ADVERTISEMENT

ಆಳ್ವಾಸ್‌ಗೆ ವಾಜಪೇಯಿ ಕಪ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ `ಅಟಲ್ ಬಿಹಾರಿ ವಾಜಪೇಯಿ ಕಪ್-2012~ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಾ ಬ್ಯಾಂಕ್ ಮತ್ತು ಆಳ್ವಾಸ್ ತಂಡಗಳು ಪ್ರಥಮ ಸ್ಥಾನ ಪಡೆದುಕೊಡಿವೆ.

ರಾಜ್ಯದ ಪ್ರಮುಖ ತಂಡಗಳಾದ ಎಚ್‌ಎಎಲ್, ಬಿಎಸ್‌ಎನ್‌ಎಲ್, ಎಂಇಜಿ, ಎಎಸ್‌ಡಿ, ಸಿಎಎಲ್, ವಿಜಯಾ ಬ್ಯಾಂಕ್ ತಂಡಗಳಲ್ಲದೆ, ವಿವಿಧ ಜಿಲ್ಲೆಗಳಿಂದ 36 ಪುರುಷರ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜೊತೆಗೆ ನಗರದ ಮಾತಾ ತಂಡ, ಮೂಡಬಿದರೆ ಅಳ್ವಾಸ್, ಪುತ್ತೂರಿನ ಸೇಂಟ್ ಫಿಲೋಮಿನಾ ತಂಡಗಳೂ ಸೇರಿದಂತೆ 4 ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಸೆಣೆಸಿದ್ದವು.

ಸ್ಪರ್ಧೆಯ ವಿಜೇತರಿಗೆ ಸಾರಿಗೆ ಸಚಿವ ಆರ್. ಅಶೋಕ, ಮತ್ತು ಸತೀಶ್ ರೆಡ್ಡಿ ಬಹುಮಾನ ವಿತರಿಸಿದರು. ಪ್ರಥಮ ಸ್ಥಾನ ಪಡೆದುಕೊಂಡ ತಂಡಗಳಿಗೆ 50 ಸಾವಿರ ಬಹುಮಾನ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕಪ್ ನೀಡಲಾಯಿತು.

ದ್ವಿತೀಯ ಸ್ಥಾನ ಪಡೆದ ಎಚ್‌ಎಎಲ್ ತಂಡಕ್ಕೆ 30 ಸಾವಿರ ರೂಪಾಯಿ ಹಾಗೂ ತೃತೀಯ ಸ್ಥಾನದವರಿಗೆ 15 ಸಾವಿರ ನಗದು ನೀಡಲಾಯಿತು.

ಬಿ.ಜೆ.ಪಿ ಮುಖಂಡ ಬಿ. ವೈ. ರಮೇಶ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ರಮೇಶ ಅತಿಥಿಯಾಗಿ ಭಾಗವಹಿಸಿದ್ದರು.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.