ಮೂರು ಬಾರಿ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಿದ್ದ ಸಮಂತಾ, ನಾಗಚೈತನ್ಯ ಜೋಡಿ ನಾಲ್ಕನೇ ಬಾರಿಗೆ ತೆರೆ ಮೇಲೆ ಮಿಂಚಲು ತಯಾರಾಗಿದ್ದಾರೆ.
ನಿಜ ಜೀವನದ ಈ ಮುದ್ದಾದ ಜೋಡಿ ಮದುವೆ ನಂತರ ಒಟ್ಟಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈ ಖುಷಿಯನ್ನು ನಾಗಚೈತನ್ಯ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ತೆಲುಗು ಸಿನಿಮಾವನ್ನು ‘ನೇನು ಕೋರಿ’ ಸಿನಿಮಾ ನಿರ್ದೇಶಕ ಶಿವ ನಿರ್ದೇಶಿಸಲಿದ್ದಾರೆ. ಸಾಹು ಗಣಪತಿ ಮತ್ತು ಹರೀಶ್ ಪೆಡ್ಡಿ ಮಾಲೀಕತ್ವದ ಶೈನ್ ಸ್ಕ್ರೀನ್ ಪ್ರೊಡಕ್ಷನ್ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ.
ಸದ್ಯ ನಾಗಚೈತನ್ಯ ಸವ್ಯಸಾಚಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಜೋಡಿ 2010ರಲ್ಲಿ ತೆರೆಕಂಡ ‘ಏ ಮಾಯೆ ಚೆಸಾವೆ’, ‘ಆಟೋನಗರ್ ಸೂರ್ಯ’, ‘ಮನಂ’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.