ADVERTISEMENT

ಜಲ ಸಿನಿಮಾ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 19:30 IST
Last Updated 24 ಆಗಸ್ಟ್ 2011, 19:30 IST
ಜಲ ಸಿನಿಮಾ
ಜಲ ಸಿನಿಮಾ   

`ದೇವರ ನೀರನ್ನು ಮಾರಲು ಶುರು ಮಾಡಿದೆಯಾ?~ ಟರ್ಕಿ ದೇಶದ  ಹಿರಿಯ ಮಹಿಳೆಯೊಬ್ಬಳು ಕೇಳುವ ಪ್ರಶ್ನೆ. 

 ` ದೆಹಲಿಯ ಬಗ್ಗೆ ಮಾತ್ರವೇ ಏಕೆ ಕಾಳಜಿ ತೋರುತ್ತೀರಿ? ನಮಗೆ ನೀರು ಬೇಡವೆ? ಅರ್ಧದಷ್ಟು ನಮ್ಮ ಜಾನುವಾರುಗಳು ಬಾಯಾರಿಕೆಯಿಂದ ಸಾಯುತ್ತಿವೆ~  ದೆಹಲಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದ ಅಣೆಕಟ್ಟು ಯೋಜನೆಯಿಂದಾಗಿ ಮುಳುಗಡೆಯಾಗಲಿರುವ ಹಿಮಾಚಲ ಪ್ರದೇಶದ ರೇಣುಕಾ  ಕಣಿವೆಯ ಹೆಣ್ಣುಮಕ್ಕಳ ಮತ್ತೊಂದು ಪ್ರಶ್ನೆ ಇದು.

 ಬೆಂಗಳೂರಿನಲ್ಲಿ ಇಂದಿನಿಂದ ನಡೆಯುವ `ವಾಯ್ಸಸ್  ಫ್ರಂ ದಿ ವಾಟರ್ಸ್~ (ಜಲ ದನಿಗಳು) ಅಂತರ‌್ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿರುವ ಸಾಕ್ಷ್ಯಚಿತ್ರಗಳಲ್ಲಿ ಚಿತ್ರಿತವಾಗಿರುವ ಸಂಭಾಷಣೆಗಳ ತುಣುಕುಗಳು ಇವು.

ಜೀವನದ ಮುಖ್ಯ ಆಧಾರವಾದ ಜೀವ ಜಲ ಇಂದು ಅಪಾಯಕ್ಕೆ ಸಿಲುಕಿದೆ. ರಾಜ್ಯದ  ಉದಾಹರಣೆಯನ್ನೇ ಗಮನಿಸಿ. 12 ಜಿಲ್ಲೆಗಳ 38 ಪಟ್ಟಣ ಹಾಗೂ ಸುಮಾರು 4000 ಗ್ರಾಮಗಳು  ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು  ಎದುರಿಸುತ್ತಿವೆ ಎಂಬುದು ಇತ್ತೀಚಿನ ವರದಿ. ಬೆಂಗಳೂರಿನಲ್ಲಂತೂ ಅನೇಕ ಕುಟುಂಬಗಳು ಖಾಸಗಿ ಸಂಸ್ಥೆಗಳಿಂದ ಕುಡಿಯುವ ನೀರಿನ ಖರೀದಿಗಾಗಿ ತಿಂಗಳಿಗೆ ಸಾವಿರಾರು ರೂಪಾಯಿ ತೆರಬೇಕಾದ ಸನ್ನಿವೇಶವೂ  ಇದೆ.  



ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನಸಮುದಾಯಕ್ಕೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಆರು ವರ್ಷಗಳ ಹಿಂದೆ `ಬೆಂಗಳೂರು ಫಿಲಂ ಸೊಸೈಟಿ~ ವಾರ್ಷಿಕ ಚಿತ್ರೋತ್ಸವ ಆರಂಭಿಸಿತ್ತು. ಇಲ್ಲಿ ಸಾಕ್ಷ್ಯ ಚಿತ್ರಗಳ ಪ್ರದರ್ಶನವಲ್ಲದೆ ಚಿತ್ರೋತ್ಸವದ ಇತರ ಆಕರ್ಷಣೆಗಳು ಚಿತ್ರಕಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ, ಜೊತೆಗೆ ಚಿತ್ರ ನಿರ್ದೇಶಕರು, ಜಲ ತಜ್ಞರು, ತಳಮಟ್ಟದ ಜಲ ಕಾರ್ಯಕರ್ತರ ಜೊತೆ ವಿಚಾರ ವಿನಿಮಯ ಇರುತ್ತದೆ. ನೀರಿಗೆ ಸಂಬಂಧಿಸಿದಂತೆ ಸ್ಥಳೀಯ, ರಾಷ್ಟ್ರೀಯ ಹಾಗೂ ಜಾಗತಿಕ ಆಯಾಮಗಳನ್ನು ಪರಿಚಯಿಸುವಂತಹ ಚಿತ್ರೋತ್ಸವ ಇದು ಎನ್ನುತ್ತಾರೆ ಚಿತ್ರೋತ್ಸವದ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT