ADVERTISEMENT

ಅಚೀವರ್: ಅಂತರ್ಜಾಲ ಪರೀಕ್ಷಾ ತಾಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:30 IST
Last Updated 16 ಫೆಬ್ರುವರಿ 2011, 19:30 IST

ದೆಹಲಿ ಮೂಲದ ಐಟಿ ಮೂಲ ಸೌಕರ್ಯ ಉದ್ಯಮದ ಡಿಜಿಟೋಲಜಿ ಇನ್ಫೋಟೆಕ್, ಬೆಂಗಳೂರಿನ ಪುಸ್ತಕ ಪ್ರಕಾಶನ ಸಂಸ್ಥೆ ಸುಭಾಷ್ ಎಂಟರ್‌ಪ್ರೈಸಸ್‌ನೊಂದಿಗೆ ‘ಅಚೀವರ್’ ಪರೀಕ್ಷಾ ಸೌಲಭ್ಯವನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ.

ಅಚೀವರ್, ಅಂತರ್ಜಾಲ ಪರೀಕ್ಷಾ ವೇದಿಕೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಇದನ್ನು ಬಳಸಿಕೊಳ್ಳಬಹುದು. ಅಭ್ಯಾಸ ಪರಿಕರಗಳ ಜತೆಗೆ, ಹಳೆಯ ಪ್ರಶ್ನೆ ಪತ್ರಿಕೆಗಳು, ಮಾದರಿ ಪ್ರಶ್ನೆ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಮಾಗದರ್ಶನ, ಪಠ್ಯ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಅಚೀವರ್ ಕಾರ್ಡ್‌ನ್ನು ಬಿಡುಗಡೆ ಮಾಡಿದವರು ಕ್ರಿಕೆಟಿಗ ವಿನಯ್ ಕುಮಾರ್. ಪರೀಕ್ಷೆಗಳಿಗೆ ತಯಾರಿ ನಡೆಸಲು ಇದೊಂದು ಸುಲಭ ಮತ್ತು ಉತ್ತಮ ವೇದಿಕೆಯಾಗಿದ್ದು, ಕೈ ಬೆರಳಿನಂಚಿನಲ್ಲಿಯೇ ಎಲ್ಲವೂ ದೊರಲಿಯಲಿದೆ ಎಂದರು. 

ಲಭ್ಯ ಪರೀಕ್ಷಾ ಪಠ್ಯಕ್ರಮ
ಸಿಬಿಎಸ್‌ಇ, ಐಸಿಎಸ್‌ಇ (6-12), ಸಿಬಿಎಸ್‌ಇ ಎಐಇಇಇ, ಸಿಬಿಎಸ್‌ಇ ಎಐಪಿಎಂಟಿ, ಐಐಟಿ- ಜೆಇಇ, ಎಐಐಎಂಎಸ್, ಸಿಇಟಿ, ಎಂಇಟಿ, ಜಿಎಂಇಟಿ, ಜಿಆರ್‌ಇ, ಎಸ್‌ಎಟಿ, ಬ್ಯಾಂಕ್ ಪಿಒ, ಕೋರಿಕೆಯ ಇತರೆ ಪರೀಕ್ಷೆಗಳು. ಇದರ ಜೊತೆಗೆ ಅಗತ್ಯವಿದ್ದಾಗ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಆನ್‌ಲೈನ್ ಉಪನ್ಯಾಸದ ಸೌಲಭ್ಯವೂ ಇದೆ.


ಅಚೀವರ್, ಮೊದಲ ಸಲ ಇ-ಕಲಿಕಾ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಮಾರ್ಚ್ 2011ರ ಅಂತ್ಯಕ್ಕೆ 30 ಲಕ್ಷ ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಿದೆ ಎಂದರು ಸುಭಾಷ್ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ನಾಗೇಶ್.

ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗಾಗಿ ಅಚೀವರ್ ವಿನ್ಯಾಸಗೊಂಡಿದೆ. ಈ ಕ್ಷೇತ್ರದಲ್ಲಿನ ತಜ್ಞರು ಇದನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳು ಅಚೀವರ್‌ನ ಪರೀಕ್ಷೆ ತೆಗೆದುಕೊಂಡ ನಂತರ, ಫಲಿತಾಂಶದ ಪೂರ್ಣ ವಿವರ ನೀಡುತ್ತದೆ. ಇದರಿಂದ ಅವರಿಗೆ ತಪ್ಪು ಉತ್ತರದ ಅರಿವಾಗುತ್ತದೆ. ತಿದ್ದಿಕೊಳ್ಳಲು ಸಾಧ್ಯ. ಅಂತರ್ಜಾಲ ವಿಶ್ಲೇಷಣವು ರ್ಯಾಂಕ್, ಫಲಿತಾಂಶ, ಪ್ರಶ್ನೆಯ ಪೂರ್ಣ ವಿವರ, ಪರಿಹಾರ ಇತ್ಯಾದಿಗಳನ್ನು ಒಳಗೊಂಡಿದೆ. ಕೆಲ ಗ್ರಾಫಿಕಲ್ ಪರಿಕರಗಳನ್ನೂ ಹೊಂದಿದೆ ಎಂದು ಡಿಜಿಟೋಲಜಿ ಇನ್ಫೊಟೆಕ್ ಸಿಇಒ ಮತ್ತು ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರ್ಷವರ್ಧನ್ ಹೇಳಿದರು.                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT