ADVERTISEMENT

ಓಶೋ ಸಮಾಜವಾದ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಓಶೋ
ಓಶೋ   

ಚಿಂತಕ ಓಶೋ ಸಮಾಜವಾದವನ್ನು ಕುರಿತು ನೀಡಿದ ಐದು ದೀರ್ಘ ಉಪನ್ಯಾಸಗಳ ಅನುವಾದವೇ ‘ಕ್ಯಾಪಿಟಲಿಸಂ ಇಲ್ಲದೆ ಸೋಷಿಯಲಿಂಸಂ ಇಲ್ಲ!’ ಕೃತಿ. ಈ ಪುಸ್ತಕದ ಆಶಯದಂತೆ ಇರುವ ಸಾಲುಗಳು ಇವು...

‘ಮನುಷ್ಯನ ಸ್ವಭಾವವೇ ವಿಚಿತ್ರ. ಇದು ಡಾಣಾ–ಡಂಗುರ ಹೊಡೆದು ಪ್ರತಿಷ್ಠಾಪಿಸಲಾಗುವ ಸುಳ್ಳುಗಳನ್ನೇ ಸತ್ಯವೆಂದು ನಂಬುತ್ತದೆ. ಪದೇಪದೇ ಹೇಳುವ ಸುಳ್ಳೇ ಹುಲುಮಾನವನಿಗೆ ಸತ್ಯದಂತೆ ಕಾಣತೊಡಗುತ್ತದೆ. ಹೀಗಾಗಿ, ನೀವು ನಿಜವಾದ ಸತ್ಯ ಯಾವುದೋ ಅದನ್ನು ಹೇಳಿದರೆ, ಮೊದಮೊದಲು ಎಲ್ಲರೂ ಅದನ್ನು ಅನುಮಾನಿಸುತ್ತಾರೆ; ಅವರಿಗೆ ಅದು ಸತ್ಯವೆನಿಸುವುದೇ ಇಲ್ಲ!

‘ಸಮಾಜವಾದದ ಹೆಸರಿನಲ್ಲೂ ಜಗತ್ತಿನಾದ್ಯಂತ ಕಳೆದ ನೂರು ವರ್ಷಗಳಲ್ಲಿ ಇಂಥ ಭ್ರಮೆಯನ್ನು, ಅಪಕಲ್ಪನೆಗಳನ್ನು ಸೃಷ್ಟಿಸಲಾಗಿದೆ. ಇದರ ಬಗ್ಗೆ ಒಂದೇ ಸಮನೆ ಮಾಡುತ್ತಿರುವ ಪ್ರಚಾರ ಮತ್ತು ಕೂಗುತ್ತಿರುವ ಘೋಷಣೆಗಳಿಂದಾಗಿ ಏನಾಗಿದೆಯೆಂದರೆ, ನಿಜವಾಗಿಯೂ ಸಮಾಜವಾದಿಗಳಾಗಿಲ್ಲದೆ ಇರುವವರೆಲ್ಲ ಈಗ ‘ಸಮಾಜವಾದಿಗಳು’ ಎನಿಸಿಕೊಳ್ಳುತ್ತಿದ್ದಾರೆ! ಸಮಾಜವಾದದ ಈ ತತ್ವ–ಸಿದ್ಧಾಂತಗಳನ್ನು ತಮ್ಮ ಆಂತರ್ಯದಲ್ಲಿ ನಂಬದೆ ಇರುವವರೆಲ್ಲ ಅದನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ, ಸಮಾಜವಾದದ ವಿರುದ್ಧ ಮಾತನಾಡುವ ಧೈರ್ಯ ಯಾರೊಬ್ಬರಿಗೂ ಇಲ್ಲವೆನಿಸುತ್ತದೆ. ಅನುಭವಿಗಳ ಈ ಜಗತ್ತಿನಲ್ಲಿ ನಾನೊಬ್ಬ ಅನನುಭವಿ. ಆದ್ದರಿಂದ ನಾನು ಇದರ ವಿರುದ್ಧ ಧೈರ್ಯದಿಂದ ಮಾತನಾಡಲಿದ್ದೇನೆ.’
–ಓಶೋ (ಬಿವೇರ್ ಆಫ್ ಸೋಷಿಯಲಿಸಂ ಪುಸ್ತಕದಿಂದ)

ADVERTISEMENT

‘ಕ್ಯಾಪಿಟಲಿಸಂ ಇಲ್ಲದೆ ಸೋಷಿಯಲಿಂಸ ಇಲ್ಲ!’ ಕೃತಿ ಬಿಡುಗಡೆ (ಮೂಲ–ಓಶೋ, ಅನು–ಬಿ.ಎಸ್.ಜಯಪ್ರಕಾಶ ನಾರಾಯಣ): ಅತಿಥಿ–ಮಲ್ಲೇಪುರಂ ಜಿ. ವೆಂಕಟೇಶ, ಟಿ.ಎಸ್.ಫಣಿಕುಮಾರ್, ಶ್ರೇಯಾಂಕ ಎಸ್. ರಾನಡೆ. ಆಯೋಜನೆ– ವಸಂತ ಪ್ರಕಾಶನ, ಸ್ಥಳ–ಮಿಥಿಕ್ ಸೊಸೈಟಿ ಸಭಾಂಗಣ, ರಿಸರ್ವ್ ಬ್ಯಾಂಕ್ ಎದುರು, ನೃಪತುಂಗ ರಸ್ತೆ, ಭಾನುವಾರ ಬೆಳಿಗ್ಗೆ 10.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.