ಮಕ್ಕಳಾಟವು ಚೆಂದ. ಆಡುತ್ತಾಡುತ್ತಲೇ ಏನಾದರೂ ಸೃಷ್ಟಿಕ್ರಿಯೆ ಸಾಧ್ಯವಾದರೆ ಇನ್ನೂ ಚೆಂದ. ಬಾಲವನದಲ್ಲಿ ಚಿಣ್ಣರ ಮೇಳ ನಡೆಯುತ್ತಿದೆ. ಮೇ 20ರವರೆಗೆ ಅಲ್ಲಿ ಮಕ್ಕಳ ಶಿಬಿರ.
ಮಣ್ಣಲ್ಲಿ ತನ್ನಿಷ್ಟದ ಆಕಾರ ಮೂಡಿಸಿದ ಖುಷಿಯಲ್ಲಿ ಪುಟ್ಟಿ ಅಲ್ಲಿ ಕಣ್ಣರಳಿಸುತ್ತಾಳೆ. ಯಕ್ಷಗಾನದ ವೇಷ ತೊಟ್ಟ ಬಾಲಕ ವಿಶಾಲಾಕ್ಷ. ಹಿಮಶಿಲ್ಪದ ಹನಿಗಳು ಕರಗಿ ಮುತ್ತಾದಾಗ, ಅದನ್ನು ಪುಟ್ಟ ಬೊಗಸೆ ತುಂಬಿಕೊಳ್ಳುತ್ತದೆ. ಹಣ್ಣಿನಿಂದ ಹಕ್ಕಿಗಳ ಮೂಡಿಸಿದ ಪುಟಾಣಿಗಳಿಗೆ ಸ್ವರ್ಗಸುಖ. ತಾವೇ ಮಾಡಿದ ಬಣ್ಣಬಣ್ಣದ ಕಾಗದದ ಹೂಗಳ ಹಿಡಿದು ನಿಂತವರ ಕುಶಲೋಪರಿ. ಬೇಸಿಗೆ ರಜೆಯನ್ನು ಸಾರ್ಥಕ ಪಡಿಸಿಕೊಳ್ಳಲೆಂದು ಮಕ್ಕಳು ಶಿಬಿರಕ್ಕೆ ಸೇರಿದ್ದಾರೆ. ಸಂಗೀತ, ಕಲೆ, ನೃತ್ಯ ಹೀಗೆ ತಮ್ಮಿಷ್ಟದ ಕ್ಷೇತ್ರದಲ್ಲಿ ಸಾಣೆಗೊಡ್ಡಿಕೊಂಡು ಸುಖ ಪಡೆಯುವ ಅವರೆಲ್ಲ ಮತ್ತೆ ಶಾಲೆ ಶುರುವಾದಾಗ ಎರಡು ಮೆಟ್ಟಿಲು ಎತ್ತರಕ್ಕೆ ಏರಿರುತ್ತಾರೋ ಏನೋ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.