ADVERTISEMENT

ಇಂದು ಐಬಿಎಸ್ ಕ್ವಿಜ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 19:30 IST
Last Updated 2 ಮಾರ್ಚ್ 2011, 19:30 IST

ಪ್ರಮುಖ ಬಿಸಿನೆಸ್ ಶಿಕ್ಷಣ ಸಂಸ್ಥೆ ‘ಐಬಿಎಸ್ ಬೆಂಗಳೂರು’ ಶೈಕ್ಷಣಿಕ ಕಾರ್ಯ ಮಾತ್ರವಲ್ಲದೆ ವಿದ್ಯಾರ್ಥಿಗಳು ಹಾಗೂ ಉದ್ಯಮವನ್ನು ಬೆಸೆಯುವ ವಿಶಿಷ್ಟ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.ಮ್ಯಾನೇಜ್‌ಮೆಂಟ್ ಶಿಕ್ಷಣದಲ್ಲಿ ಇನ್ನೂ ಹೆಚ್ಚು ಜ್ಞಾನ ಗಳಿಸಲು ಇದು ಸಹಾಯ ಮಾಡುತ್ತದೆ.

ಈ ನಿಟ್ಟಿನಲ್ಲಿ ಗುರುವಾರ ಇಂಟರ್‌ನ್ಯಾಷನಲ್ ಕ್ವಿಜಿಂಗ್ ಅಸೋಸಿಯೇಷನ್‌ನ ರಾಹುಲ್ ಕಪೂರ್ ನಡೆಸಿಕೊಡುವ ಐಬಿಎಸ್‌ಕ್ವಿಜ್‌ನಲ್ಲಿ ಎಂಜಿನಿಯರಿಂಗ್, ಕಾನೂನು, ಬಿಕಾಂ, ಬಿಬಿಎಂ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಜ್ಞಾನ ಒರೆಗೆ ಹಚ್ಚಲಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ತಂಡಗಳನ್ನು ಹೊರಹಾಕುವ ಮೂಲಕ ಫೈನಲ್‌ಗೆ ಆರು ತಂಡ ಆಯ್ಕೆ ಮಾಡುವ ವಿಧಾನವನ್ನು ಇಲ್ಲಿ ಅನುಸರಿಸಲಾಗುತ್ತದೆ. ಈ 6 ತಂಡಗಳು 5 ಸುತ್ತುಗಳಲ್ಲಿ ಪರಸ್ಪರ ಸ್ಪರ್ಧಿಸಬೇಕು. ಮೊದಲ ಎರಡು ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 15 ಸಾವಿರ ಮತ್ತು ಹತ್ತು ಸಾವಿರ, ಇನ್ನುಳಿದ ನಾಲ್ಕು ತಂಡಗಳಿಗೆ ತಲಾ 3 ಸಾವಿರ ರೂಪಾಯಿ ಬಹುಮಾನ ದೊರೆಯಲಿದೆ.ಸ್ಥಳ: ಹೋಟೆಲ್ ಏಟ್ರಿಯಾ, ಅರಮನೆ ರಸ್ತೆ. ಮಧ್ಯಾಹ್ನ 1.30 ರಿಂದ 5.30. ಮಾಹಿತಿಗೆ: ಡಾ. ಎಸ್.ಸಿ ಪೂರ್ಣಿಮಾ  95903 26651.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.