ADVERTISEMENT

‘ಕಷ್ಟಕ್ಕೂ ಸುಖಕ್ಕೂ ಸಮಾನ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
‘ಕಷ್ಟಕ್ಕೂ ಸುಖಕ್ಕೂ ಸಮಾನ ಆದ್ಯತೆ’
‘ಕಷ್ಟಕ್ಕೂ ಸುಖಕ್ಕೂ ಸಮಾನ ಆದ್ಯತೆ’   

–ರಮ್ಯಾ ಕೆದಿಲಾಯ

*

ನ್ನ ಹೆಸರು ಮುನ್ನುಸ್ವಾಮಿ. ನನ್ನೂರು ತಮಿಳುನಾಡು. ಕಳೆದ ಒಂದು ವರ್ಷಗಳಿಂದ ಅತ್ತಿಗುಪ್ಪೆಯಲ್ಲಿ ವಾಸಿಸುತ್ತಿದ್ದೇನೆ. ಮನೆ ಕಟ್ಟುವ ಕೆಲಸ ಮಾಡುತ್ತೇನೆ.

ADVERTISEMENT

ಊರಿನಲ್ಲಿರುವ ಸಣ್ಣಮಟ್ಟಿನ ಜಮೀನಿಂದ ಹೊಟ್ಟೆ ತುಂಬಲು ಸಾಧ್ಯವಾಗದ ಕಾರಣ ಮನೆ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಹೊಟ್ಟೆಪಾಡಿಗಾಗಿ ಏನ್ನಾದರೂ ಮಾಡಲೇಬೇಕಾದ ಅನಿವಾರ್‍ಯ ನಾನು ಮತ್ತು ಕುಟುಂಬದವರು ಊರು ಬಿಟ್ಟು ಊರು ಅಲೆಯುವ ಹಾಗೇ ಮಾಡಿದೆ.

ನನ್ನ ಕುಟುಂಬದಲ್ಲಿ ನಾನು, ಅಪ್ಪ, ಅಮ್ಮ ಹಾಗೂ ನನ್ನ ತಮ್ಮ ಇದ್ದೇವೆ. ಎಲ್ಲರು ಮನೆ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದೇವೆ.

ಮೊದಲ ಬಾರಿಗೆ ಬೆಂಗಳೂರು ಪ್ರವೇಶಿಸಿದಾಗ ಯಾವುದೋ ಒಂದು ಪ್ರಪಂಚಕ್ಕೆ ಕಾಲಿಟ್ಟಂತೆ ಭಾಸವಾಗಿತ್ತು. ಇಲ್ಲಿನ ಜನತೆ, ಇಲ್ಲಿನ ಭಾಷೆ ಎಲ್ಲವು ವಿಚಿತ್ರವೆನಿಸಿತ್ತು. ಬದುಕುವ ತುಡಿತವಿದ್ದ ಕಾರಣ ಇದ್ಯಾವುದು ಕಠಿಣವೆನಿಸಲಿಲ್ಲ.

ಭಾಷೆ ಗೊತ್ತಿಲ್ಲದ ಊರಿಗೆ ಬಂದು ಭಾಷೆ ಕಲಿತು, ನೆಲೆಸಲು ಸರಿಯಾದ ಗುಡಿಸಲಿಲ್ಲದೆ ಪರದಾಡಿದ ದಿನಗಳಿಗೆ ಲೆಕ್ಕವಿಲ್ಲ. ಇವುಗಳ ಜೊತೆಗೆ ಮೇಸ್ತ್ರಿ ಹಾಗೂ ಮಾಲೀಕನ ಬೈಗುಳಗಳು ಜೀವನದ ಒಂದೊಂದು ಪಾಠಗಳನ್ನು ಹೇಳಿಕೊಟ್ಟಿವೆ.

ಬೆಂಗಳೂರು ಮಾತ್ರವಲ್ಲ ಬೇರೆಲ್ಲೇ ಮನೆ ಕಟ್ಟುವ ಕೆಲಸವಿದ್ದರೂ ನಾವು ಸಿದ್ಧ.  ನನಗೆ ಅಷ್ಟು ಇಷ್ಟು ಕನ್ನಡ ಬರುವ ಕಾರಣ ಹೇಗೋ  ಜೀವನ ಸಾಗಿಸುತ್ತಿದ್ದೇವೆ. ಮನೆಯ  ಮಾಲೀಕನಿಗೆ ಮನೆ ನಿರ್ಮಾಣವಾಗುವವರೆಗೆ ನೆಮ್ಮದಿ ಇರುವುದಿಲ್ಲ. ಆದರೆ ನಮಗೆ ಪ್ರತಿದಿನ ನೆಮ್ಮದಿಯನ್ನು ಹುಡುಕುವ ಸವಾಲು.

ಬದುಕಿನಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ತೆಗೆದುಕೊಂಡಾಗ ಮಾತ್ರ ಮುನ್ನಡೆಯಲು ಸಾಧ್ಯ. ಮನೆ ನಿರ್ಮಾಣದ ಜಾಗದಲ್ಲೇ ಸಣ್ಣ ಗುಡಿಸಲು ನಿರ್ಮಿಸಿ ಕುಟುಂಬದ ಜತೆ ಇರುತ್ತೇನೆ.  ಕೆಲವೊಮ್ಮೆ ಈ ಊರೂ ಬೇಡ, ಈ ಕೆಲಸವೂ ಬೇಡವೆಂದು ಅನಿಸಿದೆ. ಅದರೆ ಅವುಗಳನ್ನು ಮನಸ್ಸಿನಿಂದ ತೆಗೆದುಹಾಕದೇ ಇದ್ದರೆ ಜೀವನ ಸಾಗಿಸಲು ಕಷ್ಟಪಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.