ಮಾರ್ಚ್ 13, ಮಂಗಳವಾರ
ಅಬ್ಬಾಸ್ ಖಾನ್ ಮಹಿಳಾ ಪದವಿ ಕಾಲೇಜು: ಓಟಿಸಿ ರಸ್ತೆ, `ಯುನಿರ್ವಸಿಟಿ ಇಂಡಸ್ಟ್ರಿ ಲಿಂಕೇಜ್ ಫಾರ್ ಪ್ರಮೋಟಿಂಗ್ ಹೈಯರ್ ಎಜುಕೇಶನ್~ ಕುರಿತು ರಾಜ್ಯ ಮಟ್ಟದ ಕಾರ್ಯಗಾರ. ಅತಿಥಿ-ಪ್ರೊ. ಎನ್.ಪ್ರಭುದೇವ್. ಬೆಳಿಗ್ಗೆ 10.30.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜು ಅಧ್ಯಾಪಕರ ಸಂಘ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, `ಕನ್ನಡ ಸಾಹಿತ್ಯ ಇತಿಹಾಸ-ಒಂದು ಅವಲೋಕನ~ ರಾಜ್ಯ ಮಟ್ಟದ ವಿಚಾರ ಸಂಕಿರಣ. ಉದ್ಘಾಟನೆ: ಸಂಶೋಧಕ ಪ್ರೊ.ಎಸ್. ಶೆಟ್ಟರ್, ಅತಿಥಿಗಳು: ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಶ್ರೀನಿವಾಸ್, ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರರಾವ್. ಅಧ್ಯಕ್ಷತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನು ಬಳಿಗಾರ್. ನಂತರ ಡಾ.ಕೃಷ್ಣಮೂರ್ತಿ ಹನೂರ (ಹಳೆಗನ್ನಡ ಸಾಹಿತ್ಯ), ಡಾ.ಹಿ.ಶಿ.ರಾಮಚಂದ್ರೇಗೌಡ (ಜಾನಪದ), ಡಾ. ಕೇಶವ ಶರ್ಮಾ (ನಡುಗನ್ನಡ ಸಾಹಿತ್ಯ), ಡಾ.ರಾಜಪ್ಪ ದಳವಾಯಿ (ಆಧುನಿಕ ಸಾಹಿತ್ಯ), ಡಾ.ಎಚ್.ಎಂ. ಮಹೇಶ್ವರಯ್ಯ (ಸಂಶೋಧನೆಯ ಆಶಯಗಳು) ವಿಷಯ ಮಂಡನೆ. ಬೆಳಿಗ್ಗೆ 11.
ಸಾಂಸ್ಕೃತಿಕ ಕಾರ್ಯಕ್ರಮಗಳು
ವಿ.ಕೆ.ಎಂ ಕಲಾವಿದರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೌಕರರ ಸಾಂಸ್ಕೃತಿಕ ಸಂಘ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, `ಬಾಬು ಜಗಜೀವನರಾಂ ಸ್ಮಾರಕ ಸಾಂಸ್ಕೃತಿಕ ಕಾರ್ಯಕ್ರಮ~. ಉದ್ಘಾಟನೆ-ಸಿ.ವಿ. ಶ್ರೀನಿವಾಸಯ್ಯ, ಸುಲೋಚನ ಅವರಿಂದ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೋಲಾಟ. ಧರ್ಮಣ್ಣ ಮತ್ತು ತಂಡದಿಂದ ಕ್ರಾಂತಿ ಗೀತೆಗಳು, ಜಾನಪದ ಗೀತೆಗಳು. ಸಂಜೆ 4.30.
ಚಿನ್ಮಯ ಮಿಷನ್: ರಾಗೀಗುಡ್ಡ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನ, ಜಯನಗರ, ಸ್ವಾಮಿ ಬ್ರಹ್ಮಾನಂದ ಅವರಿಂದ `ಭಗವದ್ಗೀತೆ 13ನೇ ಅಧ್ಯಾಯದ ಕುರಿತು ಪ್ರವಚನ. ಸಂಜೆ 6.30.
ಚಿನ್ಮಯ ಮಿಷನ್: ರಘೋತ್ತಮ ಹಾಲ್, ಆರ್‌ಎಂಎಸ್ ಕಾಲೋನಿ ಸಂಜಯನಗರ, ಕಾಶಿಕಾನಂದ ಅವರಿಂದ ಭಕ್ತಿ ಪ್ರವಾಹ ಕುರಿತು ಪ್ರವಚನ. ಸಂಜೆ 6.30.
ಪ್ರಗತಿ ಗ್ರಾಫಿಕ್ಸ್: ಸಂಸ ಬಯಲು ರಂಗಮಂದಿರ ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯ ಅವರಿಂದ ಡಾ.ಕವಿತಾ ಕೆ. ಅವರ `ಇನ್‌ಫ್ಯಾಕ್ಟ್... ಶಿ~ ಕೃತಿ ಲೋಕಾರ್ಪಣೆ, ಅಧ್ಯಕ್ಷತೆ-ಪತ್ರಕರ್ತ ಅರಕೆರೆ ಜಯರಾಮ್. ಸಂಜೆ 6.
ರಂಗ ಶಂಕರ: 2ನೇ ಹಂತ, ಜೆ.ಪಿ.ನಗರ. ರೂಪಾಂತರ ತಂಡದಿಂದ ಪೂರ್ಣಚಂದ್ರ ತೇಜಸ್ವಿ ಅವರ `ಕರ್ವಾಲೊ~ ನಾಟಕ ಪ್ರದರ್ಶನ. (ರಂಗರೂಪ: ರಾಮಚಂದ್ರ ಮರಾಠೆ, ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು). ಸಂಜೆ 7.30
ಧಾರ್ಮಿಕ ಕಾರ್ಯಕ್ರಮಗಳು
ನೆಲಮಂಗಲ ತಾಲ್ಲೂಕು ತಡಶೀಘಟ್ಟ ಗ್ರಾಮದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ರಾತ್ರಿ ಶಯನೋತ್ಸವ.
ರಿನೈಸನ್ಸ್ ಗ್ಯಾಲರಿ: ನಂ104, ಕನ್ನಿಂಗ್‌ಹ್ಯಾಂ ರಸ್ತೆ. ಮಂಗಳವಾರದಿಂದ (ಮಾ.13ರಿಂದ ಮಾ.17) ಶನಿವಾರದವರೆಗೆ ಕೇರಳ ಮೂಲದ ಕಿಶೋರ್ ರಾಜ ಅವರ ಇತ್ತೀಚಿನ ಕಲಾಚಿತ್ರಗಳ ಪ್ರದರ್ಶನ. ಬೆಳಿಗ್ಗೆ 11ರಿಂದ ಸಂಜೆ 7.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.