ADVERTISEMENT

`ಜನಪದ ನಾಯಕ ಡಾ. ರಾಜಕುಮಾರ್...' ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಕನ್ನಡ ಜನಶಕ್ತಿ ಕೇಂದ್ರ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ. ಶನಿವಾರ ಡಾ.ಕೆ. ಮರುಳಸಿದ್ದಪ್ಪ ಅವರಿಂದ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ `ಜನಪದ ನಾಯಕ ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?' ಕೃತಿ ಲೋಕಾರ್ಪಣೆ.

ಡಾ. ರಾಜಕುಮಾರ್ ಅವರು ಸಿನಿಮಾದೊಳಗಿದ್ದು, ಸಿನಿಮಾವನ್ನು ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವ ರೂಪಿಸಿಕೊಂಡು ಬದುಕಿದವರು. ಸ್ವಂತ ಸಾಮರ್ಥ್ಯದಿಂದಲೇ ಎತ್ತರಕ್ಕೇರಿದ ಅವರು ಸಾಮಾಜಿಕವಾಗಿಯೂ ಸಾಧಕರೆನಿಸಿದ್ದಾರೆ. ಹಳ್ಳಿಯಿಂದ ಬಂದ ಸಾಮಾನ್ಯ ಮನುಷ್ಯ ಶ್ರದ್ಧೆ ಮತ್ತು ಸಂಕಲ್ಪದಿಂದ ಹೇಗೆ ಸಾಧನೆ ಮಾಡಬಹುದೆಂಬುದನ್ನು ತೋರಿಸಿದವರು. ರಾಜ್ ಅವರ ವ್ಯಕ್ತಿತ್ವದ ವಿಶ್ವೇಷಣೆಯ ಜೊತೆಗೆ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಸಾದರಪಡಿಸುವ ಮೂರು ಲೇಖನಗಳು ಈ ಪುಸಕ್ತದಲ್ಲಿವೆ. ಅಧ್ಯಕ್ಷತೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ. ಅತಿಥಿಗಳು: ರಾಘವೇಂದ್ರ ರಾಜಕುಮಾರ್, ಸತ್ಯಮೂರ್ತಿ ಆನಂದೂರು, ಕೆ. ಮೋಹನರಾವ್, ಸಿ.ಕೆ. ರಾಮೇಗೌಡ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.