ADVERTISEMENT

ಕಥಕ್ಕಳಿಯಲ್ಲಿ ದಕ್ಷಯಾಗಂ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 11:15 IST
Last Updated 23 ಫೆಬ್ರುವರಿ 2011, 11:15 IST
ಕಥಕ್ಕಳಿಯಲ್ಲಿ ದಕ್ಷಯಾಗಂ
ಕಥಕ್ಕಳಿಯಲ್ಲಿ ದಕ್ಷಯಾಗಂ   

ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ಆರ್ಟ್ಸ್ ಶುಕ್ರವಾರ ಕೊಟ್ಟಕಲ್‌ನ ಪಿ.ಎಸ್. ನಾಟ್ಯ ಸಂಘದಿಂದ ‘ದಕ್ಷಯಾಗಂ’ ಕಥಕ್ಕಳಿ ಪ್ರದರ್ಶನ ಏರ್ಪಡಿಸಿದೆ. 2009ರಲ್ಲಿ ಆರಂಭವಾದ ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ಆರ್ಟ್ಸ್ (ಬಿಸಿಕೆಎ) ಪರಿಶುದ್ಧ ಶಾಸ್ತ್ರೀಯ ನೃತ್ಯಪ್ರಕಾರಗಳನ್ನು ತನ್ನ ಸದಸ್ಯರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ಈಗ ‘ಕಥಕ್ಕಳಿ’ ಪ್ರದರ್ಶನದಲ್ಲಿ ವಿಶ್ವ ಖ್ಯಾತಿ ಗಳಿಸಿರುವ ಕೊಟ್ಟಕಲ್‌ನ ಪಿ.ಎಸ್. ನಾಟ್ಯ ಸಂಘವನ್ನು ನಗರಕ್ಕೆ ಕರೆಯಿಸುತ್ತಿದೆ.

‘ಕಥಕ್ಕಳಿ’ ಕೇರಳದ ದೇವಾಲಯಗಳ ಪ್ರಾಂಗಣದಲ್ಲಿ ಪ್ರಾಚೀನ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ರೂಪ ತಳೆದ ನೃತ್ಯ ಪ್ರಕಾರ. ಕಥಕ್ಕಳಿ ಪಾತ್ರಧಾರಿಗಳ ವೇಷಭೂಷಣ ಒಂದೇ ರೀತಿ ಅನಿಸಿದರೂ ಅವರ ಮುಖಕ್ಕೆ ಹಚ್ಚುವ ಬಣ್ಣಗಳಲ್ಲಿ ವ್ಯತ್ಯಾಸ ಇರುತ್ತದೆ. ಅದು ಆಯಾ ಪಾತ್ರಗಳ ರಸಗಳನ್ನು ಸಂಕೇತಿಸುತ್ತದೆ.

‘ಕಥಕ್ಕಳಿ’ ಪ್ರಸಂಗಗಳಲ್ಲಿ ‘ದಕ್ಷಯಾಗಂ’ ಸಾಕಷ್ಟು ಪ್ರಸಿದ್ಧ. ಪರಶಿವ ಮತ್ತು ಸತಿಯ ಪ್ರೇಮದ ಪರಾಕಾಷ್ಠೆ, ದಕ್ಷನ ಕೋಪ-ತಾಪ, ಶಿವನ ವಿರಹ ಎಲ್ಲವೂ ‘ದಕ್ಷಯಾಗಂ’ನಲ್ಲಿ ಮನೋಜ್ಞವಾಗಿ ಪ್ರದರ್ಶಿತಗೊಳ್ಳಲಿದೆ.ಪ್ರಸಿದ್ಧ ಗುರು ವಿಜಯನ್ ವಾರಿಯರ್ ನೇತೃತ್ವದಲ್ಲಿ, ಕೊಟ್ಟಕ್ಕಲ್ ಕೇಶವನ್ (ದಕ್ಷ), ಕೊಟ್ಟಕ್ಕಲ್ ರಾಜು ಮೋಹನ್ (ಸತಿ), ಕೊಟ್ಟಕ್ಕಲ್ ಸುಧೀರ್ (ಶಿವ), ಕೊಟ್ಟಕ್ಕಲ್ ದೇವದಾಸ (ವೀರಭದ್ರ) ಅಭಿನಯಿಸಲಿದ್ದಾರೆ. ಸಂಗೀತ: ಕೊಟ್ಟಕ್ಕಲ್ ನಾರಾಯಣನ್ ಮತ್ತು ಮಧು. ಚೆಂಡೆ: ಕೊಟ್ಟಕ್ಕಲ್ ಪ್ರಸಾದ್. ಮದ್ದಳೆ: ಕೊಟ್ಟಕ್ಕಲ್ ರಮೇಶ್.ಪ್ರದರ್ಶನದಿಂದ ಬರುವ ಹಣವನ್ನು ‘ಬಿಸಿಕೆಎ’, ಬಡ ಕಲಾವಿದರ ಏಳಿಗೆಗಾಗಿ ಬಳಸುತ್ತದೆ.

ಸ್ಥಳ: ಪುರಂದರ ಸಭಾಂಗಣ, ಇಂದಿರಾನಗರ ಕ್ಲಬ್ ಪಕ್ಕ, ಸಂಜೆ 6. ದೇಣಿಗೆ ಪಾಸ್‌ಗಳಿಗೆ: ಲಲಿತಾ ದಾಸ್ 2334 1583.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.