ADVERTISEMENT

ನೃತ್ಯ ಚಿಕಿತ್ಸೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST
ನೃತ್ಯ ಚಿಕಿತ್ಸೆ ಕಾರ್ಯಾಗಾರ
ನೃತ್ಯ ಚಿಕಿತ್ಸೆ ಕಾರ್ಯಾಗಾರ   

ಶೃಷ್ಟಿ ಅಭಿನಯ ಕಲಾ ಕೇಂದ್ರ ಇದೇ 10ರಿಂದ ನೃತ್ಯ ಚಿಕಿತ್ಸೆ (ಡ್ಯಾನ್ಸ್ ಥೆರಪಿ) ಕಾರ್ಯಾಗಾರ ಏರ್ಪಡಿಸಿದೆ. ಎಲ್ಲಾ ವಯೋಮಾನದವರೂ ಇಲ್ಲಿ ಪಾಲ್ಗೊಳ್ಳಬಹುದಾಗಿದ್ದು ನೃತ್ಯದ ಮೂಲಕವೇ ಮಧುಮೇಹ, ಬೊಜ್ಜು, ಮಾನಸಿಕ ಖಿನ್ನತೆ, ರಕ್ತದೊತ್ತಡ ಮೊದಲಾದ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದು  ಆಯೋಜಕರಾದ ಡಾ.ಸತ್ಯನಾರಾಯಣ ಅವರು ತಿಳಿಸಿದ್ದಾರೆ.

ಮನೋಲ್ಲಾಸ ನೀಡುವ ಲಘು ಸಂಗೀತದೊಂದಿಗೆ ಭರತನಾಟ್ಯ, ಕಥಕ್ ಇಲ್ಲವೇ ಜಾನಪದ ನೃತ್ಯಗಳು ಮನಸ್ಸಿನ ಭಾರವನ್ನೂ ಕಡಿಮೆ ಮಾಡಲಿದೆ. `ಪಾಲ್ಗೊಳ್ಳುವವರಿಗೆ ನವಿಲು, ಹಾವು ಮೊದಲಾದ ಪಾತ್ರಗಳನ್ನು ನೀಡಿ ನೃತ್ಯ ಮಾಡಿಸುವುದರಿಂದ ದೇಹದ ಎಲ್ಲಾ ಭಾಗಗಳಿಗೂ ಇದು ವ್ಯಾಯಾಮ ನೀಡುತ್ತದೆ. ಯೋಗಕ್ಕಿಂತಲೂ ಇದು ವಿಭಿನ್ನ~ ಎನ್ನುತ್ತಾರೆ ಡಾ.ಸತ್ಯನಾರಾಯಣ.

ಈ ಕಾರ್ಯಾಗಾರ ಇದೇ 10ರಿಂದ ಹನುಮಂತನಗರದ 5ನೇ ಅಡ್ಡರಸ್ತೆಯ (ಗಣೇಶ ಭವನದ ಸಮೀಪ) ಕಲಾ ಕೇಂದ್ರದಲ್ಲಿ ನಡೆಯಲಿದೆ. ಆಸಕ್ತರು ಸಂಪರ್ಕಕ್ಕೆ: 9845698089

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.