ADVERTISEMENT

ನಗ್ನ ಶಿವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:30 IST
Last Updated 2 ಫೆಬ್ರುವರಿ 2011, 18:30 IST

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾ. ಆಲಗೂಡಿನ ಸಿದ್ದೇಶ್ವರ ದೇವಸ್ಥಾನದಲ್ಲಿರುವ ಶಿವನ  ಮೂರ್ತಿ ಅತ್ಯಂತ ವಿಶಿಷ್ಟವಾದದು. ಇದು ತಲಕಾಡಿನ ಗಂಗರ ಕಾಲಕ್ಕೆ ಸಂಬಂಧಿಸಿದ್ದು. ಮೂರು ಅಡಿ ಎತ್ತರದ, ಒಂದೂವರೆ ಅಡಿ ಅಗಲವಿರುವ ಈ ಶಿವನಿಗೆ ನಿತ್ಯ ಪೂಜೆ ಸಲ್ಲುತ್ತಿದೆ.

ಶಿಲ್ಪದಲ್ಲಿರುವ ಶಿವ ಸಮ ಭಂಗಿಯಲ್ಲಿ ನಿಂತಿದ್ದಾನೆ. ನಗ್ನ ರೂಪದಲ್ಲಿರುವುದು ಈ ಶಿಲ್ಪದ ವೈಶಿಷ್ಟ್ಯ. ಚತುರ್ಭುಜದ ಶಿವ ಹಸ್ತಗಳಲ್ಲಿ ತ್ರಿಶೂಲ, ಢಮರು, ಫಲ ಹಿಡಿದಿದ್ದಾನೆ. ಇನ್ನೊಂದು ಹಸ್ತ ಭಕ್ತರಿಗೆ ಅಭಯ ನೀಡುತ್ತಿದೆ.

ಪ್ರಸನ್ನ ಮುಖ ಮುದ್ರೆಯ ಮುಖದಲ್ಲಿ ಶಿವನ ಮೂಗು ನೀಳವಾಗಿದೆ. ಕಣ್ಣುಗಳು ಸುಂದರವಾಗಿವೆ.ತಲೆಯ ಮೇಲ್ಭಾಗದಲ್ಲಿ  ಕಟ್ಟಿದ ಜಡೆ ಸೊಗಸಾಗಿ ಮೂಡಿಬಂದಿದೆ. ಶಿವನ ದೇಹದ ಮೇಲೆ ಸರ್ಪ ಸುತ್ತಿಕೊಂಡಿದೆ.

ಈ ಶಿಲ್ಪದ ಇನ್ನೊಂದು ವಿಶೇಷವೆಂದರೆ ಶಿವನ ಒಂದು ಪಾದ ಪೂರ್ವಾಭಿಮುಖವಾಗಿದೆ. ಇನ್ನೊಂದು ಪಾದ ಸ್ವಲ್ಪ ದಕ್ಷಿಣಾಭಿಮುಖವಾಗಿದೆ. ಅದಕ್ಕೆ ಏನು ಕಾರಣ ಎನ್ನುವುದು ಯಾರಿಗೂ ಗೊತ್ತಿಲ್ಲ. ಶಿವನ ಪಕ್ಕದಲ್ಲಿ ನಾಯಿಯ ಉಬ್ಬು ಶಿಲ್ಪವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.