ADVERTISEMENT

ಇಂಚರದಲ್ಲಿ `ರಿದಂಪ್ಯಾಡ್' ನಾದಝರಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ದೊಡ್ಡಬೊಮ್ಮಸಂದ್ರದಲ್ಲಿ ಇತ್ತೀಚೆಗೆ `ಇಂಚರ-23' ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಪ್ರಣವ್‌ದತ್ ಅವರು ರಿದಂಪ್ಯಾಡ್ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ `ವಾತಾಪಿ ಗಣಪತಿಂ ಭಜೆ' ಭಕ್ತಿ ಗೀತೆಯನ್ನು ಆಯ್ದುಕೊಂಡರು. `ಭಾಗ್ಯದಾ ಲಕ್ಷ್ಮೀ ಬಾರಮ್ಮ' ಗೀತೆಯೊಂದಿಗೆ ಮುಕ್ತಾಯ ಮಾಡಿದರು. ಅಭಿಜಿತ್ (ಹಾರ್ಮೋನಿಯಂ), ಗುರುನಂದನರಾವ್ (ತಬಲಾ) ವಾದ್ಯ ಸಹಕಾರ ನಿಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕ್ ಉದ್ಯೋಗಿ ಬಿ.ಎಸ್. ವಿಜಯಕುಮಾರ್ ಅವರು `ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಪೋಷಕರ ಪಾತ್ರ ಹಾಗೂ ಸಹಕಾರ ಅಗತ್ಯ'ಎಂದು ಅಭಿಪ್ರಾಯಪಟ್ಟರು. 

ವಿಶೇಷ ಲಯವಾದ್ಯಗಾರ ರವಿ,  ಪ್ರತಿಮಾ ರವಿ, ಕವಿ ವಿ.ಮಲ್ಲಿಕಾರ್ಜುನಯ್ಯ, ಸಂಸ್ಥೆ ಸಂಸ್ಥಾಪಕಿ ಗಾಯತ್ರಿ ಕೇಶವ್ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.