ADVERTISEMENT

ಪುಟಾಣಿಗಳ ಫ್ಯಾಷನ್‌ ಶೋ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಮಕ್ಕಳು
ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಮಕ್ಕಳು   

ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ರೂಪದರ್ಶಿಗಳಂತೆ ಮಿಂಚಿದ ಪುಟಾಣಿಗಳು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಟ್ಟೆಗೆ ತಕ್ಕ ಕೇಶ ವಿನ್ಯಾಸ, ಅದಕ್ಕೊಪ್ಪುವ ಆಭರಣಗಳನ್ನು ತೊಟ್ಟುಕೊಂಡಿದ್ದ ಮಕ್ಕಳು, ನಗುಮೊಗದೊಂದಿಗೆ ಹೆಜ್ಜೆ ಹಾಕುವ ಮೂಲಕ, ಫ್ಯಾಷನ್‌ ಜಗತ್ತಿನ ಹಾವ ಭಾವಗಳನ್ನು ಪ್ರದರ್ಶಿಸಿದರು.

ಹಾಪ್‌ಸ್ಕಾಚ್‌ ಸಂಸ್ಥೆ ಆಯೋಜಿಸಿದ್ದ ಫ್ಯಾಷನ್‌ ವೀಕ್‌ ಕ್ಯಾಟ್‌ವಾಕ್‌ನಲ್ಲಿ ಹತ್ತಾರು ಮಕ್ಕಳು ಭಾಗವಹಿಸಿದ್ದರು. ಈಗಾಗಲೇ ಆನ್‌ಲೈನ್‌ ತಾಣದ ಮೂಲಕ ಪ್ರಸಿದ್ದಿ ಪಡೆದುಕೊಂಡಿರುವ ಈ ಸಂಸ್ಥೆ ಪ್ರತಿದಿನ ಹೊಸತನ ಕಾಪಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿತು.

ADVERTISEMENT

ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಪೋಷಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಉಡುಗೆಗಳನ್ನು ತಯಾರಿಸುವುದಾಗಿ ಸಂಸ್ಥೆ ಪ್ರಕಟಿಸಿತು. ಆಧುನಿಕ ಉಡುಗೆಗಳನ್ನು ಕೈಗೆಟುಕುವ ದರದಲ್ಲಿ ನೀಡುವ ಬಗ್ಗೆ ಸಾಕಷ್ಟು ಮಾಹಿತಿ ನೀಡಿತು.

ಪುಟಾಣಿಗಳು ಮುಗ್ಧ ನಡಿಗೆಯ ಮೂಲಕ ನೆರೆದವರನ್ನು ರಂಜಿಸಿದರು. ಓವರ್‌ ದಿ ರೈನ್‌ಬೊ ಸಂಗ್ರಹಗಳನ್ನು ತೊಟ್ಟುಕೊಂಡಿದ್ದ ಮಕ್ಕಳು ಅದಕ್ಕೆ ತಕ್ಕಂತೆ ರ‍್ಯಾಂಪ್‌ ಮೇಲೆ ನಡೆದರು. ಕಾಮನಬಿಲ್ಲಿನ ಬಣ್ಣದ ಬಟ್ಟೆಗಳು ಹೆಚ್ಚು ಆಕರ್ಷಕವಾಗಿದ್ದವು. ಕೈಯಲ್ಲಿ ಛತ್ರಿಗಳನ್ನು ಹಿಡಿದು ನಡೆದರು. ಮಿನಿ ಸಂಗ್ರಹ ಎಲೆಕ್ಟ್ರಿಕ್‌ ಗ್ರೇ ಮತ್ತು ಗ್ಲಾಮರಸ್‌ ರೇನ್‌ಬೊ ಬೈಟ್ಸ್ ಉಡುಗೆಗಳನ್ನು ಕೂಡ ಧರಿಸಿ ಗಮನ ಸೆಳೆದರು.

ಹಾಪ್‌ಸ್ಕಾಚ್‌ ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬಗೆಯ ಸ್ಟೈಲಿಷ್‌ ಉಡುಗೆಗಳನ್ನು ವೆಬ್‌ಸೈಟ್ ಮೂಲಕ ಪ್ರದರ್ಶಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಮಕ್ಕಳ ಪ್ಯಾಷನ್‌ ಟ್ರೆಂಡ್‌ಗೆ ಇದು ಹೊಸ ಆಯಾಮ ನೀಡಿದೆ.

ಬಾಲಿವುಡ್‌ ನಟಿ ಹಾಗೂ ನಿರ್ಮಾಪಕಿ ತಾರಾ ಶರ್ಮಾ ಅವರು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ತಮ್ಮ ಮುದ್ದಾದ ಮಕ್ಕಳೊಂದಿಗೆ ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ನಡೆದು ಅವರು ಪುಳಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.