ADVERTISEMENT

ಕ್ಷಣ ಕರಗುವ ಮುನ್ನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST
ಕ್ಷಣ ಕರಗುವ ಮುನ್ನ
ಕ್ಷಣ ಕರಗುವ ಮುನ್ನ   

ಸದಾ ಜನರಿಂದ ತುಂಬಿರುವ ಬ್ರಿಗೇಡ್ ರಸ್ತೆಯ ಅಂದವನ್ನು ಆಸ್ವಾದಿಸುತ್ತ ಐಸ್‌ಕ್ರೀಮ್ ಮೆಲ್ಲುವ ಮಜ ಹೇಗಿರುತ್ತದೆ? ಶಾಪಿಂಗ್ ಮಾಡಿ ದಣಿದ ನಂತರ ಒಂದೆಡೆ ಕುಳಿತು ಹೀಗೆ ದಣಿವಾರಿಸಿಕೊಳ್ಳಲೆಂದೇ ಅಂತರರಾಷ್ಟ್ರೀಯ ಐಸ್‌ಕ್ರೀಂ ಬ್ರಾಂಡ್ ‘ಬಾಸ್ಕಿನ್ ರಾಬಿನ್ಸ್’ ನೂತನ ಮಳಿಗೆ ತೆರೆದಿದೆ.

 ಶುದ್ಧ ಹಾಲನ್ನು ಮಾತ್ರ ಉಪಯೋಗಿಸಿ ಪಡೆಯುವ ಐಸ್‌ಕ್ರೀಮ್‌ಗಳಲ್ಲಿ 4000ಕ್ಕೂ ಹೆಚ್ಚು ಸ್ವಾದ ವೈವಿಧ್ಯಗಳಿದ್ದು ಪ್ರತಿ ಮಳಿಗೆಯಲ್ಲೂ ಕನಿಷ್ಠ 31 ಸ್ವಾದಗಳಾದರೂ ಇರುತ್ತವೆ. ಮಳಿಗೆಯೊಳಗೆ ಕಾಲಿಟ್ಟ ಪ್ರತಿಯೊಬ್ಬರಿಗೂ ಇಷ್ಟವಾಗುವ ಸ್ವಾದಗಳ ಶ್ರೇಣಿಯಲ್ಲದೆ ಪ್ರತಿ ತಿಂಗಳೂ ನೂತನ ಸ್ವಾದವನ್ನು ಪರಿಚಯಿಸುವುದು ಬಾಸ್ಕಿನ್ ರಾಬಿನ್ಸ್‌ನ ವೈಶಿಷ್ಟ್ಯ ಎನ್ನುತ್ತಾರೆ ದಕ್ಷಿಣ ಭಾರತ ವಲಯ ಮುಖ್ಯಸ್ಥರಾದ ರಿಜೊಯ್ ಪ್ರಭಾಕರ್.

 ಇಂಗ್ಲಿಷ್ ಟಾಫಿ, ಮೂಸ್ ಅನುಭವ ನೀಡುವ ಚಾಕೊಲೇಟ್ ಚಿಪ್, ನೈಜ ಹಣ್ಣಿನ ತುಣುಕುಗಳು ಜೆಲ್ಲಿ ತುಣುಕುಗಳಿರುವ ಫ್ರೂಟ್ ಓವರ್‌ಲೋಡ್, ಬಬಲ್‌ಗಮ್‌ನ ಸ್ವಾದದ ಮಜ ನೀಡುವ ಟಾಪಿಂಗ್‌ಗಳು, ಅಪರೂಪದ ಸೀತಾಫಲ ಸ್ವಾದಗಳೆಲ್ಲ ಆಯ್ಕೆಗೆ ಲಭ್ಯ.

ಇಲ್ಲಿ ಒಂದು ಕೊಂಡರೆ ಒಂದು ಉಚಿತ ಎಂಬ ಆರಂಭಿಕ ಆಕರ್ಷಕ ಕೊಡುಗೆಯೂ ಇದೆ. ಇಷ್ಟದ ಸ್ವಾದವನ್ನು ಮನೆಗೇ ತಲುಪಿಸುವ ಯೋಜನೆಯೂ ಇಲ್ಲಿದೆ ಎನ್ನುತ್ತಾರೆ ವಿತರಕ ವಿನೋದ್ ಲುಂಕೆಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.