ADVERTISEMENT

ಇದು ಉಯ್ಯಾಲೆ ಹಬ್ಬ

ಸಿ.ಎಸ್.ಸುರೇಶ್
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
ಇದು ಉಯ್ಯಾಲೆ ಹಬ್ಬ
ಇದು ಉಯ್ಯಾಲೆ ಹಬ್ಬ   

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಬಲ್ಲಮಾವಟಿ ಗ್ರಾಮದಲ್ಲಿ ಏಪ್ರಿಲ್ 27 ಮತ್ತು 28 ರಂದು ವಿಶಿಷ್ಟ ಉತ್ಸವವೊಂದು ನಡೆಯುತ್ತದೆ. ಭದ್ರಕಾಳಿ ಅಮ್ಮನ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಇಟ್ಟು ತೂಗುವ ವಿಶಿಷ್ಟ ಆಚರಣೆ ಇದು. ಉಯ್ಯಾಲೆ ಹಬ್ಬ ಎಂದೇ ಹೆಸರುವಾಸಿ.

ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಜರುಗುವ ಈ ಹಬ್ಬ ಗ್ರಾಮೀಣ ಸಂಸ್ಕೃತಿಯ ಪ್ರತೀಕ. ಸಾಮಾನ್ಯವಾಗಿ ಬೇರೆ ದೇವಸ್ಥಾನಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ನೃತ್ಯ, ಸಂಗೀತ ಇರುತ್ತದೆ.

ಆದರೆ ಬಲ್ಲಮಾವಟಿಯಲ್ಲಿ ಮಾತ್ರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ದೊಡ್ಡ ಕಬ್ಬಿಣದ ರಾಟೆಯಲ್ಲಿ ದೇವರನ್ನು ತೂಗುತ್ತಾರೆ. ಹೀಗಾಗಿ ಬಲ್ಲಮಾವಟಿ, ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ಮಂದಿರಕ್ಕೆ ರಾಟೆ ದೇವಾಲಯ ಎಂಬ ಇನ್ನೊಂದು ಹೆಸರೂ ಇದೆ.

ಇದೇ ಸಂದರ್ಭದಲ್ಲಿ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳೂ ಇರುತ್ತವೆ. ಬಳಿಕ ಹಲವು ಕೋಲಗಳು ನೆರೆದ ಜನಸ್ತೋಮವನ್ನು ಆಕರ್ಷಿಸುತ್ತವೆ. ಇದರಲ್ಲಿ ಭದ್ರಕಾಳಿ, ಕ್ಷೇತ್ರಪಾಲ ಹಾಗೂ ಅಯ್ಯಪ್ಪ ಶಾಸ್ತಾವು ಕೋಲ ಪ್ರಮುಖವಾದವುಗಳು.

ಇದಲ್ಲದೆ `ಆಂಗೋಲ ಪೋಂಗೋಲ~ ಎಂಬ ಆಚರಣೆಯಲ್ಲಿ ಯುವಕರು ಯುವತಿಯರಂತೆ, ಯುವತಿಯರು ಯುವಕರಂತೆ ವೇಷ ಧರಿಸಿ ಹರಕೆ ಒಪ್ಪಿಸುತ್ತಾರೆ.
  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.