ADVERTISEMENT

ಇಂದಿನಿಂದ ‘ಸುವರ್ಣ ರಂಗೋತ್ಸವ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ನಗರದಲ್ಲಿ ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗಿರುವ ರವೀಂದ್ರ ಕಲಾಕ್ಷೇತ್ರದ ಸುವರ್ಣ ವರ್ಷ ಆಚರಣೆಯಲ್ಲಿ ವಿವಿಧ ಸಂಘಟನೆಗಳು, ಸಂಸ್ಥೆಗಳು ರಂಗೋತ್ಸವಗಳನ್ನು ಹಮ್ಮಿಕೊಳ್ಳುವ ಮೂಲಕ ಪಾಲ್ಗೊಳ್ಳುತ್ತಿವೆ.

ಇದೀಗ ‘ನಾಟಕ ಬೆಂಗಳೂರು’ ತಂಡ ಮಾ.10ರಿಂದ ಮಾ.19ರವರೆಗೆ ಆಯೋಜಿಸಿರುವ ರಂಗೋತ್ಸವ ಇದಕ್ಕೆ ಹೊಸ ಸೇರ್ಪಡೆ. ರಂಗೋತ್ಸವದಲ್ಲಿ ದಿನವೂ ತಲಾ ಒಂದರಂತೆ ಒಟ್ಟು ಒಂಬತ್ತು ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಸಂಜೆ ೭ಕ್ಕೆ ನಾಟಕ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.