ADVERTISEMENT

ಆಮ್ರಪಾಲಿ ಆಭರಣ ಮೇಳ...

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಜೈಪುರ ಮೂಲದ ಮನಮೋಹಕ ವಿನ್ಯಾಸಗಳ ಆಭರಣ ಬ್ರಾಂಡ್ ಹೆಸರು ಆಮ್ರಪಾಲಿ. ಅಂದರೆ ಅನನ್ಯ ಚೆಲುವು, ಸೌಂದರ್ಯದ ಪ್ರತೀಕ ಎಂದರ್ಥ. ರಾಜಸ್ತಾನ, ಗುಜರಾತ್‌ನ ಬುಡಕಟ್ಟು ಜನರ ಸಮೃದ್ಧ ಡಿಸೈನ್‌ಗಳು, ಮೀನಾಕಾರಿ, ಜಡಾವ್ ಕಲೆಗಳು, ಭವ್ಯ ಮುಘಲ್ ಶೈಲಿಗಳನ್ನೆಲ್ಲ ಸಮಕಾಲೀನ ಅಭಿರುಚಿಗೆ ತಕ್ಕಂತೆಪುನರ್‌ವಿನ್ಯಾಸಗೊಳಿಸಿದ ಆಭರಣಗಳು `ಆಮ್ರಪಾಲಿ~ಯ ವಿಶೇಷ.

ಸಂಪ್ರದಾಯದ ಜತೆ ಸಮಕಾಲೀನತೆ ಹಾಗೂ ಅದ್ದೂರಿತನವನ್ನೂ ಬೆಸೆದ ವಿನ್ಯಾಸದ ಈ ಆಭರಣಗಳು ಎಂಥವರ ಗಮನವನ್ನೂ ಸೆಳೆಯುತ್ತವೆ. ಈ ಬಾರಿ ವ್ಯಾಲೆಂಟೈನ್ ದಿನದ ಪ್ರಯುಕ್ತ ವೈವಿಧ್ಯಮಯ, ವಿನೂತನ ಆಭರಣಗಳ ಸಂಗ್ರಹ ಮತ್ತು ಮಾರಾಟವನ್ನು ಆಯೋಜಿಸಿದೆ. ಇಲ್ಲಿ ವಜ್ರ, ಬಂಗಾರ, ಮಾಣಿಕ್ಯ, ಪಚ್ಚೆ ಮುಂತಾದ ಆಭರಣಗಳನ್ನೂ ಪ್ರದರ್ಶಿಸಲಾಗುತ್ತದೆ.
 
ಆಮೊದಲು ಬೆಳ್ಳಿ ಆಭರಣಗಳ ತಯಾರಿಸುವುದರಲ್ಲಿ ಹೆಸರು ಮಾಡಿದ್ದ ಆಮ್ರಪಾಲಿ ಇಂದು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತನ್ನದೇ ವಿಶಿಷ್ಟ ವಿನ್ಯಾಸಗಳಿಂದ ಜನರನ್ನು ಆಕರ್ಷಿಸುತ್ತಿದೆ. ಆದರೆ, ಬಹುತೇಕ ಮಂದಿ ಇದು ಶ್ರೀಮಂತರು ಮಾತ್ರ ಖರೀದಿ ಮಾಡುವಂತಹ ಆಭರಣಗಳು ಎಂದುಕೊಂಡಿದ್ದಾರೆ.
 
ಇಲ್ಲಿ ಕಡಿಮೆ ಬೆಲೆಯ ಆಭರಣಗಳೂ ದೊರೆಯುತ್ತವೆ. ಬೆಳ್ಳಿ ಆಭರಣಗಳ ಬೆಲೆ ಒಂದು ಸಾವಿರದಿಂದ ಆರಂಭವಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಅಜ್ಮೀರ್ ಹೇಳುತ್ತಾರೆ.ಪಾರಂಪರಿಕ ದೇವಾಲಯ ಮತ್ತು  ಪಚ್ಚೆ ಮತ್ತು ಮಾಣಿಕ್ಯಗಳಿಂದ ಮಾಡಿರುವ ಗಣೇಶ ಪೆಂಡೆಂಟ್ ನೋಡಲು ಆಕರ್ಷಕವಾಗಿದೆ.
 
ಇದರೊಂದಿಗೆ ವಧುವಿನ ಸಂಗ್ರಹದಲ್ಲಿ ದೊಡ್ಡ ದೊಡ್ಡ ಜುಮುಕಿ,  ಕೊರಳಹಾರ (ನೆಕ್‌ಲೇಸ್), ಟೀಕಾ, ಕಿವಿಯೋಲೆ, ಬೈತಲೆ ಬೊಟ್ಟು, ಸೊಂಟಪಟ್ಟಿ, ತೋಳಬಂದಿ ಒಳಗೊಂಡಂತೆ ಸುಮಾರು 300 ವಿನ್ಯಾಸಗಳನ್ನು ಇಲ್ಲಿ ನೋಡಬಹುದು.

`ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಮರೆಯಲಾಗದ ಮಧುರವಾದ ಕ್ಷಣ. ಆ ಸಂದರ್ಭದಲ್ಲಿ ವಧುವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ವಧು ಸಂಗ್ರಹ ವಿನ್ಯಾಸಗೊಂಡಿದೆ~ ಎನ್ನುತ್ತಾರೆ ಅನಿಲ್.   ಸ್ಥಳ: ಆಮ್ರಪಾಲಿ, ಕಸ್ತೂರಬಾ ರಸ್ತೆ ಮಳಿಗೆ, ಜುವೆಲ್ ಡಿ ಪ್ಯಾರಾಗಾನ್ ಪಕ್ಕ.                                               
                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.