ADVERTISEMENT

ಕಠಿಣ ದಾರಿ... ಬೈಕ್ ಸವಾರಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಕಠಿಣ ದಾರಿ... ಬೈಕ್ ಸವಾರಿ
ಕಠಿಣ ದಾರಿ... ಬೈಕ್ ಸವಾರಿ   

ಕೆಸರು ಹಾಗೂ ಕಠಿಣ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುವುದು ಹುಡುಗಾಟದ ಸಂಗತಿಯಲ್ಲ. ಅಮೆರಿಕ ಹಾಗೂ ಇತರೆ ದೇಶಗಳಲ್ಲಿ ಜನಪ್ರಿಯವಾಗಿರುವ `ಸೂಪರ್ ಕ್ರಾಸ್' ಈಗ ಬೆಂಗಳೂರಿಗೂ ಕಾಲಿಡಲು ಅಣಿಯಾಗುತ್ತಿದೆ. ಅಂದಹಾಗೆ, ಆಫ್‌ರೈಡ್ ಮೋಟಾರ್ ಸೈಕಲ್‌ನ್ನು ಅಲ್ಲಿಂದ ಇಲ್ಲಿಗೆ ಕರೆತರುತ್ತಿರುವುದು ಯುನೈಟೆಡ್ ಆಟೊ ರೇಸಿಂಗ್ ಸಂಸ್ಥೆ.

ದೇಶದಲ್ಲಿ ಇದೇ ಬಾರಿ ನಡೆಯುತ್ತಿರುವ ಮಕ್ಕಳ ಆಫ್‌ರೋಡ್ ಮೋಟಾರ್ ಸೈಕಲ್ ರೇಸಿಂಗ್ ಸ್ಪರ್ಧೆ ಬೆಂಗಳೂರಿಗರನ್ನು ಮೋಡಿಮಾಡಲಿದೆ. ಅತ್ಯಂತ ಕಠಿಣ ಹಾಗೂ ಏರು ತಗ್ಗು, ಕೆಸರು ತುಂಬಿದ ರಸ್ತೆಯಲ್ಲಿ ಬೈಕ್ ಬ್ಯಾಲೆನ್ಸ್ ಮಾಡುವುದು ಪಂಟರ್‌ಗಳಿಗೂ ಕಷ್ಟ. ಆಫ್‌ರೈಡ್‌ನಲ್ಲಿ ಮಕ್ಕಳು ಬೈಕನ್ನು ಹೇಗೆ ನಿಯಂತ್ರಣಕ್ಕೆ ತೆಗೆದುಕೊಂಡು ಓಡಿಸುತ್ತಾರೆ ಎಂಬುದನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಚಕ ಅನುಭವ.

ಸೂಪರ್‌ಕ್ರಾಸ್ ಸ್ಪರ್ಧೆಯು ಮೋಟೊ ಸ್ಪೋರ್ಟ್ಸ್ ಪಾರ್ಕ್, ಯುಎಎಸ್ ಕಾಲೇಜು ಎದುರು ಹಾಗೂ ರಾಜೀವ್‌ಗಾಂಧಿ ನಗರ ವಾರ್ಡಿನ ಸಹಕಾರ ನಗರದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ದೇಶದಾದ್ಯಂತ ಇರುವ 20 ಅತ್ಯುತ್ತಮ ಸವಾರರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.15 ಮತ್ತು 16ರಂದು ನಡೆಯಲಿರುವ ಈ ಸ್ಪರ್ಧೆಯಲ್ಲಿ ಮಕ್ಕಳಿಂದ ಹಿಡಿದು ಯುವಜನರವರೆಗೆ ಎಲ್ಲರೂ ಕೃತಕ ಮಣ್ಣಿನ ರಸ್ತೆಗಳಲ್ಲಿ ಆಫ್ ರೋಡ್ ಮೋಟಾರ್ ಸೈಕಲ್‌ಗಳಲ್ಲಿ ವೇಗವಾಗಿ ಚಲಿಸಲಿದ್ದಾರೆ.

ಈ ಕೌತುಕಕ್ಕೆ ಮತ್ತಷ್ಟು ರೋಚಕತೆ ತುಂಬುವ ಸಲುವಾಗಿ ಈ ಸ್ಪರ್ಧೆಯಲ್ಲಿ ಕೆಲವು ವಿದೇಶಿ ಸವಾರರೂ `ವಿದೇಶಿ ಮುಕ್ತ' ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. `ಮಕ್ಕಳ ವಿಭಾಗ' ಕೇವಲ ಮಕ್ಕಳಾಟವಲ್ಲ. ಆಫ್- ರೋಡ್ ಮೋಟಾರ್‌ಸೈಕಲ್‌ಗಳಲ್ಲಿ 2 ಸ್ಟ್ರೋಕ್ ಮತ್ತು  4 ಸ್ಟ್ರೋಕಿನ ಎಂಜಿನ್‌ಗಳು ಇರುತ್ತವೆ. ಯುನೈಟೆಡ್ ಆಟೋ ರೇಸಿಂಗ್ ಆಯೋಜಿಸಿರುವ ಈ ಸ್ಪರ್ಧೆ ವಾರಾಂತ್ಯದಲ್ಲಿ  ಸಾಕಷ್ಟು ಮನರಂಜನೆಯನ್ನೂ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.