ನಾನ್ಯಾವತ್ತೂ ಊಟದ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ. ಬೆರಳು ಚೀಪುತ್ತ ಊಟವನ್ನು ಆಸ್ವಾದಿಸುವುದೆಂದರೆ ಪರಮಾನಂದ... ಹೀಗೆ ಊಟದ ಬಗ್ಗೆ ಹೇಳಿದ್ದು ಸಪೂರ ಸುಂದರಿ ಸೋನಂ ಕಪೂರ್.
`ಸಾವರಿಯಾ~ ಚಿತ್ರಕ್ಕಾಗಿ ತಮ್ಮ ಸ್ಥೂಲಕಾಯವನ್ನು ಸಪೂರವಾಗಿಸಿಕೊಂಡಿದ್ದ ಸೋನಂಗೆ ಜೀವನವೆಂದರೆ ಊಟ. ಬೆಳಿಗ್ಗಿನ ತಿಂಡಿ ತಿನ್ನುವಾಗಲೇ ಮಧ್ಯಾಹ್ನದ ಊಟ ಏನು ಎಂದು ಯೋಚಿಸುತ್ತೇನೆ. ಯೋಚಿಸುತ್ತಲೇ ಬೆಳಿಗ್ಗಿನ ತಿಂಡಿ ಎಷ್ಟು ತಿನ್ನಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಮಧ್ಯಾಹ್ನದ ಊಟ ಮಾಡುವಾಗ ರಾತ್ರಿ ಊಟದ ಬಗ್ಗೆ ಚಿಂತಿಸುತ್ತೇನೆ.
ಡಯಟಿಷಿಯನ್‌ಗಿಂತಲೂ ವರ್ಕೌಟ್ ಮಾಡುವುದರ ಬಗ್ಗೆ ಲೆಕ್ಕಾಚಾರವಿರುತ್ತದೆ. ಆದರೆ ಎಲ್ಲಿಯೂ ಬಾಯಿರುಚಿಗೆ ಮೋಸ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಸೋನಂ.
ನಾನು ಪಂಜಾಬಿ ಹುಡುಗಿ. ಅಮ್ಮ ಸಿಂಧಿ. ತುಪ್ಪದ ಖಾದ್ಯಗಳೆಂದರೆ ಪಂಚಪ್ರಾಣ. ತುಪ್ಪ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಭಾರತೀಯ ಆಹಾರ ಸಂಸ್ಕೃತಿ ದೇಹದ ಅಗತ್ಯಗಳನ್ನು ಪೂರೈಸುತ್ತದೆ. ಅದನ್ನೆಲ್ಲ ಬಿಟ್ಟು, `ಘಾಂಸ್ ಪೂಂಸ್~ ತಿನ್ನಲು ನನಗಂತೂ ಇಷ್ಟವಿಲ್ಲ ಎನ್ನುತ್ತಾಳೆ ಸೋನಂ.
ಪಂಜಾಬಿಯಾಗಿರುವುದರಿಂದ ತಿನ್ನುವುದಕ್ಕಿಂತ ಎಲ್ಲರಿಗೂ ತಿನ್ನಿಸುವುದು ಬಲು ಇಷ್ಟ ಎಂದು ಹೇಳುವ ಸೋನಂ ಊಟ ಬಿಟ್ಟು ಡಯೆಟ್ ಮಾಡಬೇಡಿ ಎಂದು ಸಲಹೆಯನ್ನೂ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.