ADVERTISEMENT

ಉಷಾ ಡಿಸೈನ್‌ನಲ್ಲಿ ಅಹಿಂಸಾ ಸೀರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 19:30 IST
Last Updated 2 ಮಾರ್ಚ್ 2011, 19:30 IST
ಉಷಾ ಡಿಸೈನ್‌ನಲ್ಲಿ ಅಹಿಂಸಾ ಸೀರೆ
ಉಷಾ ಡಿಸೈನ್‌ನಲ್ಲಿ ಅಹಿಂಸಾ ಸೀರೆ   

ಚೆನ್ನೈನ ಉಷಾ ಶ್ರೀಧರ್ ಯುಗಾದಿ ಹಬ್ಬದ ಸಂದರ್ಭಕ್ಕೆ ಡಿಸೈನರ್ ಸೀರೆಗಳ ಮಾರಾಟ ಆಯೋಜಿಸಿದ್ದಾರೆ. ಶುದ್ಧ ರೇಷ್ಮೆ, ಸಿಲ್ಕ್ ಕಾಟನ್, ಕಾಟನ್ ಸೀರೆಗಳಲ್ಲದೆ ಈ ಬಾರಿ ವಿಶೇಷವಾಗಿ ವೆಜಿಟೇಬಲ್ ಪ್ರಿಂಟ್, ಕಲಂಕಾರಿ ಪೇಂಟಿಂಗ್‌ಗಳಿರುವ ಅಹಿಂಸಾ ರೇಷ್ಮೆ ಸೀರೆಗಳನ್ನು ಅವರು ಪರಿಚಯಿಸಲಿದ್ದಾರೆ. ಒರಿಸ್ಸಾದ ಅಹಿಂಸಾ ರೇಷ್ಮೆಯು ರೇಷ್ಮೆ ಹುಳುಗಳನ್ನು ಕೊಲ್ಲದೆ ಪಡೆಯುವ ರೇಷ್ಮೆ ವಿಧ. ಯಾವುದೇ ಹವಾಮಾನದಲ್ಲೂ ಧರಿಸಬಹುದಾದದ್ದು.

 ಇದರ ಜತೆಗೆ ಸಾಂಪ್ರದಾಯಿಕ ಮೌಲ್ಯದ ಭಾರೀ ಕಾಂಜೀವರಂ ರೇಷ್ಮೆ ಸೀರೆಗಳು, ಸಿದ್ಧಪಡಿಸಿದ ಬ್ಲೌಸ್‌ಗಳೂ ಇವೆ. ಇವುಗಳ ಮೇಲೆ ಕುಂದನ್, ಆರಿ, ಶಾಡೋ ಕಸೂತಿ, ಕೈಯಿಂದ ಮಾಡಿದ ಕಟ್‌ವರ್ಕ್, ಕಲಂಕಾರಿ ಅಪ್ಲಿಕ್, ಪೇಂಟಿಂಗ್ ಮತ್ತು ಬ್ಲಾಕ್ ಪ್ರಿಂಟುಗಳು ಇನ್ನೂ ಆಕರ್ಷಕ. ಬಹುವರ್ಣದ ಪ್ಯಾಚ್‌ವರ್ಕ್ ಮಾಡಿದ ಬ್ಲೌಸುಗಳು ಎಲ್ಲ ಅಳತೆಗಳಲ್ಲೂ ಲಭ್ಯ.ವಿಶಿಷ್ಟ ಬ್ಲಾಕ್ ಪ್ರಿಂಟುಗಳಿರುವ ಚೆಟ್ಟಿನಾಡು, ಆರಣಿ ಸಿಲ್ಕ್ ಕಾಟನ್‌ಗಳು, ಮಂಗಲಗಿರಿ ಸೀರೆಗಳಂತೂ ಇದ್ದೇ ಇವೆ.

ಅವರು ಡಿಸೈನ್ ಮಾಡಿದ ಸೀರೆ ಮತ್ತು ಜವಳಿಗಳ ಪ್ರದರ್ಶನ, ಮಾರಾಟ ಗುರುವಾರದಿಂದ ಭಾನುವಾರ ವರೆಗೆ.ಸ್ಥಳ: ಕೆನರಾ ಯೂನಿಯನ್, 42, 8ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.