ಏಪ್ರಿಲ್ 24 ಮೇರುನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನ. ಈ ಪ್ರಯುಕ್ತ ಭಾನುವಾರ (ಏ.22 ) ಸಂಜೆ 5 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಡಾ. ರಾಜ್ ಅವರ ಐತಿಹಾಸಿಕ ಕನ್ನಡ ಚಲನಚಿತ್ರ `ಮಯೂರ~ ಮೊದಲ ಬಾರಿಗೆ ಪ್ರಸಾರವಾಗಲಿದೆ.
1975ರಲ್ಲಿ ತೆರೆಕಂಡ ಈ ಐತಿಹಾಸಿಕ ಚಿತ್ರ 25 ವಾರಗಳ ಯಶಸ್ವಿ ಪ್ರದರ್ಶನ ಕಂಡು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯ ಅಧ್ಯಾಯ ಬರೆಯಿತು.
ಈ ಚಾರಿತ್ರಿಕ ಸಿನಿಮಾದ ಮೂಲಕ ಕರುನಾಡು ಮತ್ತು ಕನ್ನಡಿಗರ ಔದಾರ್ಯವನ್ನು ಎತ್ತಿಹಿಡಿದಿದ್ದಾರೆ. ತನ್ನ ರಾಜ ಮನೆತನಕ್ಕೆ ದ್ರೋಹವೆಸಗಿದ ಪಲ್ಲವರ ಅಟ್ಟಹಾಸವನ್ನು ಮಟ್ಟ ಹಾಕುವುದೇ ಕಥೆಯ ಸಾರಾಂಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.