ADVERTISEMENT

ಒರಿಯೊ ಕುಕಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 19:30 IST
Last Updated 11 ಮಾರ್ಚ್ 2011, 19:30 IST
ಒರಿಯೊ ಕುಕಿ
ಒರಿಯೊ ಕುಕಿ   

ನೂರು ವರ್ಷಗಳ ಬ್ರಾಂಡ್ ಒರಿಯೊ ನೂರು ದೇಶಗಳಲ್ಲಿ ಮಾರಾಟವಾಗುತ್ತಿದೆ. ಇಲ್ಲಿಯವರೆಗೆ ಮಾರಾಟವಾದ ಒರಿಯೊ ಕುಕಿಗಳನ್ನೆಲ್ಲ ಒಂದರ ಮೇಲೊಂದರಂತೆ ಇಟ್ಟಿದ್ದರೆ ಅದು ಐದಕ್ಕಿಂತಲೂ ಹೆಚ್ಚು ಬಾರಿ ಚಂದ್ರನನ್ನು ತಲುಪಿ ಬರಬಲ್ಲುದಾಗಿತ್ತು. ಒಂದರ ಪಕ್ಕ ಒಂದನ್ನು ಇಡುತ್ತ ಹೋಗಿದ್ದರೆ ಆ ಕುಕಿಗಳ ಸಾಲಿನ ವೃತ್ತವೇ 381 ಬಾರಿ ಭೂಮಿಯನ್ನು ಸುತ್ತಿ ಬರಬಹುದಿತ್ತು.

ಈಗ ಶೇ 29ರಷ್ಟು  ಕ್ರೀಮ್ ಮತ್ತು ಶೇ 71ರಷ್ಟು ವೈಶಿಷ್ಟ್ಯದ ಕುಕಿಗಳನ್ನು ಬಿಡುಗಡೆ ಮಾಡಿದೆ. ಒರಿಜಿನಲ್, ಮಿನಿ, ಚಾಕೊಲೇಟ್ ಕ್ರೀಮ್, ಚಾಕೊಲೇಟ್ ಕ್ರೀಮ್ ಮಿನಿ, ರೆಡ್ಯೂಸ್ಡ್ ಫ್ಯಾಟ್, ಒರಿಯೊ ಡಬಲ್ ಸ್ಟಫ್ ಎಂಬೆಲ್ಲ ಹಲವು 11 ವೈವಿಧ್ಯಮಯ ಸ್ವಾದಗಳಲ್ಲಿ ಇವು ಲಭ್ಯ.
 
ಲತಾ ‘ಸೃಷ್ಟಿ’ಯ ರಂಗು
ಹಿತವಾದ ಚಳಿಗಾಲ ಮುಗಿದು ಮೆಲ್ಲಗೆ ಬೇಸಿಗೆ ಕಾವು ಹೆಚ್ಚುತ್ತಿದೆ. ಹಾಗೆಯೇ ಎಲ್ಲ ಕಡೆ  ಮದುವೆ ಭರಾಟೆ. ಈ ವಿವಾಹ ಋತುವಿನ ರಂಗು ಹೆಚ್ಚಿಸುವಂತೆ ನಗರದಲ್ಲಿ ವಿವಿಧ ಪ್ರದರ್ಶನಗಳು ನಡೆಯುತ್ತಿವೆ. ಖ್ಯಾತ ವಸ್ತ್ರವಿನ್ಯಾಸಕಿ ಲತಾ ಪುಟ್ಟಣ್ಣ ಅವರ ‘ಸೃಷ್ಟಿ ಕ್ರಿಯೇಷನ್ಸ್’ ಈಗ ನವ ಯುವತಿಯರ ಮನಸೆಳೆಯುವ ವಸ್ತ್ರ ಪ್ರದರ್ಶನ ಏರ್ಪಡಿಸಿದೆ.

ಕುರ್ತಿ, ಗಾಗ್ರಾ, ಲೆಹಂಗ, ಅನಾರ್ಕಲಿ ಶೈಲಿಯ ಚೂಡಿದಾರ್ ಪ್ರದರ್ಶನದಲ್ಲಿ ಇವೆ. ಯಾವುದೇ ಸೀರೆಗೆ ಒಪ್ಪುವ ವೈವಿಧ್ಯಮಯ ವಿನ್ಯಾಸದ ಬ್ಲೌಸ್‌ಗಳು ಆಕರ್ಷಿಸುವಂತಿವೆ. ಲತಾ ಪುಟ್ಟಣ್ಣ ಸಾಂಪ್ರದಾಯಿಕ ಮತ್ತು ಪಾರಂಪಾರಿಕ ವಸ್ತ್ರ ವಿನ್ಯಾಸಕ್ಕೆ ಹೆಸರಾದವರು. ಅವರು ತಮ್ಮ ವಿನ್ಯಾಸಗಳಲ್ಲಿ ಭಾರತದ ಎಲ್ಲ ಪ್ರದೇಶಗಳ ಬಟ್ಟೆ, ವಿನ್ಯಾಸಗಳನ್ನು ಬಳಸಿಕೊಳ್ಳುತ್ತಾರೆ. ಹಾಗೆಯೇ ದಟ್ಟ ಬಣ್ಣ ಬಳಸಿಕೊಳ್ಳುತ್ತಾರೆ. ದೊಡ್ಡ ಬುಟ್ಟಾ, ಜರಿಯ ಅಂಚು, ಗಾಢ ವರ್ಣಗಳ ವಸ್ತ್ರಗಳು ದೇಸಿ ಸೊಗಡು ಮತ್ತು ಅನನ್ಯ ಪರಂಪರೆಯ ಪ್ರತೀಕವಾಗಿವೆ. ಅಲ್ಲದೇ ಯಾವುದೇ ಪಾರ್ಟಿ, ಸಮಾರಂಭಗಳಿಗೆ ಹೊಂದುವಂತಿವೆ.

ಸ್ಥಳ: ರೇನ್‌ಟ್ರಿ, ವಿಂಡ್ಸರ್ ಮ್ಯಾನರ್ ಎದುರು, ಸ್ಯಾಂಕಿ ರಸ್ತೆ. ಪ್ರದರ್ಶನ  ಇಂದೇ ಮುಕ್ತಾಯ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.