
ಈಜಿಪ್ಟ್‌ನ ಫೆರೋಗಳ ಆಳ್ವಿಕೆಯಲ್ಲಿ ಲಕ್ಸರ್ ಅತ್ಯಂತ ವೈಭವದ ನಗರ. ಗ್ರೀಕರಿಗೆ ಥೀಬ್ಸ್ ಎಂದೂ ಸ್ಥಳೀಯರಿಗೆ ವೆಸಿ ಅಥವಾ ನೇ ನಗರವೆಂದೂ ತಿಳಿದಿದ್ದ ಇದು ಆಗಿನ ಕಾಲದಲ್ಲಿ ಸಂಪದ್ಭರಿತವಾಗಿತ್ತು. ನೈಲ್ ನದಿಯ ಪೂರ್ವದಂಡೆಯಲ್ಲಿ ಲಕ್ಸರ್ ಇದ್ದರೆ, ವೆಸ್ಟ್ ಬ್ಯಾಂಕ್ ಎಂದು ಕರೆಯುವ ಪಶ್ಚಿಮ ದಂಡೆಯಲ್ಲಿ ಮೂರು ಮುಖ್ಯ ಸ್ಥಳಗಳಿವೆ: ಕಿಂಗ್ಸ್ ವ್ಯಾಲಿ, ಕ್ವೀನ್ಸ್ ವ್ಯಾಲಿ ಮತ್ತು ಹಟ್‌ಷೆಪ್‌ಸುಟ್ ರಾಣಿಯ ದೇವಸ್ಥಾನ.
ನೈಲ್ ನದಿಯ ಪಶ್ಚಿಮ ದಂಡೆಯ ಮೇಲೆ ಇರುವ ಇದನ್ನು ‘ಸಿಟಿ ಆಫ್ ದ ಡೆಡ್’(ಮೃತನಗರ) ಎಂದು ಕರೆಯುತ್ತಾರೆ. ಅಲ್ಲಿ ಪ್ರತಿ ಮೂಲೆಯಲ್ಲೂ ದೊರೆಗಳ ಗೋರಿಗಳಿವೆ. ಮೊದಲನೆ ಸಮಾಧಿಯೊಳಗಿನ ತಂಪುನೆಲದಲ್ಲಿ ನಿಂತು ಚಿತ್ತಾರದಲಂಕಾರದ ಮಾಳಿಗೆಯನ್ನೂ ನಡುಮನೆಯನ್ನೂ ನೋಡಿ, ಇಂತಹ ಕಲ್ಲಿನ ಶವಸಂಪುಟಗಳನ್ನು ನಿರ್ಮಿಸಿ ಅವುಗಳನ್ನು ಬಹು ಕಲಾವಂತಿಕೆಯಿಂದ ಅಲಂಕರಿಸಿದ ಕೌಶಲ ಹಾಗೂ ಸಂಪತ್ತಿಗಾಗಿ ಇತಿಹಾಸಕಾರರು ಆಶ್ಚರ್ಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.