ಬದುಕು ಭಾರವಾದಾಗ, ಜೀವನದಲ್ಲಿ ದಾರಿ ಕಾಣದಾದಾಗ, ಭವಿಷ್ಯದ ಮೇಲೆ ಕಾರ್ಮೋಡ ಕವಿದಾಗ, ನಾವು ನಿರೀಕ್ಷೆ ಮಾಡದೇ ಇರುವಾಗ ಅದ್ಭುತವಾದ ಶಕ್ತಿಯೊಂದು ನಮಗೆ ಸರಿಯಾದ ಮಾರ್ಗ ತೋರಿಸುತ್ತದೆ. ಬೆಟ್ಟದಂತಹ ಸಮಸ್ಯೆಗಳು ಕೂಡ ಮಂಜಿನಂತೆ ಕರಗಿ ಹೋಗುತ್ತವೆ, ಸರಳವಾಗಿ ಹೇಳಬೇಕೆಂದರೆ ದೇವರೇ ದಾರಿ ತೋರಿಸುತ್ತಾನೆ. ಹೀಗೆ ಕಾಣದ ಶಕ್ತಿಯ ಅಥವಾ ದೇವರ ಅಸ್ತಿತ್ವವನ್ನು ಅನುಭವದಿಂದ ಕಂಡುಕೊಂಡ ಸತ್ಯವನ್ನು ಸಾರುವ ಅಪರೂಪದ ಕಾರ್ಯಕ್ರಮ ಸತ್ಯಂ ಶಿವಂ ಸುಂದರಂ
ತಮ್ಮ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ವ್ಯಕ್ತಿಗಳು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರ ಸಮಸ್ಯೆಗೆ ಪರಿಹಾರ ಸಿಕ್ಕ ಸ್ಥಳಗಳು, ಅದರ ವಿಶೇಷತೆ, ಐತಿಹ್ಯ, ಸತ್ಯಾಸತ್ಯತೆಗಳನ್ನು ಈ ಕಾರ್ಯಕ್ರಮವು ಒಳಗೊಂಡಿರುತ್ತದೆ. ಜೀವನದ ಬಗ್ಗೆ ಹೊಸ ಆಶಾಭಾವ ಮೂಡಿಸಿ, ಧನಾತ್ಮಕ ಮನೋಭಾವ ಬೆಳೆಸುವ ಈ ಸರಣಿಯಲ್ಲಿ ಮೂಢ ನಂಬಿಕೆಗೆ ಅವಕಾಶವಿಲ್ಲ ಎಂದು ಹೇಳುತ್ತದೆ ಜೀ ಕನ್ನಡ ವಾಹಿನಿ.
ಸಿನಿಮಾ ನಿರ್ದೇಶಕ ಮಹೇಶ್ ರಾವ್ ನಿರ್ದೇಶಿಸುತ್ತಿದ್ದು ರಘು ಶಿವಮೊಗ್ಗ ನಿರೂಪಕರಾಗಿದ್ದಾರೆ. ಸತ್ಯಂ ಶಿವಂ ಸುಂದರಂ ಜೀ ಕನ್ನಡದಲ್ಲಿ ಸೆ.19 ರಿಂದ ಪ್ರತಿ ಸೋಮವಾರ ಮತ್ತು ಮಂಗಳವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.