೌರವಿಸುವುದರಿಂದ ನಿಮಗೆ ಹೆಚ್ಚು ಒಳಿತಾಗುತ್ತದೆ. ಹಿರಿಯರಿಂದ ನಿಮ್ಮ ಸಂಪ್ರದಾ ಯಗಳನ್ನು ಈಗ ತಿಳಿದುಕೊಳ್ಳಬಹುದು. ಆಸೆ ಪಟ್ಟ ಒಡವೆಗಳನ್ನು ಕೊಳ್ಳಲು ಪ್ರಯತ್ನಪಡುವಿರಿ. ಹಣದ ಒಳಹರಿವು ಉತ್ತಮವಾಗಿದ್ದರೂ ಅಷ್ಟೇ ಖರ್ಚು ಸಹ ಬರುತ್ತದೆ. ಕೃಷಿಭೂಮಿಯನ್ನು ಕೊಳ್ಳುವಯೋಗವಿದೆ. ಕೃಷಿ ಸಂಬಂಧಿತ ಚಟುವಟಿಕೆಗಳು ಭರದಿಂದ ಸಾಗು ತ್ತವೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ವಿದೇಶಿ ಸಂಸ್ಥೆಗಳೊಂದಿಗೆ ಹಣಕಾಸಿನ ವ್ಯವಹಾರ ಮಾಡುವವರು ಅವರ ದಾಖಲೆಗಳ ಬಗ್ಗೆ ಎಚ್ಚರದಿಂದ ಓದಿರಿ. ಗಾರಿಕೆ ಮಾಡುವವರಿಗೆ ಹೈನುಗಾರಿಕೆಯನ್ನು ಮಾಡುವವರಿಗೆ ಅಭಿವೃದ್ಧಿಯ ಪಥ ತೆರೆದುಕೊಳ್ಳು ತ್ತದೆ.
ಧನು
ಹೊಸ ವಾಹನ ಕೊಳ್ಳಲು ಆಲೋಚನೆ ಮಾಡುವಿರಿ. ಹೊರಗಿನ ಆಹಾರವನ್ನು ಸೇವಿಸುವಾಗ ಸಾಕಷ್ಟು ಎಚ್ಚರ ವಹಿಸಿರಿ. ಜನರಿಗೆ ನೀವು ಮಾಡುವ ನಿಸ್ವಾರ್ಥ ಸೇವೆಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆ ಯುತ್ತವೆ. ರಕ್ಷಣಾ ಸೇವೆಯಲ್ಲಿರುವ ಕೆಲವರಿಗೆ ಶಿಸ್ತು ಬದ್ಧ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಗಣ್ಯ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಗೌರವ ಹೆಚ್ಚು ವುದರ ಜೊತೆಗೆ ಕೆಲಸ ಕಾರ್ಯಗಳು ಸುಲಭವಾಗಿ ಆಗುವುದು. ಮಕ್ಕಳಿಗಾಗಿ ಹೊಸ ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಹೋಟೆಲ್ ಉದ್ಯಮದವರಿಗೆ ವರಮಾನ ಹೆಚ್ಚುತ್ತದೆ. ಹಣ್ಣು ಬೆಳಗಾರರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಬಂಧುಗಳ ನಡೆಸುವ ತೀರ್ಮಾನದಲ್ಲಿ ಕಾದುನೋಡುವ ತಂತ್ರಅನುಸರಿಸಿರಿ. ಶತ್ರುಗಳನ್ನು ಮಟ್ಟಹಾಕಲು ಉತ್ತಮಉಪಾಯವನ್ನು ಅನುಸರಿಸುವಿರಿ.
ಮಕರ
ನೀವು ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಉತ್ತಮಗೌರವ ದೊರೆಯುತ್ತದೆ. ನಿಮ್ಮ ಮಕ್ಕಳ ಆಯ್ಕೆಯಂತೆ ಖರೀದಿಸಿದ ಆಸ್ತಿಯ ಮೌಲ್ಯ ಸಾಕಷ್ಟು ಹೆಚ್ಚಾಗುತ್ತದೆ. ಕಷ್ಟವಾದರೂ ನಿಮ್ಮ ಕೆಲಸಗಳನ್ನು ಬಹಳಶ್ರದ್ಧೆಯಿಂದ ಮಾಡುವಿರಿ.ಸುಗಂಧದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ಈಗ ಸಾಕಷ್ಟು ಹೆಚ್ಚಾಗುತ್ತದೆ.ಗೃಹಅಲಂಕಾರ ವಸ್ತುಗಳನ್ನುತಯಾರಿಸಿ ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ವಿದೇಶಿ ಭಾಷಾತಜ್ಞರಿಗೆ ಬೇಡಿಕೆಹೆಚ್ಚುತ್ತದೆ. ವಿದೇಶಿ ಭಾಷೆ ಯನ್ನು ಕಲಿಯಲು ಇಚ್ಛಿಸುವವರಿಗೆ ಅನುಕೂಲತೆ ದೊರೆಯುತ್ತದೆ. ವಿದೇಶದಲ್ಲಿ ನೆಲೆಸಿರುವವರಿಗೆ ಇಚ್ಛೆ ಪಟ್ಟಿದ್ದ ಆಸ್ತಿಯನ್ನು ಖರೀದಿಸುವ ಯೋಗವಿದೆ. ತಂದೆಯಿಂದ ಆಸ್ತಿ ದೊರಕುವ ಸಾಧ್ಯತೆ ಇದೆ ಹಾಗೂ ಸಾಂಪ್ರದಾಯಿಕ ಕೃಷಿಯ ಬಗ್ಗೆ ಅವರಿಂದ ತಿಳುವಳಿಕೆ ಪಡೆಯುವಿರಿ.
ಕುಂಭ
ಉದಯೋನ್ಮುಖ ಕಲಾವಿದರುಗಳಿಗೆ ಉತ್ತಮ ಹೆಸರು ಬರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಕಾಶವಿದೆ. ಹಿರಿಯರು ಕುಟುಂಬದ ಗೌರವವನ್ನು ಉಳಿಸಲು ಬಹಳ ಪ್ರಯತ್ನ ಪಡುವರು. ನೂತನ ವಾಹನಕೊಳ್ಳುವ ಯೋಚನೆಯನ್ನು ಸರಿಯಾಗಿ ಪರಿಶೀಲನೆ ಮಾಡಿರಿ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ತಳೆಯುವಿರಿ. ಕಾರ್ಯಕ್ರಮಗಳ ನಿರ್ವಹಣೆ ಮಾಡುವವರು ಲೋಪ ದೋಷಗಳನ್ನು ಸರಿಪಡಿಸಿ ಕೊಳ್ಳುವುದು ಮುಖ್ಯ. ಹಣದ ಹರಿವು ಮಧ್ಯಮಗತಿಯಲ್ಲಿ ಇರುತ್ತದೆ. ಸಂಗಾತಿಯಸುಖಕ್ಕಾಗಿ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆ ಇದೆ. ಸಂಗಾತಿಗೆ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಸರ್ಕಾರದ ಕಂಪನಿಗಳ ಜೊತೆ ಮಾಡಿದ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಬಿತ್ತನೆ ಬೀಜವನ್ನು ಉತ್ಪಾದಿಸುವವರಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುತ್ತದೆ.
ಮೀನ
ಕುಶಲಕರ್ಮಿಗಳಿಗೆ ಹೆಚ್ಚಿನ ಕೆಲಸ ದೊರೆಯುವ ಸಾಧ್ಯತೆ ಇದೆ. ವಾಹನಗಳನ್ನು ರಿಪೇರಿಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ನೀವು ಬಂಧುಗಳೊಡನೆ ನಿರಂತರವಾಗಿ ಮಾಡಿಕೊಳ್ಳುತ್ತಿ ರುವ ಎಡವಟ್ಟುಗಳು ನಿಮಗೆ ದೊಡ್ಡ ಪಾಠ ಕಲಿಸಬ ಹುದು. ಹೆಚ್ಚಿದ ಜವಾಬ್ದಾರಿಗಳು ನಿಮಗೆ ಒತ್ತಡವನ್ನು ತರುತ್ತದೆ.ನಿಮ್ಮ ನಿರ್ಧಾರಗಳಿಗೆ ನೀವು ಹೆಚ್ಚಿನ ಬದ್ಧತೆ ತೋರಿರಿ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರು ತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಆದಾಯ ಬರುವುದು ಕಷ್ಟವಾಗಬಹುದು. ಸಂಗಾತಿಗೆ ತವರಿನಿಂದ ಕೃಷಿ ಭೂಮಿ ಸಿಗುವ ಯೋಗವಿದೆ. ಧಾರ್ಮಿಕ ವಿಷಯಗ ಳಲ್ಲಿ ವಿನಾಕಾರಣ ಹಸ್ತಕ್ಷೇಪ ಮಾಡುವುದು ಸರಿಯಲ್ಲ.