ವಾರ ಭವಿಷ್ಯ: ಈ ರಾಶಿಯವರಿಗೆ ಮನಸ್ಸಿನಲ್ಲಿ ಯಾವುದೋ ರೀತಿಯ ಚಿಂತೆ ಕಾಡುತ್ತದೆ
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 20 ಡಿಸೆಂಬರ್ 2025, 23:39 IST
Last Updated 20 ಡಿಸೆಂಬರ್ 2025, 23:39 IST
ವಾರ ಭವಿಷ್ಯ
ಮೇಷ
ಹಿರಿಯರಿಂದ ಗೌರವ ದೊರೆಯುವ ಸಾಧ್ಯತೆಗಳಿವೆ. ಆದಾಯವು ಕಡಿಮೆ ಇದ್ದು ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಹಿರಿಯರ ಆಸ್ತಿ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಈಗ ಹೆಚ್ಚು ಶ್ರಮಹಾಕಲೇಬೇಕಾದ ಅನಿವಾರ್ಯತೆ ಇದೆ. ಔಷಧಿ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಹತ್ತಿ ಬಟ್ಟೆಯನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ.
( ಅಶ್ವಿನಿ ಭರಣಿ ಕೃತಿಕ 1)
ವೃಷಭ
ವಾರದ ಆರಂಭದಲ್ಲಿ ಯಾವುದೇ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ಆದಾಯವು ಅಗತ್ಯವನ್ನು ಪೂರೈಸುತ್ತದೆ. ನಿಮ್ಮ ನಿರ್ಧಾರಗಳು ದೃಢವಾಗಿರುತ್ತವೆ. ಒಡಹುಟ್ಟಿದವರ ಸಹಕಾರ ದೊರೆಯುತ್ತದೆ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಿ. ತೆರಿಗೆ ತಜ್ಞರಿಗೆ ಈಗ ಪದೋನ್ನತಿ ದೊರೆಯುತ್ತದೆ. ನೂತನ ವಾಹನದ ಖರೀದಿ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ಮಕ್ಕಳ ನಡುವೆ ಹೊಂದಾಣಿಕೆ ಕಡಿಮೆಯಾಗಿ ನಿಮಗೆ ಬೇಸರವಾಗುತ್ತದೆ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಗೌರವಯುತವಾದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಆಸ್ತಿ ಮಾರಾಟಗಾರರಿಗೆ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ನರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳ ಕಾಣಬಹುದು. ವ್ಯವಹಾರದಲ್ಲಿ ಹೊಸ ವ್ಯಕ್ತಿಗಳಿಂದ ಸಹಕಾರ ದೊರೆಯುತ್ತದೆ. ಸಂಗೀತ ವಿದ್ವಾಂಸರುಗಳಿಗೆ ಪುರಸ್ಕಾರ ದೊರೆಯುವ ಸಾಧ್ಯತೆಯಿದೆ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಮನಸ್ಸಿನಲ್ಲಿ ಯಾವುದೋ ರೀತಿಯ ಚಿಂತೆ ಕಾಡುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಹಿರಿಯರ ಸಹಕಾರ ದೊರೆಯುವುದು ಕಷ್ಟ. ಕಣ್ಣಿನ ದೋಷಗಳು ಕೆಲವರನ್ನು ಕಾಡಬಹುದು. ಆಸ್ತಿ ಮಾಡುವ ಉತ್ಸಾಹ ಹೆಚ್ಚು ತ್ತದೆ. ಸಂಗಾತಿಯು ಕುಟುಂಬಕ್ಕಾಗಿ ಹೆಚ್ಚು ಶ್ರಮ ವಹಿಸುವರು. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಸಂಗಾತಿಯ ಆದಾಯ ಕಡಿಮೆಯಾಗಬಹುದು. ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಧರ್ಮ ಕಾರ್ಯಗಳನ್ನು ಮಾಡುವ ಬಗ್ಗೆ ಹೆಚ್ಚು ಒಲವನ್ನು ತೋರುವಿರಿ. ಹಿರಿಯರು ಮಕ್ಕಳೊಂದಿಗೆ ವಾದವಿವಾದಗಳನ್ನು ಮಾಡದಿರುವುದು ಉತ್ತಮ. ಸ್ತ್ರೀಯರೊಂದಿಗೆ ಆರ್ಥಿಕ ವ್ಯವಹಾರವನ್ನು ಮಾಡುವಾಗ ಎಚ್ಚರಿಕೆ ಇರಲಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಉದ್ದಿಮೆಯೊಂದರ ಸ್ಥಾಪನೆಗೆ ಬೇಕಾದ ಪರವಾನಗಿಗಳನ್ನು ಪ್ರಯತ್ನ ಪಟ್ಟು ಪಡೆಯಬಹುದು. ಜಮೀನು ವ್ಯವಹಾರಗಳಲ್ಲಿ ತಲೆಹಾಕದಿರುವುದು ಬಹಳ ಉತ್ತಮ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸ್ಥಿರಾಸ್ತಿಯನ್ನು ಮಾಡಿಕೊಳ್ಳವ ಯೋಗವಿದೆ. ಉನ್ನತ ಶಿಕ್ಷಣ ಮಾಡಬೇಕೆನ್ನುವವರ ಆಸೆಗೆ ಹಿನ್ನಡೆಯಾಗಬಹುದು. ವಾದ-ವಿವಾದಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ. ಈಗ ಯಂತ್ರೋಪಕರಣಗಳ ವ್ಯಾಪಾರ ಮಾಡುವರಿಗೆ ವ್ಯಾಪಾರ ವೃದ್ಧಿಸುತ್ತದೆ. ಬಂಧುಗಳೊಡನೆ ಉತ್ತಮ ಸಂಬಂಧವನ್ನು ಹೊಂದುವುದು ನಿಮಗೆ ಅನುಕೂಲ. ಕೆಲವು ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯಾಗುವ ಸೂಚನೆಯಿದೆ. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಬಣ್ಣ ಬಣ್ಣದ ಮಾತುಗಳಿಂದ ಜನಬೆಂಬಲ ಪಡೆಯಲೆತ್ನಿಸುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಖರ್ಚು ಹೆಚ್ಚಾಗುವ ಸಂದರ್ಭಗಳಿವೆ. ಸಂಗಾತಿಯ ವಾದ ವಿವಾದಗಳಿಂದಾಗಿ ಸಾಕಷ್ಟು ಬೇಸರ ಮೂಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಲ್ಪಯಶಸ್ಸು ಇರುತ್ತದೆ. ಸಂಪೂರ್ಣವಾಗಿ ತಾವೇ ಕುಟುಂಬವನ್ನು ನಡೆಸುತ್ತಿರುವ ಮಹಿಳೆಯರಿಗೆ ಉತ್ತಮ ಗೌರವ ಸಿಗುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಅಮೂಲ್ಯವಾದ ಪಾರಂಪರಿಕ ವಸ್ತುಗಳನ್ನು ಸಂಗ್ರಹ ಮಾಡುವಿರಿ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಬಹಳ ಬುದ್ಧಿವಂತಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಕೃಷಿಯಿಂದ ಆದಾಯವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಿಂದ ಆದಾಯವಿರುತ್ತದೆ. ವೃತ್ತಿಧರ್ಮ ನಿಮ್ಮನ್ನು ಕಾಪಾಡುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಬೇಕಾದ ಸಲಕರಣೆಗಳು ಒದಗಿಬರುತ್ತವೆ. ಅಂದುಕೊಂಡ ಕೆಲಸಗಳಲ್ಲಿ ಮಿತ್ರರ ಸಹಕಾರದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೇತನವನ್ನು ಕಾಣಬಹುದು. ಆದಾಯವು ಕಡಿಮೆ ಇದ್ದರೂ ನಿಭಾಯಿಸುವ ಶಕ್ತಿ ಇರುತ್ತದೆ. ಬಂಧುಗಳ ಸಹಕಾರ ಕೇಳಬೇಡಿ. ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಾಯಧನ ಹರಿದು ಬರುತ್ತವೆ. ಬಂಧುಗಳ ಮಧ್ಯಪ್ರವೇಶದಿಂದಾಗಿ ಪ್ರೇಮ ಪ್ರಕರಣಗಳು ಯಶಸ್ಸನ್ನು ಕಾಣುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸುವ ಸಾಧ್ಯತೆಗಳಿವೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ಬಹಳ ಸಂಯಮದಿಂದ ಇರುವಿರಿ. ಆದಾಯವು ಕಡಿಮೆ ಇರುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದೇಶಿ ಭಾಷಾಬೋಧಕರಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ. ಕೃಷಿಯಿಂದ ಆದಾಯ ಕಡಿಮೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಲೇಬೇಕು. ವ್ಯವಹಾರಗಳಿಂದ ನಿಮ್ಮ ಸಂಪರ್ಕವನ್ನು ವೃದ್ಧಿ ಮಾಡಿಕೊಳ್ಳುವಿರಿ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸದೊಂದಿಗೆ ಆದಾಯವೂ ಹೆಚ್ಚುತ್ತದೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಯುವಕರು ಉಡಾಫೆ ಮಾತಿನಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ನ್ಯಾಯಾಲಯ ಸಂಬಂಧಿ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣಬಹುದು. ಸ್ವ ಉದ್ಯೋಸ್ಥರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಕುಟುಂಬ ಸಮೇತರಾಗಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಅತಿಯಾಗಿ ಕೆಲಸ ಮಾಡಬೇಕಾದೀತು. ಆದಾಯವು ಏರಿಕೆ ಹಾದಿಯನ್ನು ಕಾಣುತ್ತದೆ. ವೃತ್ತಿಯಲ್ಲಿ ಆದಾಯ ಹೆಚ್ಚುತ್ತದೆ. ನೀವಾಗಿಯೇ ಬಂಧುಗಳ ವಿರೋಧವನ್ನು ಕಟ್ಟಿಕೊಳ್ಳುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಶುಭ ಸೂಚನೆ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)