ADVERTISEMENT

ತೆಂಗಿನಕಾಯಲ್ಲಿ ಗಣಪ, ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 19:30 IST
Last Updated 10 ಆಗಸ್ಟ್ 2016, 19:30 IST
ತೆಂಗಿನಕಾಯಲ್ಲಿ ಗಣಪ, ತಿಮ್ಮಪ್ಪ
ತೆಂಗಿನಕಾಯಲ್ಲಿ ಗಣಪ, ತಿಮ್ಮಪ್ಪ   

ಶ್ರಾವಣ ಮಾಸ ಬಂದರೆ ವ್ಯಾಪಾರಿಗಳಿಗೆ ಸುಗ್ಗಿ. ಹಾಗೆಯೇ ಕೆಲವರ ಪಾಲಿಗೆ ಆದಾಯ ತಂದುಕೊಡುವ ಮಾಸವೂ ಹೌದು.
ಹಬ್ಬಕ್ಕೆ ಬೇಕಾಗುವ ಅಲಂಕಾರ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಹಣ ಕೊಟ್ಟು ಖರೀದಿಸುತ್ತೇವೆ. ಅವುಗಳನ್ನು ಎಲ್ಲಿ ಮಾಡುತ್ತಾರೆ, ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಮನದಲ್ಲಿ ಮೂಡಿತು.

ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಹೋದಾಗ ಕುತೂಹಲಕ್ಕೆಂದು ಕೇಳಿದ ಈ ಪ್ರಶ್ನೆ ನನ್ನನ್ನು ಟಾಟಾ ಸಿಲ್ಕ್‌ ಫಾರ್ಮ್‌ನ ಶೋಭಾ ಅವರ ಮನೆಯ ಅಂಗಳಕ್ಕೆ ತಂದು ನಿಲ್ಲಿಸಿತು.

ಶೋಭಾ ಅವರು ವರಮಹಾಲಕ್ಷ್ಮಿಗೆ ಅಲಂಕಾರ ಮಾಡಲು ಕೊಳ್ಳುವ ಸಾಮಗ್ರಿಗಳು, ಮದುವೆಗೆ ಬಳಕೆಯಾಗುವ ಪಟ್ಟದ ಗೊಂಬೆ, ಬೀಸಣಿಗೆ, ಅಲಂಕಾರಿಕ ತೆಂಗಿನಕಾಯಿ  ಗೊಂಬೆಗಳನ್ನು ತಯಾರಿಸುತ್ತಾರೆ.

‘17 ವರ್ಷಗಳಿಂದ ಈ ಹವ್ಯಾಸ ಬೆಳೆಸಿಕೊಂಡಿದ್ದೇನೆ. ತೆಂಗಿನಕಾಯಿ ಅಲಂಕಾರ ಮಾಡುವುದರ ಜೊತೆಗೆ ವಿವಿಧ ರೂಪಗಳನ್ನು ನೀಡುತ್ತೇನೆ. ತೆಂಗಿನಕಾಯಿ ನಮ್ಮ ಮನೆಯಲ್ಲಿ ನವಿಲು, ವೆಂಕಟೇಶ್ವರ, ಗಣೇಶ, ಕಮಲ ಸೇರಿದಂತೆ ಹಲವು ರೂಪ ತಳೆಯುತ್ತದೆ’ ಎಂದು ಹೆಮ್ಮೆಯಿಂದ ವಿವರಿಸಿದರು ಶೋಭಾ.

ಛತ್ರಿಗೂ ಅಲಂಕಾರ ಮಾಡುತ್ತೇನೆ. ವೆಲ್ವೆಟ್‌, ಬಣ್ಣಬಣ್ಣದ ಲೇಸ್‌, ಫೆವಿಕಲ್‌ ಬಳಸಿ ಅಲಂಕಾರಿಕ ಗೊಂಬೆಗಳನ್ನು ಮಾಡುತ್ತೇನೆ. ನನ್ನ ಅಮ್ಮ ಈ ಕಲೆಯನ್ನು ನನಗೆ ಕಲಿಸಿಕೊಟ್ಟರು.

ಮನೆಯಲ್ಲಿ ಮಾಡುವ  ಪಟ್ಟದ ಗೊಂಬೆ, ತೆಂಗಿನಕಾಯಿ ಗೊಂಬೆಗಳನ್ನು ಗಾಂಧಿ ಬಜಾರ್‌ನ ನಮ್ಮ ಅಂಗಡಿ ಸೇರಿದಂತೆ, ರಾಜಾಜಿನಗರ, ಮಲ್ಲೇಶ್ವರ, ಜಯನಗರ 4ನೇ ಬ್ಲಾಕ್‌ನ ಅಂಗಡಿಗಳಿಗೆ ಮಾರುತ್ತೇವೆ ಎಂದು ಹೇಳುತ್ತಾರೆ ಅವರು. ಶ್ರಾವಣ ಮಾಸ, ದೀಪಾವಳಿ, ನವರಾತ್ರಿ, ಗೌರಿಗಣೇಶ ಹಾಗೂ ಮದುವೆ  ಸಮಾರಂಭಗಳ ಸೀಜನ್‌ನಲ್ಲಿ ಇವರ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆಯಂತೆ. 

ಸಂಪರ್ಕಕ್ಕೆ 9880322259 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT