ADVERTISEMENT

ನವರಾತ್ರಿ ಕಾರ್ಯಕ್ರಮಗಳು....

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

* ದುರ್ಗಾ ಮಹೇಶ್ವರಮ್ಮ ದೇವಾಲಯ: ಬುಧವಾರ ಬೆಳಿಗ್ಗೆ 7ಕ್ಕೆ  ಅರಿಶಿನ ಅಲಂಕಾರ. ಸಂಜೆ 6.30ಕ್ಕೆ ಎಸ್.ಜಯರಾಮ್ ತಂಡದವರಿಂದ ಪಿಟೀಲು ವಾದನ.
ಸ್ಥಳ: ಕೃಷ್ಣರಾಜಪುರ.

* ಶ್ರೀರಾಜರಾಜೇಶ್ವರಿ ಟೆಂಪಲ್ ಟ್ರಸ್ಟ್: ಬುಧವಾರ ದೇವಿಗೆ ರಾಜಮಾತಂಗಿ ಮತ್ತು ಶ್ರೀನಿವಾಸನಿಗೆ ಶ್ರೀರಾಮ ಅಲಂಕಾರ. ಸ್ಥಳ: ಆಸ್ಟಿನ್ ಟೌನ್. ಬೆಳಿಗ್ಗೆ 7.

* ಶ್ರೀರಾಮ ದೇವಸ್ಥಾನ: ಬುಧವಾರ ಬೆಳಿಗ್ಗೆ 7ಕ್ಕೆ ಅರಿಶಿನ ಅಲಂಕಾರ. ಸಂಜೆ 6ಕ್ಕೆ ತೇಜಸ್ವಿನಿ ಎಂ.ಕೆ. ಮತ್ತು ತಂಡದಿಂದ ಭಕ್ತಿ ಸಂಗೀತ. ಸ್ಥಳ: ಮಾಡಲ್ ಹೌಸ್ ಬ್ಲಾಕ್, ಬಸವನಗುಡಿ.

* ಕೋದಂಡರಾಮ ದೇವಸ್ಥಾನ: ಬುಧವಾರ ಬೆಣ್ಣೆ ಅಲಂಕಾರ. ಸ್ಥಳ: ರಾಮಮಂದಿರ ದೇವಸ್ಥಾನ, ಸಂಪಂಗಿರಾಮ ನಗರ. ಬೆಳಿಗ್ಗೆ 7.

* ಬ್ರಾಹ್ಮಣ ಸಭಾ: ಬುಧವಾರ ನವರಾತ್ರಿ ಸಾಂಸ್ಕೃತಿಕ ಸಿಂಚನ. ಸರಸ್ವತಿ ಸಂಗೀತ ಸಾಹಿತ್ಯ ಸದನದ ಸದಸ್ಯರಿಂದ  ಸಂಗೀತ. ಚಂದ್ರಿಕಾ ಭಜನಾ ಮಂಡಳಿಯಿಂದ ದೇವರನಾಮ ಮತ್ತು ಭಜನೆ. ಉದ್ಘಾಟನೆ: ತಿರುಸ್ವಾಮೀಜಿ. ಅತಿಥಿಗಳು: ಬ.ಲ.ಸುರೇಶ್, ಪರೀಕ್ಷಿತ್. ಅಧ್ಯಕ್ಷತೆ: ಎಚ್.ಎಸ್.ಸುಧೀಂದ್ರ ಕುಮಾರ್. ಸ್ಥಳ: ಗಾಯಿತ್ರಿ ಮಂದಿರ, ಕೆಂಗೇರಿ ಉಪನಗರ. ಸಂಜೆ 6.

* ಬನಶಂಕರಿ ದೇವಸ್ಥಾನ: ಬುಧವಾರ ಬೆಳಿಗ್ಗೆ 7ಕ್ಕೆ ಅರಿಶಿನ ಮತ್ತು ಕುಂಕುಮ ಅಲಂಕಾರ.
ಸ್ಥಳ: ಶ್ರೀರಾಮ ಮಂದಿರ ರಸ್ತೆ, ಸಂಪಂಗಿರಾಮ ನಗರ. 7.30.

* ಕಲ್ಯಾಣ ವೆಂಕಟೇಶ್ವರ ದೇವಾಲಯ ಬುಧವಾರ ಬೆಳಿಗ್ಗೆ ಶೇಷವಾಹನ ಉತ್ಸವ. ಸಂಜೆ 6.30ಕ್ಕೆ ದೀಪಾ ಮತ್ತು ರೂಪಾ ಅವರಿಂದ ಗಾಯನ. ಸ್ಥಳ: ಎಂ.ಎಸ್.ರಾಮಯ್ಯ ರಸ್ತೆ, ಗೋಕುಲ.

* ತಿರುವೆಂಗಡಂ ಟ್ರಸ್ಟ್ ಫಾರ್ ಇಂಡಿಯನ್ ರಿಲೀಜಿಯನ್ ಅಂಡ್ ಮ್ಯಾನೇಜ್‌ಮೆಂಟ್: ಮಂಗಳವಾರ ಶ್ರೀಮದ್ ರಾಮಾಯಣ ಕಾರ್ಯಕ್ರಮದಲ್ಲಿ ಸಂಜೆ 4ಕ್ಕೆ ಶ್ರೀಮದ್ ರಾಮಾಯಣ ಮಹಾತ್ಮೆ ಪಾರಾಯಣ. ಸಂಜೆ 6ಕ್ಕೆ ಉದ್ಘಾಟನೆ: `ರಾಮಾಯಣಚಾರ್ಯ~ ಡಾ.ಕೆ.ಎಸ್. ನಾರಾಯಣಾಚಾರ್ಯ. ಸಂಜೆ 7ಕ್ಕೆ ಶ್ರೀನಿಧಿ  ಕೆ. ಪಾರ್ಥಸಾರಥಿಯವರಿಂದ ಉಪನ್ಯಾಸ.  ಬುಧವಾರ ಬೆಳಿಗ್ಗೆ 6ಕ್ಕೆ ಶ್ರೀಮದ್ ರಾಮಾಯಣ ಪಾರಾಯಣ, ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ಕ್ಕೆ ಶ್ರೀಮದ್ ರಾಮಾಯಣ ಉಪನ್ಯಾಸ.
ಸ್ಥಳ: ಶಾರದ ಪ್ರವಚನ ಮಂದಿರ, ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿ, ಜಯನಗರ ಟಿ ಬ್ಲಾಕ್. ಮಾಹಿತಿಗೆ: 94492 21749.

* ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಪ್ಲಾಟಿನಂ ಜ್ಯೂಬಿಲಿ ಚಾರಿಟಬಲ್ ಟ್ರಸ್ಟ್: ಮಂಗಳವಾರ ಪಿ. ಉನ್ನಿಕೃಷ್ಣನ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ನಾಗೈ ಶ್ರೀರಾಮ್ (ವಯಲಿನ್), ಎ.ಎಸ್.ರಂಗನಾಥನ್ (ಮೃದಂಗ). ಬುಧವಾರ ಬೆಳಿಗ್ಗೆ 8ಕ್ಕೆ ಅಭಿಷೇಕ. ಮಧ್ಯಾಹ್ನ 3ಕ್ಕೆ ಹಲಸೂರು ಸಹಸ್ರನಾಮ ಮಂಡಳಿಯಿಂದ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮ ಪಾರಾಯಣ. ಸಂಜೆ 5ಕ್ಕೆ  ಸುಬ್ರಹ್ಮಣ್ಯ ಗಣಪಾದಿಗಳ್ ಅವರಿಂದ `ರುದ್ರಂ ಚಮಕಂ~ ಪ್ರವಚನ. ಸಂಜೆ 6.30ಕ್ಕೆ ಟಿ.ಎಂ.ಕೃಷ್ಣ ಗಾಯನ. ಪಕ್ಕವಾದ್ಯದಲ್ಲಿ: ಆರ್.ಕೆ. ಶ್ರೀರಾಮ್‌ಕುಮಾರ್ (ವಯಲಿನ್), ಕೆ.ಅನುಪ್ರಕಾಶ್ (ಮೃದಂಗ), ಜಿ.ಗುರುಪ್ರಸನ್ನ (ಖಂಜಿರಾ). ಸ್ಥಳ: ಕಂಚಿ ಶಂಕರಮಠ, ಮಹಾಸ್ವಾಮಿಗಲ್ ಮಾರ್ಗ, 5ನೇ ಮೇನ್, 11ನೇ ಕ್ರಾಸ್, ಮಲ್ಲೇಶ್ವರ.

* ರಾಜರಾಜೇಶ್ವರಿ ದೇವಸ್ಥಾನ:  ಬುಧವಾರ ಬೆಳಿಗ್ಗೆ 6ಕ್ಕೆ ವಿಶೇಷ ಪೂಜೆ. ಸಂಜೆ 6ಕ್ಕೆ ಅರಿಶಿನ ಕುಂಕುಮ ಅಲಂಕಾರ. ಸ್ಥಳ: ನಂ.80/82, 9ನೇ ಅಡ್ಡ ರಸ್ತೆ, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ.

* ಶ್ರೀಮಹೇಶ್ವರಮ್ಮ ದೇವಿ ದೇವಾಲಯ: ಬುಧವಾರ ಸಂಜೆ 6.30ಕ್ಕೆ ಮಹೇಶ್ವರಿ ದೇವಿ ಅಲಂಕಾರ. ಸ್ಥಳ: ಪಂಪ ಮಹಾಕವಿ ರಸ್ತೆ, ಶಂಕರಪುರಂ.

* ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಜನಜಾಗೃತಿ ಸಮಿತಿ: ಬುಧವಾರ ಸಾ.ಶಿ.ಮರುಳಯ್ಯ ಅವರಿಂದ `ಶರನ್ನವರಾತ್ರಿ ಮಹತ್ವ~  ಕುರಿತು ಉಪನ್ಯಾಸ. ಉದ್ಘಾಟನೆ: ಡಿ.ವಿ.ಸದಾನಂದ ಗೌಡ. ನಂತರ ಬಿ.ಎಸ್.ಯಡಿಯೂರಪ್ಪ ಅವರಿಂದ `ರಂಭಾಪುರಿ ಬೆಳಗು~ ವಿಶೇಷ ಸಂಚಿಕೆ ಲೋಕಾರ್ಪಣೆ. ಸ್ಥಳ: ಮಾನವ ಧರ್ಮ ಮಂಟಪ, ಶ್ರೀರಾಮ ಮಂದಿರ, ಆಟದ ಮೈದಾನ, ರಾಜಾಜಿನಗರ. ಸಂಜೆ 6.30.

* ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಸ್ಥಾನ: ಮಂಗಳವಾರ ಬೆಳಿಗ್ಗೆ 8ಕ್ಕೆ ಚಂಡಿಕಾ ಹೋಮ. ಸಂಜೆ 6ಕ್ಕೆ 111 ಕುಂಬಗಳಿಂದ ಮಧು ಮಿಶ್ರಿತ ಕ್ಷೀರಾಭಿಷೇಕ. ಸಂಜೆ 6.30ಕ್ಕೆ ಹಿತೈಷಿ ಧನನ್ ಅವರಿಂದ ಕೂಚಿಪುಡಿ. ಸಂಜೆ 7.30ಕ್ಕೆ ಸೀತಾರಾಮ್ ಮುನಿಕೋಟಿ ಅವರಿಂದ `ಮಹಿಷಾಸುರ ಮರ್ಧಿನಿ~ ಕಥಾ ಕೀರ್ತನ. ಬುಧವಾರ ಬೆಳಿಗ್ಗೆ ವಿಶೇಷ ಅಭಿಷೇಕ. ಸಂಜೆ 6.30ಕ್ಕೆ ದಾತಾರ್ ಇನ್‌ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ಕಲಾವಿದರಿಂದ ಭರತನಾಟ್ಯ (ನಿರ್ದೇಶನ: ಉಷಾ ದಾತಾರ್). ಸ್ಥಳ: ಯಶವಂತಪುರ ಸರ್ಕಲ್ ಬಳಿ.

* ಶ್ರೀ ಸುಂದರ ಆಂಜನೇಯ ಸ್ವಾಮಿ ದೇವಸ್ಥಾನ: ಬುಧವಾರ ಸಂಜೆ 7ಕ್ಕೆ ಫಯಾಜ್ ಖಾನ್ ಅವರಿಂದ `ಭಕ್ತಿ ಸಂಗೀತ~. ಸ್ಥಳ: ಎನ್‌ಆರ್‌ಐ ಬಡಾವಣೆ, ಕಲ್ಕೆರೆ ಹಳ್ಳಿ, ರಾಮಮೂರ್ತಿ ನಗರ.

* ಶ್ರೀ ದುರ್ಗಾ ಪರಮೇಶ್ವರಿ  ಅಮ್ಮನವರ ದೇವಸ್ಥಾನ: ಮಂಗಳವಾರ  ಅರಿಶಿನ-ಕುಂಕುಮ ಅಲಂಕಾರ. ಬುಧವಾರ ನವನೀತ ಅಲಂಕಾರ. ಸ್ಥಳ: ಯಡಿಯೂರು, ಜಯನಗರ 7ನೇ ಬಡಾವಣೆ (ಪಶ್ಚಿಮ). ಬೆಳಿಗ್ಗೆ 7.

* ಶೃಂಗೇರಿ ಶಂಕರ ಮಠ: ಮಂಗಳವಾರ ಬೆಳಿಗ್ಗೆ ಶಾರದೆಗೆ ಮಹಾಭಿಷೇಕ. ಸಂಜೆ 6ಕ್ಕೆ ಲಕ್ಷ್ಮಣ್ ಮತ್ತು ತಂಡದಿಂದ ನಾಗಸ್ವರ. ಬುಧವಾರ ಬೆಳಿಗ್ಗೆ ಬ್ರಾಹ್ಮಿ ಅಲಂಕಾರ. ಸಂಜೆ 6ಕ್ಕೆ ಸಿ.ವರದರಾಜ ಮತ್ತು ತಂಡದಿಂದ ಗಾಯನ. ಸ್ಥಳ: ಶಾರದಾಪೀಠ, ಶಂಕರಪುರ.

* ನಿಮಿಷಾಂಬ ದೇವಸ್ಥಾನ: ಬುಧವಾರ ಬೆಳಿಗ್ಗೆ 7ಕ್ಕೆ ಅರಿಶಿನ ಅಲಂಕಾರ. ಸ್ಥಳ: ನಿಮಿಷಾಂಬ ದೇವಸ್ಥಾನ, ನಂ.526 (ಅಕ್ಕಿಪೇಟೆ ಹತ್ತಿರ), ಓಟಿಸಿ ರಸ್ತೆ.

* ಹರಿದಾಸ ಸೇವಾ ಸಮಿತಿ: ಬುಧವಾರ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ `ಶ್ರೀನಿವಾಸ ಕಲ್ಯಾಣ~ ಪ್ರವಚನ. ಸ್ಥಳ: ರಾಮಮಂದಿರ, 8ನೇ ಕ್ರಾಸ್ ಪಾರ್ಕ್ ರಸ್ತೆ, ಮಲ್ಲೇಶ್ವರ. ಸಂಜೆ 6.30.

ವಾಣಿ ವಿದ್ಯಾ ಕೇಂದ್ರ: ಬುಧವಾರ ಟಿ.ಎಸ್. ಸತ್ಯವತಿ ಅವರಿಂದ ಉದ್ಘಾಟನೆ, `ನವರಾತ್ರ ಕಲಾಸ್ವಾದ~ ಉಪನ್ಯಾಸ. ಪ್ರಶಾಂತ್ ಎನ್.ಆರ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ಪಿಟೀಲು), ಸುಧೀಂದ್ರ ಎಚ್.ಎಸ್. (ಮೃದಂಗ), ಎ.ಎಸ್.ಎನ್.ಸ್ವಾಮಿ (ಖಂಜರಿ). ಸ್ಥಳ: ವಾಣಿ ವಿದ್ಯಾ ಕೇಂದ್ರ, ನಂ.1246, 2ನೇ ಹಂತ, ರಾಜಾಜಿನಗರ. ಸಂಜೆ 6.15.

* ನಾದಬ್ರಹ್ಮ ಪ್ರಾರ್ಥನಾ ಮಂದಿರ: ಬುಧವಾರ ಸಂಜೆ 5ಕ್ಕೆ ರಕ್ಷಾ ಜಯರಾಮ್ ಅವರಿಂದ ಭರತನಾಟ್ಯ. ಸ್ಥಳ: ಆನಂದ ನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಅರಕೆರೆ ಬನ್ನೇರುಘಟ್ಟ ರಸ್ತೆ. ಸಂಜೆ 5.

* ಅಂಬಾಭವಾನಿ ದೇವಾಲಯ ಟ್ರಸ್ಟ್: ಬುಧವಾರ ಬೆಳಿಗ್ಗೆ 7ಕ್ಕೆ ಅರಿಶಿನ ಅಲಂಕಾರ.
ಸ್ಥಳ: ಟೆಲಿಕಾಂ ಬಡಾವಣೆ, ಪೈಪ್‌ಲೈನ್ ವಿಜಯನಗರ, ಮುಖ್ಯ ರಸ್ತೆ.

* ಅಂಜನೇಯ ಸ್ವಾಮಿ ವೆಲ್‌ಫೇರ್ ಅಸೋಸಿಯೇಷನ್: ಮಂಗಳವಾರ ಬೆಳಿಗ್ಗೆ 6ಕ್ಕೆ ಹೋಮ. ಸಂಜೆ 6ಕ್ಕೆ ರೇಣುಕಾ ಯಲ್ಲಮ್ಮ ಅಲಂಕಾರ. ಬುಧವಾರ ಬೆಳಿಗ್ಗೆ ದುರ್ಗಾ ಹೋಮ. ಸಂಜೆ 6ಕ್ಕೆ ವಿಷ್ಣು ಅಲಂಕಾರ. ಸ್ಥಳ; ಚಿನ್ನಯ್ಯನಪಾಳ್ಯ.

* ಕೈಲಾಸನಾಥೇಶ್ವರ ಸ್ವಾಮಿ ದೇವಾಲಯ: ಬುಧವಾರ ಬೆಳಿಗ್ಗೆ 7ಕ್ಕೆ ಅರಿಶಿನ ಅಲಂಕಾರ. ಸಂಜೆ 6ಕ್ಕೆ ಭವಾನಿ ಮಹಿಳಾ ಸಮಾಜದಿಂದ ಭಜನೆ. ಸ್ಥಳ: ನಂ.40, ಈಶ್ವರನಗರ, ಬನಶಂಕರಿ 2ನೇ ಹಂತ.

* ಪದ್ಮಾವತಿ ಕಲಾ ನಿಕೇತನ: ಬುಧವಾರ ಸಂಜೆ 6.30ಕ್ಕೆ ಹಲಸೂರಿನ ಶಿರಡಿ ಸಾಯಿ ಬಾಬಾ ದೇವಸ್ಥಾನದ ಮುಕುಂದ ಮಿತ್ರ ಮಂಡಳಿಯಿಂದ ಭಜನೆ. ಸ್ಥಳ: ನಂ.161/ಬಿ. 2ನೇ ಕ್ರಾಸ್, ಮತ್ತಿಕೆರೆ ಬಡಾವಣೆ. ಸಂಜೆ 6.30.

* ಶಂಕರ ಸೇವಾ ಸಮಿತಿ: ಬುಧವಾರ ಬ್ರಾಹ್ಮಿ ಅಲಂಕಾರ. ಸಂಜೆ 6.30ಕ್ಕೆ ಎಂ.ಎಸ್.ಅನುರಾಧ ಮತ್ತು ತಂಡದಿಂದ ಸಂಗೀತ. ಸ್ಥಳ: ಶಾರದಾಂಬಾ ಸನ್ನಿಧಿ, ಶಾರದಾಂಬಾ ನಗರ, ಜಾಲಹಳ್ಳಿ.

* ಸತ್ಯಗಣಪತಿ ದೇವಸ್ಥಾನ: ಬುಧವಾರ ಶ್ರೀಗಂಧದ ಅಲಂಕಾರ.
ಸ್ಥಳ: ಸತ್ಯನಾರಾಯಣ ಬಡಾವಣೆ, 3ನೇ ಹಂತ, 4ನೇ ವಿಭಾಗ. ಬಸವೇಶ್ವರ ನಗರ. ಬೆಳಿಗ್ಗೆ 7.

* ಬಿಂಬ ಆರ್ಟ್ ಫೌಂಡೇಶನ್: ಬುಧವಾರ ರಸ ಲೋಕ. ಮಿನಿಯೇಚರ್ ಗೊಂಬೆಗಳಲ್ಲಿ ವಸುದೇವ ಮತ್ತು ಗಂಗೆಯ ಪ್ರಸಂಗ ಪ್ರದರ್ಶನ (ಕಲಾವಿದೆ: ದೀಪಿಕಾ ದೊರೈ).
ಸ್ಥಳ: ನಂ.42, ರತ್ನ ವಿಲಾಸ್ ರಸ್ತೆ, ನಾಗಸಂದ್ರ ವೃತ್ತದ ಬಳಿ. ಬಸವನಗುಡಿ. ಬೆಳಿಗ್ಗೆ 11.30, 4, 5.30. 7.

 * ಮಹಾಗಣಪತಿ ದೇವಸ್ಥಾನ ಟ್ರಸ್ಟ್: ಬುಧವಾರ ಅರಿಶಿನ ಕುಂಕುಮ ಅಲಂಕಾರ.
ಸ್ಥಳ: 2ನೇ ಮುಖ್ಯ ರಸ್ತೆ, ಇಟ್ಟಮಡು ಬಡಾವಣೆ. ಬನಶಂಕರಿ 3ನೇ  ಹಂತ, 3ನೇ ಘಟ್ಟ. ಬೆಳಿಗ್ಗೆ 7.

* ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ: ಶರವನ್ನವರಾತ್ರಿ ಉತ್ಸವದಲ್ಲಿ ಬುಧವಾರ ನವಗ್ರಹ ಹೋಮ. ಸ್ಥಳ: ರಾಯರ ಮಠ, ಶೇಷಾದ್ರಿಪುರ ಫ್ಲಾಟ್‌ಫಾರಂ ರಸ್ತೆ. ಬೆಳಿಗ್ಗೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.