ವಾರ ಭವಿಷ್ಯ | ಅಕ್ಟೋಬರ್ 19 ರಿಂದ 25ರವರೆಗೆ: ಭೂಮಿ ಖರೀದಿ ಮಾಡುವ ಯೋಗವಿದೆ..
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
ವಾರ ಭವಿಷ್ಯ
ಮೇಷ
ನಿಮ್ಮ ವರ್ಚಸ್ಸನ್ನು ವೃದ್ಧಿಮಾಡಿಕೊಳ್ಳುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭವಿರುತ್ತದೆ. ಮನೆಪಾಠ ಮಾಡುವವರ ಆದಾಯ ಹೆಚ್ಚುತ್ತದೆ. ಮನಸ್ಸಿನ ಚಂಚಲತೆ ಹೆಚ್ಚಿರುತ್ತದೆ. ಸಿಹಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ.
ವೃಷಭ
ಆರ್ಥಿಕ ಸಂಪನ್ಮೂಲಗಳು ಅಗತ್ಯವನ್ನು ಪೂರೈಸುವಷ್ಟು ಇರುತ್ತವೆ. ಮಾತಿನಲ್ಲಿ ಬಹಳ ತಂತ್ರಗಾರಿಕೆ ಉಪಯೋಗಿಸಿ ಮಾತನಾಡುವಿರಿ. ಹಿರಿಯರ ಬೆಂಬಲ ನಿಮಗೆ ಸಾಕಷ್ಟು ಸಿಗುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಏರಿಳಿತಗಳನ್ನು ಕಾಣಬಹುದು. ಭೂಮಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಗೃಹಿಣಿ ಮಾತಿನ ಬಗ್ಗೆ ಅತ್ಯಂತ ಜಾಗರೂಕವಾಗಿರುವುದು ಬಹಳ ಒಳ್ಳೆಯದು.
ಮಿಥುನ
ವಾರದ ಆರಂಭದಲ್ಲಿ ಬಹಳ ಸಂತೋಷವಿರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪುತ್ತದೆ. ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ಬಗ್ಗೆ ಈಗ ಆಲೋಚನೆಗಳು ಬರಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣವಿರುತ್ತದೆ. ನಿಮ್ಮ ಕೆಲವು ಸಮಸ್ಯೆಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳುವಿರಿ. ಕಟ್ಟಡ ನಿರ್ಮಾಣ ಕಾರ್ಯದಲ್ಲಿರುವ ಎಂಜಿನಿಯರ್‌ಗಳಿಗೆ ಈಗ ಬೇಡಿಕೆ ಹೆಚ್ಚುತ್ತದೆ.
ಕರ್ಕಾಟಕ
ಗೌರವಾನ್ವಿತರ ಸಂಪರ್ಕಗಳು ದೊರೆಯುತ್ತವೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಮಹಿಳೆಯರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರವಿರಲಿ, ಮೋಸ ಹೋಗುವ ಸಾಧ್ಯತೆಗಳಿವೆ. ಕೆಲಸದಲ್ಲಿ ಹೆಚ್ಚಿನ ಒತ್ತಡ ಕಂಡು ಬಂದರೂ, ಅದನ್ನು ನಿಭಾಯಿಸುವ ಶಕ್ತಿ ಇರುತ್ತದೆ. ಮಿತವ್ಯಯವನ್ನು ಸಾಧಿಸುವುದು ನಿಮಗೆ ಉತ್ತಮ. ರಾಜಕೀಯ ನಾಯಕರುಗಳಿಗೆ ಅನಿರೀಕ್ಷಿತ ಹಿನ್ನಡೆಯಾಗುವ ಸಂದರ್ಭವಿದೆ.
ಸಿಂಹ
ವಾರದ ಆರಂಭದಲ್ಲಿ ಅನಿಶ್ಚಿತತೆ ಇರುತ್ತದೆ. ಆದಾಯವು ಚೇತರಿಕೆಯ ಹಾದಿಯಲ್ಲಿರುತ್ತದೆ. ಉದ್ಯೋಗಿಗಳಿಗೆ ಹಿತಶತ್ರುಗಳ ಕಾಟ ಇರುತ್ತದೆ. ಕುಟುಂಬದಲ್ಲಿ ಹೆಚ್ಚಿನ ಸಂತೋಷವನ್ನು ಕಾಣುವಿರಿ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ಹೊಸ ಉದ್ಯೋಗದ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತದೆ. ಅತಿಯಾಗಿ ಮಾತನಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ಕನ್ಯಾ
ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಈಗ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಶ್ರಮ ವಹಿಸಬೇಕು. ರಾಜಕೀಯ ವ್ಯಕ್ತಿಗಳಿಗೆ ಅವರ ಹಿಂಬಾಲಕರಿಂದ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು.
ತುಲಾ
ಆತ್ಮಾಭಿಮಾನ ಬಹಳ ಹೆಚ್ಚು ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಿಂದ ಜನರ ನಡುವೆ ಮುಜುಗರಕ್ಕೆ ಒಳಗಾಗುವಿರಿ. ವಿದೇಶದಲ್ಲಿ ಓದುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಪತ್ನಿಯಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳಿಂದ ಕಿರುಕುಳ ಬರಬಹುದು. ಆಪ್ತ ಸ್ನೇಹಿತನ ದ್ವಂದ್ವ ನಿಲುವಿನಿಂದಾಗಿ ವ್ಯವಹಾರದಲ್ಲಿ ಸಲ್ಪ ಹಿನ್ನಡೆಯಾಗಬಹುದು.
ವೃಶ್ಚಿಕ
ದೈನಂದಿನ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಡಿಮೆಯಾದಂತೆ ಅನಿಸುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿದ್ದು, ಖರ್ಚನ್ನು ಹಿಡಿತದಲ್ಲಿಡಿ. ನಿಮ್ಮ ನಡವಳಿಕೆಯ ಮೇಲೆ ಮಕ್ಕಳು ಪರಿಣಾಮ ಬೀರುತ್ತಾರೆ. ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಚ್ಚರವಹಿಸಿ. ಉದ್ಯಮಿಗಳಿಗೆ ಇದ್ದ ಕಾರ್ಮಿಕರ ಸಮಸ್ಯೆ ಬಗೆಹರಿಯುವುದು. ಮೇಲಿನ ಅಧಿಕಾರಿಗಳೊಡನೆ ವಿರೋಧ ಕಟ್ಟಿಕೊಳ್ಳುವುದು ಬೇಡ.
ಧನು
ಮನಸ್ಸಿನಲ್ಲಿ ದ್ವಂದ್ವವಿರುತ್ತದೆ. ಆದಾಯವು ಕಡಿಮೆ ಇದ್ದರೂ ನಿಭಾಯಿಸುವ ಶಕ್ತಿ ಇರುತ್ತದೆ. ಬಂಧುಗಳು ನಿಮ್ಮನ್ನು ನೋಡಿ ಅಸೂಯೆ ಪಡುವರು. ಕೃಷಿಭೂಮಿಯನ್ನು ಖರೀದಿ ಮಾಡುವ ಯೋಗವಿದೆ. ಕೃಷಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಗೊಂದಲಗಳನ್ನು ಕಾಣಬಹುದು. ಕೋರ್ಟ್, ಕಚೇರಿ ಸಂಬಂಧದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ರಂಗ ಕಲಾವಿದರುಗಳಿಗೆ ಕೆಲವು ಸಂಸ್ಥೆಗಳಿಂದ ಗೌರವ ದೊರೆಯುತ್ತದೆ.
ಮಕರ
ನಿಮ್ಮ ಬಗ್ಗೆ ಆಲೋಚಿಸಿ ಮೇಲೆ ಏರುವ ಯತ್ನ ಮಾಡುವಿರಿ. ಆದಾಯವು ಸ್ವಲ್ಪ ಅನಿಶ್ಚಿತತೆಯಿಂದ ಕೂಡಿರುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಪುರಾತನ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ವಿಸ್ತರಣೆಯಾಗುತ್ತದೆ. ಷೇರು ಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ.
ಕುಂಭ
ಕೆಲವು ಕಲಾವಿದರುಗಳಿಗೆ ವಿದೇಶಿ ಮಾಧ್ಯಮಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಆರ್ಥಿಕವಾಗಿ ನಿಧಾನಗತಿಯ ಚೇತರಿಕೆ ಕಾಣಬಹುದು. ಬಂಧುಗಳಿಗೆ ಸಾಕಷ್ಟು ಸಲಹೆಗಳನ್ನು ಕೊಡುವಿರಿ. ಸ್ಥಿರಾಸ್ತಿ ಕೊಳ್ಳುವ ಬಗ್ಗೆ ಸಾಕಷ್ಟು ಆಲೋಚನೆಯನ್ನು ಮಾಡುವಿರಿ. ಉಪನ್ಯಾಸಕರಿಗೆ ಉತ್ತಮ ಸ್ಥಾನ ದೊರಕುತ್ತದೆ. ಕುಟುಂಬದಲ್ಲಿ ಮುಸುಕಿನ ಗುದ್ದಾಟ ನಡೆಯಬಹುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ.
ಮೀನ
ಅತಿ ಶ್ರಮಪಟ್ಟು ಕೆಲಸ ಮಾಡಬೇಕಾದೀತು. ಆದಾಯವು ಕಡಿಮೆ ಇರುತ್ತದೆ. ನಿಮ್ಮೆಲ್ಲ ಕಾರ್ಯಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ಗಣಿಗಾರಿಕೆ ಮಾಡುವವರಿಗೆ ಈಗ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಸಿದ್ಧ ಉಡುಪುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ.