ಏಪ್ರಿಲ್, 27, ಶುಕ್ರವಾರ
ಉದಯಬಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಮೊದಲ ಮಹಡಿ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ. ಸಾಮಾನ್ಯ ಪ್ರವೇಶ ಪರೀಕ್ಷೆ ಮಾರ್ಗದರ್ಶನ ತರಗತಿ ಮುಕ್ತಾಯ ಸಮಾರಂಭ. ಅತಿಥಿಗಳು- ಕ್ರಿಯೇಟಿವ್ ಟೀಚಿಂಗ್ ಅಕಾಡೆಮಿಯ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ, ವಿಜಯ ಕಂಪ್ಯೂಟರ್ ತರಬೇತಿ ಕೇಂದ್ರದ ಡಾ. ಕೆ. ಶೇಷಮೂರ್ತಿ, ಅಧ್ಯಕ್ಷತೆ- ಸಂಘದ ಅಧ್ಯಕ್ಷ ಬಿ. ಕೃಷ್ಣ, ಸಂಜೆ 5.
ಶ್ರೀ ಗುರು ಶನೇಶ್ವರ ಸ್ವಾಮಿ ದೇವಾಲಯ ಸೇವಾ ಟ್ರಸ್ಟ್: ಪೈಪ್‌ಲೈನ್ ರಸ್ತೆ, ಮಲ್ಲಸಂದ್ರ, ಟಿ. ದಾಸರಹಳ್ಳಿ. 24ನೇ ವಾರ್ಷಿಕೋತ್ಸವ ಮಹಾ ಕುಂಭಾಭಿಷೇಕದ ಪ್ರಯುಕ್ತ `ಸತ್ಯಶೀಲ ನಲ್ಲತಂಗ ಗೆಜ್ಜೆ ಪೂಜೆ~ ಪೌರಾಣಿಕ ನಾಟಕ ಪ್ರದರ್ಶನ. ರಾತ್ರಿ 9.30.
ಬೆಂಗಳೂರು ರತ್ನ: ನಯನ ಸಭಾಂಗಣ, ಕನ್ನಡ ಭವನ, ಜೆ. ಸಿ. ರಸ್ತೆ. `ಬೆಂಗಳೂರು ರತ್ನ~ 9ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ `ಬೆಂಗಳೂರು ರತ್ನ~ ಕನ್ನಡ ಮಾಸಪತ್ರಿಕೆಯ 8ನೇ ವಾರ್ಷಿಕೋತ್ಸವ. ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್, ಪ್ರಶಸ್ತಿ ಪ್ರದಾನ- ಶಾಸಕ ಎಂ. ಕೃಷ್ಣಪ್ಪ, 8ನೇ ವರ್ಷದ ಪತ್ರಿಕೆ ಬಿಡುಗಡೆ- ಶಾಸಕರಾದ ಡಾ. ಡಿ. ಹೇಮ ಚಂದ್ರಸಾಗರ್, ಅಧ್ಯಕ್ಷತೆ- ಶಾಸಕ ಎಲ್. ಎ. ರವಿಸುಬ್ರಮಣ್ಯ, ಅತಿಥಿಗಳು- ಸಮಾಜ ಸೇವಕ ಕೆ. ಭಾಗೇಗೌಡ, ಧಾರ್ಮಿಕ ಮುಖಂಡ ಪಿ. ವಿಜಯಕುಮಾರ್, ಶಿಕ್ಷಣಾಧಿಕಾರಿ ಕೆ. ಜಿ. ಆಂಜನಪ್ಪ, ಪತ್ರಕರ್ತ ಜೆ. ಎಚ್. ಅನಿಲ್ ಕುಮಾರ್. ಸಂಜೆ 5.30.
ವಿಶ್ವೇಶ್ವರಪುರ ಕಾನೂನು ಕಾಲೇಜು: ಕಾಲೇಜು ಸಭಾಂಗಣ, ಕೆ. ಆರ್. ರಸ್ತೆ, ವಿ. ವಿ. ಪುರಂ. ಕಾಲೇಜು ವಾರ್ಷಿಕೋತ್ಸವ. ಅತಿಥಿಗಳು- ವಕೀಲರ ಸಂಘದ ಕಾರ್ಯದರ್ಶಿ ಎ. ಪಿ. ರಂಗನಾಥ್, ನಟಿ ಶುಭ ಪೂಂಜಾ, ನಟ ಮಿತ್ರಾ, ಅಧ್ಯಕ್ಷತೆ- ಕಾಲೇಜು ಅಧ್ಯಕ್ಷ ನೀಲಕಂಠ ಆರ್. ಗೌಡ. ಅತಿಥಿಗಳು- ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪ ಗೌಡ, ಸಿ. ಮಂಜುನಾಥ್, ಉಪಾಧ್ಯಕ್ಷರಾದ ಪ್ರೊ. ಕೆ. ಮಲ್ಲಯ್ಯ, ಎಚ್. ಎಲ್. ಶಿವಣ್ಣ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ. ಕೆ. ಮಹಾದೇವ್. ಬೆಳಿಗ್ಗೆ 10.
ನ್ಯಾಷನಲ್ ಏರೊಸ್ಪೇಸ್ ಲ್ಯಾಬೊರೇಟರೀಸ್: ಎಸ್. ಆರ್. ವಲ್ಲುರಿ ಸಭಾಂಗಣ, ಪಿ ಬಿ 1779, ಹಳೆ ಏರ್‌ಪೋರ್ಟ್ ರಸ್ತೆ. ಡಾ. ಬಿ. ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಸಿ ಸಿ ಉನ್ನಿಕೃಷ್ಣನ್ ಅವರಿಂದ `ಡಾ. ಅಂಬೇಡ್ಕರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಹೋರಾಟಗಾರ~ ಕುರಿತು ಉಪನ್ಯಾಸ. ಬೆಳಿಗ್ಗೆ 11.
ಧಾರ್ಮಿಕ ಕಾರ್ಯಕ್ರಮಗಳು
ಭೀಮನಕಟ್ಟೆ ಶ್ರಿ ರಾಘವೇಂದ್ರಸ್ವಾಮಿಗಳವರ ಮಠ: ಭೀಮಸೇತು ವೇದಿಕೆ, ದೊಡ್ಡ ಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ. ದಶಮಾನೋತ್ಸವ ಸಮಾರಂಭ ಪ್ರಯುಕ್ತ ಸಂಜೆ 4ಕ್ಕೆ ಹನುಮಾನ್ ಕಿ ಜೈ ಭಜನಾಮಂಡಳಿ, ರಾಘವೇಂದ್ರ ಭಜನಾಮಂಡಳಿಯಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ವೆಂಕಟೇಶ್ ಆಲ್ಕೋಡ್ ಅವರಿಂದ ದಾಸವಾಣಿ.
ತ್ಯಾಗರಾಜ ಗಾನಸಭಾ ಟ್ರಸ್ಟ್: ಶ್ರೀ ವಾಣಿ ವಿದ್ಯಾ ಕೇಂದ್ರ, ನಂ 1246, 4ನೇ ಮುಖ್ಯರಸ್ತೆ, 2ನೇ ಹಂತ, `ಇ~ ಬ್ಲಾಕ್, ರಾಜಾಜಿನಗರ. ಶಂಕರ ಜಯಂತಿ, 41ನೇ ಸಂಗೀತೋತ್ಸವದಲ್ಲಿ ಎಸ್.ಆರ್.ವಿನಯ್‌ಶರ್ವ (ಗಾಯನ), ಎನ್.ಎನ್.ಗಣೇಶ್ ಕುಮಾರ್ (ಪಿಟೀಲು), ಕೆ.ಯು.ಜಯಚಂದ್ರ ರಾವ್ (ಮೃದಂಗ), ಎ.ಎಸ್.ಎನ್.ಸ್ವಾಮಿ (ಖಂಜರಿ) ಸಂಜೆ 6.
ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ, ಕೆ.ಜಿ.ಸುಬ್ರಾಯ ಶರ್ಮಾ ಅವರಿಂದ `ಶ್ವೇತಾಶ್ವತರೋಪನಿಷತ್ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 9.
ಶ್ರಿ ಶುಕ್ಲಯಜುಃಶಾಖಾ ಟ್ರಸ್ಟ್: ನಂ 27, 3ನೇ ಮುಖ್ಯರಸ್ತೆ, ಚಾಮರಾಜಪೇಟೆ. ಯಾಜ್ಞವಲ್ಕ್ಯ ಆಶ್ರಮದ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಕೋಟಿ ಕುಂಕುಮಾರ್ಚನೆ, ಸಾನ್ನಿಧ್ಯ-ದಂಡಪಾಣಿ ದೀಕ್ಷಿತರು, ಸುರೇಶ್ ಪಾಟೀಲ ಅತಿಥಿ-ನ್ಯಾಯಮೂರ್ತಿ ಸುದರ್ಶನ. ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅತಿಥಿಗಳು-ಶಾಸಕ ಜಮೀರ್ ಅಹಮದ್ ಖಾನ್, ರಾಜ್ಯ ಜೆ.ಡಿ.ಎಸ್. ಮಹಿಳಾ ಘಟಕದ ಅಧ್ಯಕ್ಷರು ಜ್ಯೋತಿ ರೆಡ್ಡಿ, ಹರಿಕತೆ-ಹನುಮಾನ್ ದಾಸ್, ಗಮಕ ವಾಚನ-ಸುಂದರಮ್ಮ, ದೇವರ ನಾಮಗಳು-ಸುಭದ್ರಾ ನಾಗರಾಜ್, ಕುರುಕ್ಷೇತ್ರ ನಾಟಕದ ದೃಶ್ಯಾವಳಿ-ಪಿಟಿ.ಕೆ ಕಲಾ ಸಂಸ್ಥೆ, ದಾಸವರೇಣ್ಯ ಕೃಷ್ಣ ರೂಪಕ-ರೂಪ ಕಲಾ ನೃತ್ಯ ಶಾಲೆ.
ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7. 45.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.