ADVERTISEMENT

ಪ್ರಯಾಣಕ್ಕೆ ಸರಳ ಮಾರ್ಗಗಳು

​ಪ್ರಜಾವಾಣಿ ವಾರ್ತೆ
Published 1 ಮೇ 2019, 19:30 IST
Last Updated 1 ಮೇ 2019, 19:30 IST
   

ವಿಮಾನ ಪ್ರಯಾಣದ ಟಿಕೆಟ್ ದರ ಹೆಚ್ಚಿಸಿರುವ ಪರಿಣಾಮ, ಬೇಸಿಗೆ ರಜೆಯಲ್ಲಿ ಕುಟುಂಬ ಸಹಿತ ಪ್ರವಾಸ ಮಾಡುವವರು ತೀವ್ರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ತಮ್ಮ ನೆಚ್ಚಿನ ಸ್ಥಳಗಳಿಗೆ ಪ್ರಯಾಣಿಸಲು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದರೂ ವಿಮಾನ ದರದ ಹೆಚ್ಚಳದಿಂದಾಗಿ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಈ ಚಿಂತೆಯನ್ನು ಶಮನ ಮಾಡಲು ಪರ್ಯಾಯ ಆಯ್ಕೆಗಳು ಇಲ್ಲಿವೆ.

ಕ್ಲಿಯರ್‌ ಟ್ರಿಪ್ : ಪ್ರಯಾಣ ಹಾಗೂ ವಿಹಾರ ವೇದಿಕೆ (ಜಾಲತಾಣ) ಕ್ಲಿಯರ್‌ ಟ್ರಿಪ್ ಸಂಸ್ಥೆ ‘ಫೇರ್ ಅಲರ್ಟ್’ ಹಾಗೂ ‘ಟಾಪ್ ಡೀಲ್ಸ್’ ಎನ್ನುವ ಎರಡು ವಿಶಿಷ್ಟ ಸೌಲಭ್ಯಗಳನ್ನು ಹೊಂದಿದೆ. ವಿಮಾನದ ಟಿಕೆಟ್ ದರ ಹೆಚ್ಚಳದ ಸಂದರ್ಭದಲ್ಲಿ ಈ ಎರಡು ಸೌಲಭ್ಯಗಳು ಪ್ರಯಾಣಿಗರಿಗೆ ಸಹಕಾರಿಯಾಗುತ್ತವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಲು ಕಡಿಮೆ ದರದ ವಿಮಾನ ಪ್ರಯಾಣವನ್ನು ಹುಡುಕಲು ಈ ‘ಟಾಪ್ ಡೀಲ್ಸ್’ ಸೌಲಭ್ಯ ಸಹಕಾರಿ. ಟಿಕೆಟ್ ದರದಲ್ಲಿ ಹೆಚ್ಚಳ ಹಾಗೂ ಇಳಿಕೆಯನ್ನು ‘ಫೇರ್ ಅಲರ್ಟ್ಸ್‌’ ನಿಂದ ತಿಳಿದುಕೊಳ್ಳಬಹುದು.

ಝೂಮ್‍ಕಾರ್: ನಗರ ಪ್ರದೇಶದಲ್ಲಿ ಸುತ್ತಾಡಲು ಹಾಗೂ ವೀಕೆಂಡ್‍ನಲ್ಲಿ ಬೇರೆ ಸ್ಥಳಗಳಿಗೆ ಪ್ರಯಾಣಿಸಲು ಝೂಮ್‍ಕಾರ್ ಕಂಪನಿ ಬಾಡಿಗೆ ವಾಹನಗಳನ್ನು ಒದಗಿಸುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಸ್ವಯಂ ಚಾಲನೆಗೆ ಬಾಡಿಗೆ ಕಾರ್ ಸೇವೆ ನೀಡುತ್ತದೆ. ಸುಮಾರು 20 ಕ್ಕೂ ಹೆಚ್ಚು ವಿವಿಧ ಬಗೆಯ ಕಾರುಗಳು ಬಾಡಿಗೆಗೆ ಲಭ್ಯ. ಗ್ರಾಹಕರ ಆದ್ಯತೆಯ ಮೇರೆಗೆ ಕಾರುಗಳನ್ನು ಅವರು ಬಯಸಿದ ಸ್ಥಳಕ್ಕೆ ಬಂದು ನೀಡಲಾಗುವುದು ಅಥವಾ ಗ್ರಾಹಕರೇ ಬಂದು ಕಾರನ್ನು ಬಾಡಿಗೆಗೆ ಪಡೆಯಬಹುದು.

ADVERTISEMENT

ಬ್ಲಾಬ್ಲಾಕಾರ್: ದರವನ್ನು ಮತ್ತೊಬ್ಬರ ಜೊತೆ ಶೇರ್ ಮಾಡಿ ಪ್ರಯಾಣಿಸಲು ಬ್ಲಾಬ್ಲಾಕಾರ್ ಸಹಕಾರಿ. ಕಾರ್ ಬುಕ್ ಮಾಡಿದ ತಕ್ಷಣ ನಿಮಗೆ ಕಾರ್ ಮಾಲಿಕನ ಫೋನ್ ನಂಬರ್ ಒದಗಿಸಲಾಗುತ್ತದೆ. ಕೊನೆ ಕ್ಷಣದಲ್ಲಿ ಪ್ರಯಾಣಕ್ಕೆ ಅಣಿಯಾಗುವವರಿಗೆ ಇದು ಅತ್ಯಂತ ಅನುಕೂಲಕಾರಿ.

ಕನ್ಫರ್ಮ್‌ ಟಿಕೆಟ್: ಇದೊಂದು ಆನ್‍ಲೈನ್ ಟ್ರೈನ್ ಟಿಕೆಟ್ ಬುಕಿಂಗ್ ವೇದಿಕೆ. ಬಜೆಟ್ ಪ್ರಯಾಣಿಕರಿಗೆ ಈ ಆ್ಯಪ್ ಸಹಕಾರಿ. ವೇಟಿಂಗ್ ಲಿಸ್ಟ್ ಟಿಕೆಟ್‍ಗಳು ಕನ್ಫರ್ಮ್ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವುದನ್ನು ಈ ಆ್ಯಪ್ ಊಹಿಸುತ್ತದೆ. ಡೈರೆಕ್ಟ್ ಟ್ರೈನ್‍ಗಳು ಲಭ್ಯವಿಲ್ಲದ್ದ ಪಕ್ಷದಲ್ಲಿ ಪರ್ಯಾಯ ಪ್ರಯಾಣದ ಆಯ್ಕೆಯನ್ನು ಇದು ಗ್ರಾಹಕರಿಗೆ ಸೂಚಿಸುತ್ತದೆ. ಆಫ್‍ಲೈನ್ ಮೋಡ್‍ನಲ್ಲೂ ಸಹ ರಿಯಲ್‌ ಟೈಂನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದು. ಗ್ರಾಹಕರ ಅನುಕೂಲಕ್ಕಾಗಿ ಸ್ಥಳೀಯ ಭಾಷೆಯಲ್ಲೂ ಈ ಆ್ಯಪ್ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.