ಕಲಾಸಿಂಧು ನೃತ್ಯ ಶಾಲೆ ಇತ್ತೀಚೆಗೆ ಆಯೋಜಿಸಿದ್ದ ನಿರಂತರ ನೃತ್ಯ ಕಾರ್ಯಕ್ರಮದಲ್ಲಿ ದೆಹಲಿಯ ಸ್ವಪ್ನ ಸುಂದರಿ ಅವರು ನಡೆಸಿಕೊಟ್ಟ ವಿಲಾಸಿನಿ ನೃತ್ಯ ಆಕರ್ಷಣೀಯವಾಗಿತ್ತು.
ಸ್ವಪ್ನ ಅವರು ವಾಸುಮತಿ ಸೀತಾರಾಮಯ್ಯ, ವೇಮಪತ್ತಿ ಚಿನ್ನಸತ್ಯಂ ಅವರ ಬಳಿ ಕೂಚಿಪುಡಿ ಅಭ್ಯಾಸ ಮಾಡಿದ್ದಾರೆ.
ಸಪ್ತಸ್ವರ ಸಮಾಯುಕ್ತ ಪ್ರನ್ವಹಂ ಶ್ಲೋಕದೊಂದಿಗೆ ನೃತ್ಯ ಆರಂಭಿಸಿ ವಿನಾಯಕ ಸ್ತುತಿಯೊಂದಿಗೆ ಮುಂದುವರೆಸಿದ ರೀತಿ ಮನೋಘ್ನವಾಗಿತ್ತು. ಕೃಷ್ಣನ ವಿವಿಧ ರೂಪಗಳ ವರ್ಣನೆ ಹಾವ ಭಾವ ವಿಶೇಷವಾಗಿ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.