`ಅಕಾಡೆಮಿ ಫಾರ್ ಸಿವಿಯರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ~ (ಆಶಾ) ವಿಶೇಷ ಮಕ್ಕಳಿಗೆ ತರಬೇತಿ ಹಾಗೂ ಶಿಕ್ಷಣ ನೀಡುವ ಸಂಸ್ಥೆ. ಇದು ಆಟಿಸಂ ಮಕ್ಕಳ ಶಿಕ್ಷಣ ಹಾಗೂ ಪ್ರಗತಿಗೆ ಶ್ರಮಿಸುತ್ತಿದೆ.
ಈ ಮಕ್ಕಳೂ ಇತರೆ ಮಕ್ಕಳಂತೆ ಚಟುವಟಿಕೆಯಿಂದ ಇರಬಲ್ಲರು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಅವರಿಗೆ ಭರತನಾಟ್ಯ ತರಬೇತಿ ನೀಡಿದೆ. `ಆಶಾ~ ಸಂಸ್ಥೆಯಲ್ಲಿರುವ ವಿಶೇಷ ಮಕ್ಕಳು ಗುರುವಾರ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದ ಹೆಸರು `ನಾಟ್ಯೋಲ್ಲಾಸ~. ವಿಶೇಷ ಮಕ್ಕಳು ನಡೆಸಿಕೊಡುವ ಕಾರ್ಯಕ್ರಮ ಇದಾಗಿರುವುದರಿಂದ ಈ ಭರತನಾಟ್ಯ ಪ್ರದರ್ಶನ ಕೂಡ ಒಂದು ವಿಶೇಷವಾದುದು. ಇದೊಂದು ವಿಭಿನ್ನ ಪ್ರಯತ್ನ.
ಈ ಮಕ್ಕಳಿಗೆ ಭರತನಾಟ್ಯ ಕಲಿಸಿ ಅವರನ್ನು ತರಬೇತುಗೊಳಿಸಿದ್ದು ಆತ್ಮಾಲಯ ಸಂಸ್ಥೆಯ ಡಾ. ಪದ್ಮಜಾ ಸುರೇಶ್. ಜತೆಗೆ ಕೊರಿಯೋಗ್ರಫಿ ಮಾಡಿ ನಿರ್ದೇಶಿಸಿದ್ದಾರೆ. ಆತ್ಮಾಲಯ ಸಂಸ್ಥೆಯ ವಿದ್ಯಾರ್ಥಿಗಳ ಜತೆಗೂಡಿ ಆಶಾ ಸಂಸ್ಥೆಯ 120 ಮಕ್ಕಳು ಕಾರ್ಯಕ್ರಮ ನೀಡಲಿದ್ದಾರೆ.
ಆಟಿಸಂ ಮಕ್ಕಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಅಂದಹಾಗೆ ಆಟಿಸಂ ಮಕ್ಕಳು ನೀಡುತ್ತಿರುವ ಪ್ರಪ್ರಥಮ ಕಾರ್ಯಕ್ರಮ ಇದಾಗಿದೆ. ಶಿಕ್ಷಕರು ಹಾಗೂ ನೃತ್ಯ ನಿರ್ದೇಶಕರು ಸಾಕಷ್ಟು ಪರಿಶ್ರಮ ವಹಿಸಿ ಹಾಗೂ ಆಸ್ಥೆಯಿಂದ ನಿರ್ಮಿಸಿರುವ ಕಾರ್ಯಕ್ರಮ ಇದು.
ಸ್ಥಳ: ಕಿಂಚಾ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ. ಸಂಜೆ 6.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.