ADVERTISEMENT

ಅಂಗವಿಕಲರಿಗೆ `ಸಮರ್ಥನಂ' ದಾರಿದೀಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಅಂಗವಿಕಲರು ಹಾಗೂ ಅಂಧರ ಏಳಿಗಾಗಿ `ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್' ಹಲವು ಕ್ರೀಯಾಶೀಲ ಯೋಜನೆಗಳನ್ನು ರೂಪಿಸಿದೆ. ಅವರ ಸಾಮರ್ಥ್ಯ ಮತ್ತು ಶಿಕ್ಷಣಕ್ಕೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ, ಜೀವನ ರೂಪಿಸುವುದು ಈ ಸಂಸ್ಥೆಯ ಉದ್ದೇಶ.

`ಸಮರ್ಥನಂ' ತನ್ನ ಜೀವನಾಧಾರ ಸಂಪನ್ಮೂಲ ಕೇಂದ್ರಗಳಲ್ಲಿ 18 ವರ್ಷ ದಾಟಿದ ಅಂಗವಿಕಲರು, ದೃಷ್ಟಿ ವಿಕಲಚೇತನರಿಗೆ ಹಾಗೂ ಸಣ್ಣ ಮಟ್ಟದ ಬೌದ್ಧಿಕ ನ್ಯೂನತೆ ಇರುವವರಿಗೆ ಹಲವು ರೀತಿಯ ತರಬೇತಿ ನೀಡುತ್ತಿದೆ. ಬೇಸಿಕ್ ಕಂಪ್ಯೂಟರ್ ಕೋರ್ಸ್, ಸ್ಪೋಕನ್ ಇಂಗ್ಲಿಷ್ ಮತ್ತು ಸಂವಹನ ಕೌಶಲ ತರಬೇತಿಗಳನ್ನು ಕೂಡ ನೀಡುತ್ತಿದೆ. ಆರು ವಿವಿಧ ರೀತಿಯ ಇಂಡಸ್ಟ್ರಿ ಸ್ಪೆಸಿಫಿಕ್ ಟ್ರೈನಿಂಗ್ ಸೆಂಟರ್‌ಗಳಲ್ಲಿ ಕೂಡ ಭವಿಷ್ಯ ಕಂಡುಕೊಳ್ಳಲು ಅವಕಾಶವಿದೆ. ಐಟಿ ಟ್ರೈನಿಂಗ್‌ನಲ್ಲಿ ಅಡ್ವಾನ್ಸ್ಡ್ ಕಂಪ್ಯೂಟರ್ ಟ್ರೈನಿಂಗ್ ಜೊತೆಗೆ ಡೇಟಾಬೇಸ್ ಮ್ಯೋನೇಜ್‌ಮೆಂಟ್, ಸಿಸ್ಟಂ ನೆಟ್‌ವರ್ಕಿಂಗ್, ಹಾರ್ಡ್‌ವೇರ್ ಡಿಸೈನಿಂಗ್ ಮತ್ತು ವೆಬ್ ಡಿಸೈನ್ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತದೆ.

`ಸಮರ್ಥನಂ' ಸಂಸ್ಥೆಯು `ಸೃಷ್ಟಿ' ಹೆಸರಿನ ಬಿಪಿಓ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದು, ಇಲ್ಲಿ `ವಾಯ್ಸ ಮತ್ತು ನಾನ್ ವಾಯ್ಸ' ಟ್ರೈನಿಂಗ್ ಕೂಡ ನೀಡಲಾಗುತ್ತಿದೆ. ಸೇಲ್ಸ್, ಮಾರುಕಟ್ಟೆ ಮತ್ತು ಗ್ರಾಹಕ ಸೇವಾ ವಿಚಾರಗಳ ಬಗ್ಗೆ ರಿಟೈಲ್ ಟ್ರೈನಿಂಗ್ ನೀಡಲಾಗುತ್ತದೆ. ಇದೆಲ್ಲದರ ಜೊತೆಗೆ ಹಾಸ್ಪಿಟಾಲಿಟಿ ಟ್ರೈನಿಂಗ್, ಗಾರ್ಮೆಂಟ್ಸ್ ಮ್ಯೋನುಫ್ಯಾಕ್ಚರಿಂಗ್ ಟ್ರೈನಿಂಗ್ ಮತ್ತು ಬ್ಯುಸಿನೆಸ್ ಮ್ಯೋನೇಜ್‌ಮೆಂಟ್ ಬಗ್ಗೆ ಕೂಡ ವಿಶೇಷ ತರಬೇತಿ ನೀಡಲಾಗುತ್ತಿದೆ.

ಸಮರ್ಥನಂ ಸಂಸ್ಥೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುತ್ತದೆ. ಸಮರ್ಥನಂನ ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬಯಸುವವರು 94498 64693, 94498 64698, 81055 56047 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.