ಕ್ಯಾಟ್ ಪರೀಕ್ಷೆ ತರಬೇತಿ ಕುರಿತಂತೆ ವಿಶ್ಲೇಷಣೆ ಹಾಗೂ ಚರ್ಚಾ ಕಾರ್ಯಕ್ರಮವನ್ನು ಸಿಎಲ್ ಎಡುಕೇಟ್ ಸಂಸ್ಥೆಯು ಇದೇ ಭಾನುವಾರದಂದು ಆಯೋಜಿಸಿದೆ.
ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಅನುಭವಿ ಶಿಕ್ಷಕರಲ್ಲಿ ಕ್ಯಾಟ್ ಪರೀಕ್ಷೆ ಕುರಿತಂತೆ ತಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳುವುದರ ಜತೆಗೆ ಕ್ವಾಂಟಿಟೇಟಿವ್ ಎಬಿಲಿಟಿ (ಕ್ಯೂಎ), ವರ್ಬಲ್ ಎಬಿಲಿಟಿ ಹಾಗೂ ಲಾಜಿಕಲ್ ರೀಸನಿಂಗ್ (ವಿಎಲ್) ಕುರಿತಂತೆ ಪ್ರಶ್ನೆಗಳನ್ನು ಕೇಳಬಹುದಾಗಿದೆ.
ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಕಂಡುಹಿಡಿಯುವ ಮಾರ್ಗಗಳನ್ನು ಇಲ್ಲಿ ಹೇಳಿಕೊಡಲಾಗುವುದು. ಜತೆಗೆ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಪರೀಕ್ಷೆಗಳಿಗೆ ಸಿದ್ಧರಾಗಲು ಅನುಕೂಲವಾಗುವಂತೆ ಸರಳ ಸೂತ್ರಗಳ ಕೈಪಿಡಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಹೆಸರು ನೋಂದಣಿಗೆ 9738257671 ಮೊಬೈಲ್ ಸಂಖ್ಯೆಗೆ CL-CAT ಎಂದು ಎಸ್‌ಎಂಎಸ್ ಕಳುಹಿಸಬೇಕು. ಸ್ಥಳ: ಸೇಂಟ್ ಜೋಸೆಫ್ಸ್ ವಾಣಿಜ್ಯ ಕಾಲೇಜು, ಬ್ರಿಗೇಡ್ ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.