ADVERTISEMENT

ಗಾನ ನಾಟ್ಯ ರಸಧಾರೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಗರದ ಹೋಲಿ ಟ್ರಿನಿಟಿ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ‘ರೋಶ್ನಿ ಸ್ಪಾರ್ಕ್ಸ್ ಲೈಫ್‌’ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ನೃತ್ಯ, ಹಾಡು ಹಾಗೂ ಫ್ಯಾಷನ್‌ ಶೋ ಪ್ರೇಕ್ಷಕರನ್ನು ರಂಜಿಸಿದವು. ಸಾಮಾಜಿಕ ನೆರವು ನೀಡುವ ಉದ್ದೇಶದಿಂದ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಭರತನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅದೇ ಶೈಲಿಯ ‘ವೈಷ್ಣವ ಜನತೊ’ ಸಂಗೀತಕ್ಕೆ ಮಕ್ಕಳು ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ‘ಗಂಗ್ನಮ್ ಸ್ಟೈಲ್‌’, ‘ಡೋಲಾರೆ’, ‘ಪ್ಯಾರ್ ಕಿ ಏಕ್ ಕಹಾನಿ’ ಜೊತೆಗೆ ‘ಲವ್‌ ದಿ ವೇ ಲೈಫ್‌’, ‘ಯೇ ಶ್ಯಾಮ್‌ ಮಸ್ತಾನಿ’, ‘ರೂಟ್ ನಾ ಜಾನ್’ ಹಾಗೂ ‘ಆಪ್ ಜೈಸೆ ಕೋಯಿ ಮೇರಿ’ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದರು. 
    
ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಫ್ಯಾಷನ್ ಶೋ. ಎರಡು ಸುತ್ತಿನ ರಾ್ಯಂಪ್‌ ವಾಕ್‌ ಇತ್ತು. ಸಾಂಪ್ರದಾಯಿಕ ಮತ್ತು ವಿದೇಶಿ ಸುತ್ತಿನಲ್ಲಿ ಶೇರ್ವಾನಿ ಹಾಗೂ ಬಣ್ಣಬಣ್ಣದ ಸೀರೆಗಳನ್ನು ಧರಿಸಿ ರಾ್ಯಂಪ್‌ ಮೇಲೆ ಯುವಕ–ಯುವತಿಯರು ಹೆಜ್ಜೆ ಹಾಕುತ್ತಿದ್ದಂತೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಗಳೊಂದಿಗೆ ಪ್ರೋತ್ಸಾಹದ ಮಳೆಗರೆದರು.

‘ನಾನು ನಾಲ್ಕನೇ ತರಗತಿಯಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದೇನೆ. ಕಾರ್ಯಕ್ರಮದ ಪರಿಕಲ್ಪನೆಯ ಮೇಲೆ ನೃತ್ಯವನ್ನು ಪ್ರದರ್ಶಿಸಿದ್ದೇನೆ. ಪ್ರೇಕ್ಷಕರೆಲ್ಲರೂ ಉತ್ಸುಕರಾಗಿ ನೋಡಿದ್ದಾರೆ. ಅಲ್ಲದೆ ಈ ರೀತಿಯ ಪ್ರದರ್ಶನಗಳನ್ನು ನೀಡುವುದರಿಂದ ಭಯ ಮತ್ತು ಸಂಕೋಚ ಮನಸ್ಸಿನಲ್ಲಿ ಇರುವುದಿಲ್ಲ’ ಎಂಬುದು ಭರತನಾಟ್ಯ ಪ್ರದರ್ಶಿಸಿದ ಕಾಲೇಜು ವಿದ್ಯಾರ್ಥಿ ರಾಚೆಲ್‌ ರಿಚರ್ಡ್ ಅಭಿಪ್ರಾಯ.

‘ಫ್ಯಾಷನ್‌ ಬಗ್ಗೆ ಅಷ್ಟಾಗಿ ಒಲವಿಲ್ಲದಿದ್ದರೂ ಸಂಸ್ಥೆ ಎಲ್ಲರೂ ಭಾಗವಹಿಸಲು ಒಂದು ವೇದಿಕೆ ಸೃಷ್ಟಿಸಿ, ರಾ್ಯಂಪೊ್ ಮೇಲೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಟ್ಟು, ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದಕ್ಕೆ ಆಯೋಜಕರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು’ ಎನ್ನುತ್ತಾರೆ ಪ್ರೇಕ್ಷಕ ರೂಪ್‌ಷಾ ಚಾವ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT