ADVERTISEMENT

ಎಎಸ್‌ಸಿಐನಿಂದ ಮೊಬೈಲ್ ಮೂವಿ ಚಾಲೆಂಜ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗೋವಾಫೆಸ್ಟ್ ಒಗ್ಗೂಡಿ ಜಾಹೀರಾತಿನಲ್ಲಿ ಸ್ವಯಂ ನಿಯಂತ್ರಣ ಉತ್ತೇಜಿಸುವ ಉದ್ದೇಶದಿಂದ ನೂತನ ಸ್ಪರ್ಧೆ ಆಯೋಜಿಸಿದೆ. `ಎಎಸ್‌ಸಿಐ ಮೊಬೈಲ್ ಮೂವಿ ಚಾಲೆಂಜ್~ ಎಂಬ ಈ ಸ್ಪರ್ಧೆಯನ್ನು  `ಕ್ರಿಯೇಟಿವಿಟಿ ವಿತ್ ದಿ ಕಂಸೈನ್ಸ್~ ಎಂಬ ವಿಷಯವನ್ನಿಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ. 

 ಸ್ಪರ್ಧೆಯಲ್ಲಿ ಜಾಹೀರಾತು ವಿಭಾಗದವರು, ಮಾರ್ಕೆಟಿಂಗ್ ವಿಭಾಗ ಮತ್ತು ಮಾಧ್ಯಮ ವಿಭಾಗದವರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್‌ನಲ್ಲಿ ಕಿರು ಚಿತ್ರವನ್ನು ತಯಾರಿಸುವ ವಿಶೇಷ ಸ್ಪರ್ಧೆ ಇದಾಗಿದೆ.

ಸ್ಪರ್ಧೆಯಲ್ಲಿ 30 ವರ್ಷಕ್ಕಿಂತ ಕಡಿಮೆಯಿರುವ ಮತ್ತು ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವ ಮೂರು ಮಂದಿಯ ಗುಂಪಿಗೆ 30-60 ಸೆಕೆಂಡ್‌ಗಳ ಅವಧಿಯ ಕಿರು ಚಿತ್ರವನ್ನು ಮೊಬೈಲ್‌ಗಳಲ್ಲಿ ತಯಾರಿಸುವ ಸವಾಲನ್ನು ಮುಂದಿಡಲಾಗಿದೆ.  

ಈ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು http://www.ascionline.org/goafest 2012/ ಗೆ ಭೇಟಿ ನೀಡಬಹುದು. ಹೆಸರು ನೋಂದಾಯಿಸಿಕೊಳ್ಳಲು 22ನೇ ಮಾರ್ಚ್ ಕೊನೆಯ ದಿನಾಂಕ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.