ADVERTISEMENT

ಪಿಕ್ಚರ್‌ ಪ್ಯಾಲೆಸ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಚಿತ್ರ ಸತೀಶ್‌ ಬಡಿಗೇರ್‌
ಚಿತ್ರ ಸತೀಶ್‌ ಬಡಿಗೇರ್‌   

ಆ ಮಗುವಿಗೆ ಸಿಂಹದ ಮೀಸೆಯನ್ನೇ ತೀಡುವಷ್ಟು ಧೈರ್ಯವೇ ಎಂದು ಪಕ್ಕದ ಹುಡುಗಿ ಹಲ್ಲು ಕಿಸಿದು ನೋಡಿದಳು! ಬಾಯ್ತೆರೆದು ನಿಂತಿದ್ದ ಸಿಂಹದ ಬಾಯೊಳಗೆ ಬೆರಳು ಹಾಕಲು ಮುಂದಾದರು ಆ ಅಪ್ಪ ಮಕ್ಕಳು... ಇಷ್ಟುದ್ದ ದಂತದ ಒಂಟಿ ಸಲಗಕ್ಕೆ ಮುಖಾಮುಖಿಯಾಗಿ ನಿಂತು ಅವರೆಲ್ಲರೂ ಕ್ಯಾಮೆರಾ ಕ್ಲಿಕ್ಕಿಸಿದರು!

ಘೇಂಡಾ ಮೃಗ, ನೀರಾನೆ, ಪಾಂಡಾ, ಗರಿ ಬಿಚ್ಚಿದ ಬಿಳಿ ನವಿಲು, ರೆಂಬೆಯಂತಹ ಕೋಡುಗಳ ಆ ವಿಚಿತ್ರ ಪ್ರಾಣಿ, ಡಾಲ್ಫಿನ್‌... ಊಹೂಂ... ಮಕ್ಕಳೂ, ದೊಡ್ಡವರೂ ಅವುಗಳನ್ನೆಲ್ಲ ಸವರಿಕೊಂಡೇ ಹೋಗುತ್ತಿದ್ದರು. ಇಂತಹ ಪ್ರಾಣಿ ಲೋಕ ನಗರದಲ್ಲಿ ಎಲ್ಲಿದೆ ಎಂದುಕೊಂಡಿರಾ? ನಗರದ ಬಿನ್ನಿ ಮಿಲ್ಸ್ ಮೈದಾನದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ವಿವಿಧ ರೋಬೊಟ್ ಪ್ರಾಣಿಗಳ ಪ್ರದರ್ಶನದಲ್ಲಿ ಕಂಡು ಬಂದ ನೋಟಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದವರು ಸತೀಶ್ ಬಡಿಗೇರ್

**

ADVERTISEMENT

**

**

**

**

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.