ADVERTISEMENT

ಐಐಬಿಎಸ್ ಸರ್ಫೇಸ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ನಗರದ ಖ್ಯಾತ ಬಿ-ಸ್ಕೂಲ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ (ಐಐಬಿಎಸ್) ಈಚೆಗೆ ಆಯೋಜಿಸಿದ್ದ `ಸರ್ಫೆಸ್ 2011~ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ವೇದಿಕೆಯಾಯಿತು.

ಈ ಸಲ 400ಕ್ಕೂ ಅಧಿಕ ಎಂಬಿಎ ಹಾಗೂ ಪದವಿ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸೋಲೊ, ಗ್ರೂಪ್ ಡ್ಯಾನ್ಸ್ ಮಾಡಿದರು. ಆಕರ್ಷಕ ಉಡುಗೆ ಧರಿಸಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ತಾವು ಖುಷಿ ಪಡುವುದರ ಜೊತೆಗೆ ಎಲ್ಲರನ್ನು ಖುಷಿ ಪಡಿಸಿದರು.

ಐಐಬಿಎಸ್ ಅಧ್ಯಕ್ಷ ಡಾ. ಜೈಪ್ರಕಾಶ್ ವಿಜೇತರಿಗೆ ಬಹುಮಾನ ನೀಡಿದರು. ನಿರ್ದೇಶಕರಾದ ಡಾ. ಕೆ.ರಾಮದಾಸ್ ಮತ್ತು ಡಾ. ಮೃಣ್ಮಯ್ ಬಿಸ್ವಾಸ್ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.