ಅದೇ ಹಳೆಯ ಧಾರಾವಾಹಿಗಳು, ನೃತ್ಯ, ಸಂಗೀತದ ರಿಯಾಲಿಟಿ ಶೋಗಳಿಂದ ಬೇಸತ್ತಿರುವ ಟಿವಿ ವೀಕ್ಷಕರಿಗೆ ಹೊಸತನ ನೀಡುವಂತೆ `ಎನ್‌ಡಿಟಿವಿ ಗುಡ್‌ಟೈಮ್ಸ~ ಗ್ಲಾಮರ್‌ಭರಿತ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲು ಹೊರಟಿದೆ.
ಕಿಂಗ್‌ಫಿಷರ್ ಕ್ಯಾಲೆಂಡರ್‌ಗೆ ರೂಪದರ್ಶಿಗಳ ಆಯ್ಕೆಯ ವಿವಿಧ ಪ್ರಕ್ರಿಯೆಗಳನ್ನು ಟಿವಿ ಸರಣಿ ರೂಪದಲ್ಲಿ ಸೋಮವಾರ ಪ್ರಸಾರ ಮಾಡುತ್ತಿದೆ.
ಅರಮನೆಗಳ ನಗರ ಉದಯಪುರದಲ್ಲಿ ನಡೆದ ಈ ಮಾಡೆಲ್ ಹಂಟ್‌ನಲ್ಲಿ ರಾಹುಲ್ ಖನ್ನಾ, ಡಿನೊ ಮರಿಯಾ, ಕುನಾಲ್ ಕಪೂರ್, ನೀಲ್ ನಿತಿನ್ ಮುಕೇಶ್, ಮಿಲಿಂದ ಸೋಮನ್, ಅತುಲ್ ಕಸಬೇಕರ್ ತರಹದ ನಟರು, ಪುರುಷ ರೂಪದರ್ಶಿಗಳು ಕಿಂಗ್‌ಫಿಷರ್ ಕ್ಯಾಲೆಂಡರ್‌ಗಾಗಿ ಸುಂದರಿಯರನ್ನು ಆಯ್ಕೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.