ಸೆಮಿಕಂಡಕ್ಟರ್ ಎಲೆಕ್ಟ್ರಾನಿಕ್ಸ್‌ನ ಹೃದಯವಿದ್ದಂತೆ. `ಸೆಮಿಕಂಡಕ್ಟರ್ ಡಿಸೈನ್ ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ (ಇಡಿಎ) ಮತ್ತು ಎಂಬೆಡೆಡ್ ಸಿಸ್ಟಮ್ಸ~ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಅತ್ಯಗತ್ಯ. ಅದು ಕೈಯಲ್ಲಿ ಹಿಡಿಯುವ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಆಗಿರಬಹುದು ಅಥವಾ ಬೃಹತ್ ಕೈಗಾರಿಕಾ ಯಂತ್ರವಾಗಿರಬಹುದು.
ಆದರೆ ಹೊಸ ಪದವೀಧರ ಎಂಜಿನಿಯರ್‌ಗಳು ಈ ಕ್ಷೇತ್ರದತ್ತ ಹೆಚ್ಚು ಒಲವು ತೋರುತ್ತಿಲ್ಲ, ಇದಕ್ಕೆ ಮುಖ್ಯ ಕಾರಣ ಸೂಕ್ತ ತರಬೇತಿ ಕೊರತೆ. ಪ್ರತಿವರ್ಷ ನಮ್ಮ ದೇಶದಲ್ಲಿ ತಯಾರಾಗುವ ಸಾವಿರಾರು ಮಂದಿ ಎಂಜಿನಿಯರ್‌ಗಳು ಐಟಿ ಸೇವೆಯ ಕೆಲಸಗಳಿಗೆ ಹೋಗುತ್ತಿದ್ದಾರೆ!
ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉದ್ಯೋಗಾರ್ಹತೆ ಹೆಚ್ಚಿಸಲು ಮತ್ತು ವೃತ್ತಿಯಲ್ಲಿ ಇರುವವರು ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನೆರವಾಗುವಂತೆ ಇಡಿಎ ಸಾಫ್ಟ್‌ವೇರ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಮೆಂಟರ್‌ಗ್ರಾಫಿಕ್ಸ್ ಯುಎಸ್‌ಎ ಮತ್ತು ಆರ್‌ವಿ-ವಿಎಲ್‌ಎಸ್‌ಐ ಡಿಸೈನ್ ಸೆಂಟರ್ ಜಂಟಿಯಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ `ವಿನ್ಯಾಸ ಸ್ಪರ್ಧೆ~ ಆಯೋಜಿಸಿತ್ತು.
ಡಾ.ಅಂಬೇಡ್ಕರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಣವ್, ಶ್ರೇಯಸ್ ಎಸ್, ರಾಘವ್ ಕೆ.ಜೆ ಮತ್ತು ವಿಷ್ಣು ಕುಲಕರ್ಣಿ `ಡಿಸೈನ್ ಅಂಡ್ ಕ್ಯಾರೆಕ್ಟರೈಸೇಷನ್ ಆಫ್ ಸ್ಟಾಂಡರ್ಡ್ ಸೆಲ್ ಯೂಸಿನ್ ಡಿಎಸ್‌ಎಂ ವಿಎಲ್‌ಎಸ್‌ಐ~ ವಿಭಾಗದಲ್ಲಿ ಗೆಲುವು ಪಡೆದರು. ಆರ್‌ಎನ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅರುಣ್ ಕೆ.ಎಸ್, ಅಹಮದ್ ಪಿ.ಎಚ್ ಮತ್ತು ಭಟೀಶಾ ವಿ ಅವರು `ವಾಯ್ಸಮೇಲ್ ಸಿಸ್ಟಂ ಇನ್ ಇಂಟರ್‌ನೆಟ್ ಪ್ರೋಟೋಕಾಲ್ ಪ್ರೈವೇಟ್ ಬ್ರಾಂಚ್ ಎಕ್ಸ್‌ಚೇಂಜ್ ಎಂಬೆಡ್ಡೆಡ್ ಸಿಸ್ಟಮ್ಸ~ ವಿಭಾಗದಲ್ಲಿ ಗೆಲುವು ಸಾಧಿಸಿದರು.
ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್‌ನ ಅನಿಕೇತ ಉಡುಪ, ಕೆ.ಅನಿರುದ್ಧ್, ಪ್ರವೀಣ್ ಆರ್, ಕೌಶಿಕ್ ಎ, ಮಹಾಂತಯ್ಯ ಅವರು `ಡೆವಲಪ್‌ಮೆಂಟ್ ಆಫ್ ಡಿಆರ್‌ಸಿ ಕ್ಯಾಲಿಬರ್ ರೂಲ್ ಡೆಕ್ ಫಾರ್ ಎಸ್‌ಎಇಡಿ ಪ್ರೊಸೆಸ್~ ವಿಭಾಗದಲ್ಲಿ ರನ್ನರ್ ಅಪ್ ಆಗಿ ಆಯ್ಕೆಯಾದರು.
ಬಿಎನ್‌ಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆನಂದ್ ಭಾರದ್ವಾಜ್, ಬಿ.ವಿ. ಶಾಸ್ತ್ರಿ, ಚೇತನ್ ಕುಮಾರ್ ಜಿ, ವಸಂತ್ ಕುಮಾರ್, ಸೈಯದ್ ಫಾಸಿಯುದ್ದೀನ್ ಸಿದ್ಧಪಡಿಸಿದ್ದ ಎಂಬೆಡೆಡ್ ಕಿಟ್ `ಎಂಬೆಡೆಡ್ ಸಿಸ್ಟಮ್ಸ~ ವಿಭಾಗದಲ್ಲಿ ರನ್ನರ್‌ಅಪ್ ಆಗಿ ಆಯ್ಕೆಯಾಯಿತು. ವಿಜೇತರು ತಲಾ ರೂ.40 ಸಾವಿರ ಮತ್ತು ರನ್ನರ್ಸ್ ಅಪ್ ಆದವರು ರೂ.10 ಸಾವಿರ ಬಹುಮಾನ ಪಡೆದರು.
`ಆರ್‌ವಿ-ವಿಎಲ್‌ಎಸ್‌ಐ ಡಿಸೈನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿಸೈನ್ ಮತ್ತು ಇಡಿಎ ಉಪಕರಣಗಳ ಬಳಕೆಯಲ್ಲಿ ಹೆಚ್ಚಿನ ಅನುಭವ ತಂದುಕೊಡುತ್ತದೆ. ಪ್ರಾಯೋಗಿಕ ಜ್ಞಾನವುಳ್ಳ ನೂತನ ತಂತ್ರಜ್ಞಾನದ ಅರಿವಿರುವ ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳಬೇಕೆಂದು ಎಲೆಕ್ಟ್ರಾನಿಕ್ಸ್ ಕಂಪನಿಗಳು ಬಯಸುತ್ತವೆ.
ಈ ನಿಟ್ಟಿನಲ್ಲಿ ಡಿಸೈನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕಾರಿ~ ಎಂದು ಮೆಂಟರ್ ಗ್ರಾಫಿಕ್ಸ್ ಕಾರ್ಪೊರೇಷನ್ ಯುಎಸ್‌ಎ ಅಧ್ಯಕ್ಷ ಮತ್ತು ಸಿಇಒ ಡಿ.ವಾಲ್ಡನ್ ಸಿ ರ‌್ಹೈನ್ಸ್ ಹೇಳಿದರು.
ಬೋರ್ಡ್ ಆಫ್ ಸ್ಟಡೀಸ್ ಫಾರ್ ವಿಟಿಯು ಚೇರ್‌ಮನ್ ಡಾ.ಸಿ.ಆರ್.ವೇಣುಗೋಪಾಲ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.