ADVERTISEMENT

ಜೈನ್ ವಿವಿಯಲ್ಲಿ ಅಭಿನಯ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST
ಜೈನ್ ವಿವಿಯಲ್ಲಿ ಅಭಿನಯ ನಾಟಕೋತ್ಸವ
ಜೈನ್ ವಿವಿಯಲ್ಲಿ ಅಭಿನಯ ನಾಟಕೋತ್ಸವ   

ಜೈನ್ ವಿಶ್ವವಿದ್ಯಾಲಯದ ಭಾಗವಾದ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್, ಜನವರಿ ೫, ೨೦೧೪ರಂದು ಅಭಿನಯ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ರಂಗಭೂಮಿಯಲ್ಲಿ ಆಸಕ್ತಿಯುಳ್ಳ ಉದಯೋನ್ಮುಖ ಕಲಾವಿದರಿಗೆ, ತಂತ್ರಜ್ಞರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೃಷ್ಟಿಯಾದ ಸೃಜನಶೀಲ ವೇದಿಕೆಯೇ ಈ ಅಭಿನಯ ನಾಟಕೋತ್ಸವ. ಅಂದಹಾಗೆ, ಈ ನಾಟಕೋತ್ಸವ ಜಾಗೃತಿ ಥಿಯೇಟರ್‌ನಲ್ಲಿ ನಡೆಯಲಿದೆ.

ಅತ್ಯುತ್ತಮ ಕನ್ನಡ ನಾಟಕಗಳ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸುವ ಸಲುವಾಗಿ ಈ ಬಾರಿಯ ‘ಅಭಿನಯ ನಾಟಕೋತ್ಸವ’ದ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿನ ಅಭಿನಯ ಸರಣಿಗಳಲ್ಲಿ ಅತ್ಯುತ್ತಮ ನಾಟಕವಾಗಿ ಹೊರಹೊಮ್ಮಿದ ಎರಡು ನಾಟಕ ತಂಡಗಳಿಗೆ, ಈ ಬಾರಿಯ ಅಭಿನಯ ಸ್ಪರ್ಧೆಯ ಅಂತಿಮ ಸುತ್ತಿಗೆ ನೇರ ಪ್ರವೇಶ ಒದಗಿಸಲಾಗಿದೆ. ಇವರನ್ನು ಹೊರತುಪಡಿಸಿ, ಪ್ರಾಥಮಿಕ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಉಳಿದ ೨ ನಾಟಕ ತಂಡಗಳಿಗಾಗಿ ಅನ್ವೇಷಣೆ ನಡೆಸಲಾಗುತ್ತದೆ.

ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುವ ನಾಲ್ಕು  ತಂಡಗಳಿಗೆ ಕಳೆದ ಬಾರಿಯ ಬಹುಮಾನದ ಮೊತ್ತವಾದ ರೂ೧ ಲಕ್ಷವನ್ನು, ಅಂತಿಮ ಸ್ಪರ್ಧೆಯ ಮುನ್ನವೇ ತಂಡಗಳ ತಾಲೀಮಿಗಾಗಿ ವಿತರಿಸುತ್ತಿರುವುದು ಈ ಬಾರಿಯ ವಿಶೇಷ. ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ತಂಡಕ್ಕೆ ಅಭಿನಯ ಟ್ರೋಫಿ ಮತ್ತು ಸರ್ಟಿಫಿಕೇಟನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಹನಟ/ನಟಿ, ಅತ್ಯುತ್ತಮ ಹಾಸ್ಯನಟ/ನಟಿ, ಅತ್ಯುತ್ತಮ ರಂಗಸಜ್ಜಿಕೆ, ಅತ್ಯುತ್ತಮ ಬೆಳಕು ಹಾಗೂ ಅತ್ಯುತ್ತಮ ವಸ್ತ್ರವಿನ್ಯಾಸ ಮತ್ತು ಅಲಂಕಾರ ವಿಭಾಗಗಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

ಒಟ್ಟಿನಲ್ಲಿ ನಾಲ್ಕು ಅತ್ಯುತ್ತಮ ತಂಡಗಳ ನಡುವೆ ನಡೆಯುವ ಸ್ಪರ್ಧಾತ್ಮಕ ನಾಟಕೋತ್ಸವಕ್ಕೆ ಈ ಬಾರಿಯ ಅಭಿನಯ ಸಾಕ್ಷಿಯಾಗಲಿದೆ. 1೪ ಡಿಸೆಂಬರ್ ೨೦೧೩ ನೋಂದಣಿಗೆ ಕೊನೆ ದಿನ. ಪ್ರಾಥಮಿಕ ಸ್ಪರ್ಧೆಯು ಡಿಸೆಂಬರ್ ೨೨ರಂದು ನಡೆಯಲಿದೆ.

ಸ್ಥಳ: ಜೈನ್ ವಿಶ್ವವಿದ್ಯಾಲಯ -ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್, ಏಟ್ರಿಯಾ ಟವರ್ಸ್, ಅರಮನೆ ರಸ್ತೆ. ಮಾಹಿತಿಗೆ: ೯೮೮೦೬ ೧೬೦೦೦
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.