ADVERTISEMENT

ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಕನ್ನಡ ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್: ಕುವೆಂಪು ಸಭಾಂಗಣ, 3ನೇ ಮಹಡಿ, ಕನ್ನಡ ಸಾಹಿತ್ಯ ಪರಿಷತ್‌. ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರ ‘ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು’ ಕೃತಿ ಲೋಕಾರ್ಪಣೆ ಸಮಾರಂಭ.

ಪುಸ್ತಕ ಲೋಕಾರ್ಪಣೆ: ಹೈದರಾಬಾದ್‌ ಕೇಂದ್ರೀಯ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್‌.ನಾಗರಾಜು. ಕೃತಿ ಪರಿಚಯ: ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಅಧ್ಯಕ್ಷತೆ: ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ. ಸಂಜೆ 5.30.

ಜಯಂತ್ ಸ್ವಾಮಿ ಕಾದಂಬರಿ ಬಿಡುಗಡೆ
ಕೋರಮಂಗಲದ ಲ್ಯಾಂಡ್‌ಮಾರ್ಕ್ ಪುಸ್ತಕ ಮಳಿಗೆ ವತಿಯಿಂದ ಲೇಖಕ ಜಯಂತ್ ಸ್ವಾಮಿ ಅವರ ಕಾದಂಬರಿ ‘ಕಲರ್ಸ್‌ ಇನ್ ದಿ ಸ್ಪೆಕ್ಟ್ರಮ್’ ಶುಕ್ರವಾರ ಬಿಡುಗಡೆಯಾಗಲಿದೆ. ಚಿತ್ರನಟ ಅನಂತನಾಗ್ ಅವರು ಕಾದಂಬರಿ ಬಿಡುಗಡೆ ಮಾಡಿದ ನಂತರ ಲೇಖಕರೊಂದಿಗೆ ಓದುಗರ ಸಂವಾದ. ಸಮಯ: ಸಂಜೆ 6.30.

ಬೆಂಗಳೂರಿನವರೇ ಆದ ಜಯಂತ್ ಸ್ವಾಮಿ ಈಗ ಅಮೆರಿಕ ನಿವಾಸಿ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಮುಗಿಸಿ ಕಳೆದೆರಡು ದಶಕಗಳಿಂದ ಕಾರ್ಪೊರೇಟ್ ತರಬೇತುದಾರ, ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್, ಟೆಕ್ನಾಲಜಿ ಮ್ಯಾನೇಜರ್, ಫೈನಾನ್ಷಿಯಲ್ ಪ್ಲಾನರ್ ಮತ್ತು ಬಿಸಿನೆಸ್ ಸ್ಕೂಲ್‌ಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಜಯಂತ್ ಸ್ವಾಮಿ ವಿರಾಮದ ವೇಳೆಯನ್ನು ಸ್ವಯಂಸೇವೆಗಾಗಿ ಮೀಸಲಿಡುತ್ತಾರೆ. ಜಯಂತ್ ಸ್ವಾಮಿ ಅವರಿಗೆ ಬಾಲ್ಯದಿಂದಲೂ ಅಕ್ಷರ ಮೋಹ. ಈ ಮೂರನೇ ಕೃತಿ ಬಿಡುಗಡೆಯಾಗುವಷ್ಟರಲ್ಲಿ ಹೊಸ ಕಾದಂಬರಿ `ಫ್ಯಾಮಿಲಿ ಸೀಕ್ರೆಟ್ಸ್'ನಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.