ADVERTISEMENT

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

 ಟೈಟಾನ್-ಡುಕಾಟಿ ಕೈಗಡಿಯಾರ

ದೇಶದ ನಂಬರ್ ಒನ್ ಕೈಗಡಿಯಾರ ಉತ್ಪಾದಕ ಸಂಸ್ಥೆ ಟೈಟಾನ್, ಮೋಟಾರ್‌ಸೈಕಲ್ ಬ್ರ್ಯಾಂಡ್ ಡುಕಾಟಿಯೊಂದಿಗೆ ಭಾರತದಲ್ಲಿ ವಿಶೇಷ ಸರಣಿಯ ಕೈಗಡಿಯಾರಗಳ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದೆ.

ಡುಕಾಟಿ ಸಂಗ್ರಹದಲ್ಲಿ 8 ಬಗೆಯ ಕೈಗಡಿಯಾರಗಳಿವೆ. ಕೇಸ್ ಕನ್ಸ್‌ಸ್ಟ್ರಕ್ಷನ್, ಸ್ಟೀಲ್ ಬಾಡಿ, ಕಾರ್ಬನ್ ಫೈಬರ್ ಡಯಲ್ಸ್ ಮತ್ತು ಆಟೊಮ್ಯೋಟಿಕ್ ಕ್ಯಾಲಿಬರ್‌ಗಳ ಕೈಗಡಿಯಾರಗಳು ಆಕರ್ಷಕವಾಗಿವೆ.

ಈ ಕೈಗಡಿಯಾರಗಳ ದರ ರೂ 22,995ದಿಂದ 26,995. ದಿಲ್ಲಿ, ಮುಂಬೈ, ಬೆಂಗಳೂರಿನ ಆಯ್ದ ಟೈಟಾನ್, ಹೆಲಿಯೋಸ್ ಮಳಿಗೆಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ನೂತನ ಎಲ್‌ಇಡಿ ಟಿ.ವಿ

ADVERTISEMENT

ಟಿಪಿವಿ ಟೆಕ್ನಾಲಜಿ ಇಂಡಿಯಾ ಕಂಪೆನಿಯು ನೂತನ ಎಒಸಿ ಎಲ್‌ಇಡಿ ಟಿ.ವಿ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, ಗುಣಲಕ್ಷಣಗಳನ್ನು ಹೊಂದಿರುವ ಅಲ್ಟ್ರಾ ಸ್ಲಿಮ್ ಟಿ.ವಿ ಬೆಲೆ ರೂ  6999. ರಿಯಲ್ ಕಲರ್ ಎಂಜಿನ್ ತಂತ್ರಜ್ಞಾನ, ಯುಎಸ್‌ಬಿ, ಎಚ್‌ಡಿಎಂಐ ಮತ್ತು ವಿಜಿಎ ಪೋರ್ಟ್‌ಗಳನ್ನು ಒಳಗೊಂಡಿದೆ.

16 ಇಂಚಿನ ಈ ಎಲ್‌ಇಡಿ ಟಿ.ವಿಯು ಡ್ರೀಮ್ ಸರೌಂಡ್ ಸೌಂಡ್ (ಡಿಎಸ್‌ಎಸ್) ತಂತ್ರಜ್ಞಾನವನ್ನೂ ಹೊಂದಿದ್ದು, ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ವ್ಯಯವಾಗುತ್ತದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ವಿನ್ಯಾಸದ ಲೈಟ್
ಮದರ್ ಅರ್ಥ್ ಹೊಸ ವಿನ್ಯಾಸದ ಲೈಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿವಿಧ ಬಣ್ಣ, ಗಾತ್ರ, ಆಕಾರ ಮತ್ತು ವಿನ್ಯಾಸದ ಲೈಟ್‌ಗಳು ಮನೆಯ ಅಂದವನ್ನು ಹೆಚ್ಚಿಸಲಿವೆ.

ಕೋಣೆಯ ಬಣ್ಣಗಳಿಗೆ ತಕ್ಕಂತಹ ತೂಗುವ ಲ್ಯಾಂಪ್‌ಗಳೂ ಇವೆ. ಈ ಸಂಗ್ರಹ ದೊಮ್ಮಲೂರಿನ ಮದರ್ ಅರ್ಥ್ ಮಳಿಗೆಯಲ್ಲಿ ಲಭ್ಯವಿದೆ. ಆರಂಭಿಕ ಬೆಲೆ: ರೂ 275

ಪುರುಷರ ಶೂಗಳ ಸಂಗ್ರಹ

ಅಮೆರಿಕಾದ ಫ್ಲೋರ್ಶಿಮ್ ಕಂಪೆನಿಯು ತಮ್ಮ ನೂತನ ಬ್ರಾಂಡ್‌ನ ಲೆದರ್ ಬ್ರಾಗ್ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪುರಷರ ಶೂಗಳನ್ನು ಉತ್ಪಾದಿಸುವ ಅಂತರರಾಷ್ಟ್ರೀಯ ಕಂಪೆನಿ ಇದಾಗಿದ್ದು ವಿವಿಧ ಬಣ್ಣದ ಶೂಗಳನ್ನು ಪರಿಚಯಿಸಿದೆ. ಅವರವರ ಅಭಿರುಚಿಗೆ ತಕ್ಕಂತೆ ಶೂಗಳನ್ನು ಆಯ್ದುಕೊಳ್ಳುವ ಅವಕಾಶ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.